Last Updated:
ಟಾಕ್ಸಿಕ್ ಚಿತ್ರದ ಟ್ರೈಲರ್ ನೋಡಿದ ಶಿವಣ್ಣ ಮಂತ್ರಮುಗ್ಧಗೊಂಡಿದ್ದರು. ಇದೇನೂ ಅಲ್ಲ, ಇಡೀ ಚಿತ್ರ ಬೇರೇನೆ ಇದೆ. ಹೀಗೆ ನಯನತಾರಾ ಹೇಳಿದರು. ಯಾರೆಲ್ಲ ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರ (Toxic Movie) ಎಲ್ಲರಿಗೂ ಶಾಕ್ ಕೊಡುತ್ತದೆ. ಎಮೋಷನ್ಸ್ ನೇರವಾಗಿ ಹೃದಯದ ಒಳಗೆ ಇಳಿಯುತ್ತವೆ. ಅಷ್ಟೊಂದು ನೋವು ಮತ್ತು ಕ್ರೌರ್ಯ ಎಲ್ಲವೂ ಇದೆ. ವಿಷಯ ಕೂಡ ಈ ಚಿತ್ರದಲ್ಲಿದೆ. ಇದನ್ನ ನೋಡಿದ ಶಿವರಾಜ್ ಕುಮಾರ್ (Shiva Rajkumar) ಏನು ಹೇಳಿದರು ಅನ್ನುವ ಕುತೂಹಲ ಸಹಜವೇ ಬಿಡಿ. ಯಾಕೆಂದ್ರೆ, ಶಿವಣ್ಣ (Shivanna) ಈ ಚಿತ್ರದ ಟ್ರೈಲರ್ ರಿಲೀಸ್ (Trailer Release) ಇವೆಂಟ್ ಗೆಸ್ಟ್ ಆಗಿದ್ದರು. ಇವರು ಹೇಳಿದ ಮೊದಲ ಸಾಲು ಹೀಗಿದೆ. “ನಿಮಗೆ ಟ್ರೈಲರ್ ನೋಡಿ ಏನ್ ಅನಿಸ್ತೋ ನನಗೂ ಹಾಗೆ ಅನಿಸ್ತು” ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.














