Last Updated:
ನಾನು ಎರಡು ಒಳ್ಳೆ ಚಿತ್ರಗಳನ್ನ ಕೊಟ್ಟಿದ್ದೇನೆ. ಒಂದು ಚಿತ್ರ ಆಸ್ಕರ್ ಅಂಗಳಕ್ಕೂ ಹೋಗಿದೆ. ಆದರೆ, ನನ್ನ ಯಾರೂ ನಂಬಲೇ ಇಲ್ಲ ಅಂತಲೇ ಗೀತು ಮೋಹನ್‌ದಾಸ್ ಹೇಳಿಕೊಂಡಿದ್ದಾರೆ. ಆದರೆ, ಯಶ್ ಬಗ್ಗೆ ಇವರ ಅಭಿಪ್ರಾಯ ಬೇರೆ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಡೈಕ್ಟರ್ ಗೀತು ಮೋಹನ್‌ದಾಸ್ (Geetu Mohanda) ಮತ್ತೆ ಎಮೋಷನಲ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲೂ ಕಣ್ಣೀರಾಗಿದ್ದಾರೆ. ಚೆನ್ನೈ ಇವೆಂಟ್ ಅಲ್ಲೂ ಯಶ್ ಬಗ್ಗೆ ಹೇಳಿದ್ದಾರೆ. ನನ್ನ ಯಾರೂ ನಂಬದೇ ಇರೋ ಸಮಯದಲ್ಲಿ ಯಶ್ (Yash) ನನ್ನ ನಂಬಿದ್ದಾರೆ. ನನ್ನ ಕನಸಿಗೆ ರೆಕ್ಕೆ ಆಗಿದ್ದಾರೆ. ಇವರು ಇಲ್ಲದೆ ಇದ್ದರೆ ಟಾಕ್ಸಿಕ್ (Toxic) ಆಗ್ತಾನೇ ಇರಲಿಲ್ಲ ಅನ್ನೋದನ್ನು ಹೇಳಿಕೊಂಡಿದ್ದಾರೆ. ತಮ್ಮ ಈ ಹಿಂದಿನ ಚಿತ್ರಗಳ ಕುರಿತು ನೆನಪು ಮಾಡಿಕೊಂಡಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.














