Last Updated:
ಗಿಲ್ಲಿ ನಟ ತಮ್ಮ ನಾಯಕ ನಟನೆಯ ಮೊದಲ ಚಿತ್ರಕ್ಕೆ 1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನುವ ಸುದ್ದಿ ಇದೆ. ಈ ಒಂದು ವೈರಲ್ ನ್ಯೂಸ್ಗೆ ಗಿಲ್ಲಿ ನಟ ಉತ್ತರ ಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
ಬಿಗ್ ಬಾಸ್ ವಿನ್ನರ್ (Bigg Boss Winner) ಗಿಲ್ಲಿ ನಟ (Gilli Nata) ನಾಯಕರಾಗಿದ್ದಾರೆ. ಪಳಾರ್ ಅಂತ ಈ ಚಿತ್ರಕ್ಕೆ ಹೆಸರೂ ಇಟ್ಟಿದ್ದಾರೆ. ಮುಹೂರ್ತ ಕೂಡ ಆಗಿದೆ. ಗಿಲ್ಲಿ ನಟನ ಜನ್ಮ ದಿನಕ್ಕೇನೆ ಈ ಚಿತ್ರ ಸೆಟ್ಟೇರಿದೆ. ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಪೂಜೆ ಆಗಿದೆ. ಈ ಚಿತ್ರದಲ್ಲಿ ನಟಿಸಲು ಗಿಲ್ಲಿ ನಟ ಅದೆಷ್ಟು ಸಂಭಾವನೆ (Remuneration) ಪಡೆದಿದ್ದಾರೆ ಅನ್ನೋದು ಸದ್ಯದ ಕತೂಹಲವೇ ಅಗಿದೆ. ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನೋದೇ ಈ ಸುದ್ದಿಯ ಒಟ್ಟು ತಿರುಳಾಗಿದೆ. ಅಸಲಿಗೆ ಗಿಲ್ಲಿ ನಟ (Gilli Nata) ಪಡೆಯುತ್ತಿರೋ ಸಂಭಾವನೆ ಎಷ್ಟು.? ಗಿಲ್ಲಿ ನಟ ಹೇಳೋದೇನು? ಈ ಎಲ್ಲ ಪ್ರಶ್ನೆಗಳಿವೆ. ಇದಕ್ಕೆ ಸ್ವತಃ ಗಿಲ್ಲಿ ನಟ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಗಿಲ್ಲಿ ನಟ ಕೊಟ್ಟ ಕ್ಲಾರಿಟಿ ಏನು
ಗಿಲ್ಲಿ ಪಕ್ಕದಲ್ಲಿ ಕುಳಿತ ನಿರ್ಮಾಪಕ ನವೀನ್ ಗೌಡ ಹೇಳಿದ್ದೇನು? ಈ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಬೆಳ್ಳಗ್ಗೆ 7.30ಕ್ಕೆ ಚಿತ್ರದ ಮುಹೂರ್ತ ಆಗಿದೆ. ಇದಾದ್ಮೇಲೆ ಪ್ರೆಸ್ ಮೀಟ್ ಕೂಡ ನಡೆದಿದೆ.
ಗಿಲ್ಲಿ ನಟ ಈ ಪಳಾರ್ ಚಿತ್ರಕ್ಕೆ ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಒಂದು ಸುದ್ದಿ ಮೊನ್ನೆಯಿಂದಲೇ ಇದೆ. ಈ ಹಿನ್ನೆಲೆಯಲ್ಲಿಯೇ ಪತ್ರಕರ್ತರು ಪ್ರಶ್ನೆ ಮಾಡಿದರು.
ಗಿಲ್ಲಿ ನಟನಿಗೆ ಸಂಭಾವನೆ ವಿಚಾರ ಕೇಳಿದಾಗ, ಏನೋ ಹೇಳೋಕೆ ಮುಂದೆ ಬಂದರು. ಆದರೆ, ಪಕ್ಕದಲ್ಲಿದ್ದ ನಿರ್ಮಾಪಕ ನವೀನ್ ಗೌಡ್ರು ಮಧ್ಯೆ ಮಾತನಾಡಿದರು. ಟವಲ್ ಹಾಕಿಕೊಂಡು ನಾವ್, ನಾವೇ ಮಾತನಾಡಿಕೊಳ್ಳೋಣ ಅಂತಲೇ ಹೇಳಿದರು.
ಇದೇ ಮಾತ್ ಅನ್ನೆ ಗಿಲ್ಲಿ ನಟ ರಿಪೀಟ್ ಮಾಡಿದರು. ಇನ್ನೊಂದು ಪಕ್ಕದಲ್ಲಿ ಕುಳಿತ ನಿರ್ದೇಶಕ ಚಂದ್ರಮೋಹನ್ ಕೂಡ ಇದನ್ನೆ ಹೇಳಿದರು. ಟವಲ್ ಹಾಕೊಂಡ್ರು ಮಾತನಾಡ್ತಾರೆ. ಬನ್ನಿ ನೀವೂ ಅಂತಲೇ ಚಂದ್ರಮೋಹನ್ ಅವರು ಪತ್ರಕರ್ತರನ್ನ ಕರೆದಿರೋದು ಇದೆ.
ಟವಲ್ ಹಾಕೊಂಡು ಮಾತಾಡ್ಕೋತಿವಿ
ಈ ಒಂದು ಕುತೂಹಲ ಇದ್ದೇ ಇದೆ. ಚಿತ್ರದ ನಾಯಕಿ ಯಾರ್ ಆಗ್ತಾರೆ ಅನ್ನೋದರ ಸುತ್ತ ಸುದ್ದಿಗಳು ಇದ್ದೇ ಇವೆ. ಕಾವ್ಯ ಶೈವ ಹೆಸರು ಕೇಳಿ ಬರ್ತಿದೆ. ಶ್ರೀಲೀಲಾ ಮ್ಯಾಟರ್ ಕೂಡ ಇದೆ.
ಕಾವ್ಯ ಶೈವ ಮತ್ತು ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿಯೇ ಫೇಮಸ್ ಆಗಿದ್ದಾರೆ. ಇಬ್ಬರ ಜೋಡಿನೂ ಜೋರಾಗಿಯೇ ಸೌಂಡ್ ಮಾಡಿದೆ. ಹಾಗಾಗಿಯೇ ಈ ಹೆಸರು ಕೇಳಿ ಬರ್ತಿದೆ. ಆದರೆ, ಶ್ರೀಲೀಲಾ ವಿಚಾರ ಬರೋಕೆ ಕಾರಣವೂ ಇದೆ.
ಪಳಾರ್ ಗಿಲ್ಲಿ ಚಿತ್ರದ ಮುಹೂರ್ತ ದಿನ ಯಾವುದು ಅಂತ ಹೇಳೋಕೆ ಒಂದು ಪ್ರೋಮೋ ಬಿಟ್ಟಿದ್ದರು. ಇದರಲ್ಲಿ ಡೈರೆಕ್ಟರ್ ಚಂದ್ರಮೋಹನ್ ಇದ್ದರು, ನಿರ್ಮಾಪಕರೂ ಇದ್ದರು.
ಒಂದು ರೀತಿ ಇದು ಇಂಟ್ರಸ್ಟಿಂಗ್ ಆಗಿಯೇ ಇತ್ತು. ಆಗಲೇ ಶ್ರೀಲೀಲಾ ಅವರ ಫೋಟೋ ಕೂಡ ವಿಡಿಯೋದಲ್ಲಿ ಬಂತ್ತು. ಆ ದಿನದಿಂದಲೇ ಗಿಲ್ಲಿ ನಾಯಕರಾದ ಮೊದಲ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಅನ್ನೋ ಸುದ್ದಿ ವೈರಲ್ ಆಗಿತ್ತು.
ಆದರೆ, ಚಿತ್ರದ ಮುಹೂರ್ತದ ದಿನವೇ ಈ ಸುದ್ದಿಗೆ ತೆರೆ ಬಿದ್ದಿದೆ. ನಾಯಕಿ ಇಲ್ಲಿ ಬೇರೆ ಇದ್ದಾರೆ. ಅದು ಸದ್ಯಕ್ಕೆ ಸೀಕ್ರೆಟ್ ಆಗಿಯೇ ಇರಲಿ ಅಂತ ಗಿಲ್ಲಿ ನಟ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka













