ಗಾನವಿ ಘಾಟು ಶುರು
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಗಾನವಿ ಮನೆ ಒಳಗೆ ಮಾಸ್ಕ್ ಹಾಕಿಕೊಂಡು ಬಂದ್ದಾರೆ. ಮಾಸ್ಕ್ ತೆಗೆದ ಕೂಡಲೇ ಸಖತ್ ಆಗಿದ್ದಾರೆ ಅಂತ ಯಶಸ್ ಹೇಳಿದ್ದಾರೆ. ಉಳಿದರು ಗಾನವಿ ಅಬ್ಬರವನ್ನ ಗಮನಿಸುತ್ತಿದ್ದಾರೆ.
ಈ ಒಂದು ಮನೆಗೆ ಗಾನವಿ ಹೈಜಾಕರ್ ಆಗಿಯೆ ಬಂದಿದ್ದಾರೆ. ಅದಕ್ಕೇನೆ ಇಬ್ಬರನ್ನು ಹೈಜಾಕ್ ಮಾಡಿದ್ದಾರೆ. ಕಿರಣ್ ಶಾಸ್ತ್ರಿಯನ್ನ ಇಮಿಟೇಟ್ ಮಾಡಿದ್ದಾರೆ.
ಘಾಟಿ ಗಾನವಿ ಹಳ್ಳಿ ಪವರ್ ಅಲ್ಲಿ ಸಖತ್ ಆಗಿಯೇ ಆಡಿದ್ದರು. ಈ ಒಂದು ಶೋದಲ್ಲಿ ಗಾನವಿ ಗೌಡ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದರು.
ಬಿಗ್ ಬಾಸ್ ಸೀಸನ್-13 ರಲ್ಲಿ ಗಾನವಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಇಲ್ಲೂ ಅದೇ ಖದರ್ ಅಲ್ಲಿಯೇ ಆಗಮಿಸಿದ್ದಾರೆ. ಆದರೆ, ಹಳ್ಳಿ ಪವರ್ ಬೇರೆ. ಬಿಗ್ ಬಾಸ್ ಮನೆಯ ಆಟ ಬೇರೆ ಇದೆ. ಇಲ್ಲಿ ಗಾನವಿ ಅಬ್ಬರ ಹೇಗೆ ವರ್ಕ್ ಆಗುತ್ತದೆ ನೋಡ್ಬೇಕು.
ದೊಡ್ಮನೆಗೆ ಗಿಚ್ಚ ಗಿಲಿಗಿಲಿ ಪ್ರಶಾಂತ್ ಎಂಟ್ರಿ ಆಗಿದೆ. ಇವರ ಕಾನ್ಫಿಡೆನ್ಸ್ ಲೆವೆಲ್ ಬೇರೆ ಇದೆ. ಯಾರು ಏನೇ ಹೇಳಿದರು ಸರಿ. ನಾನು ನಗಿಸೋ ಕೆಲಸ ಮುಂದುವರೆಸುತ್ತೇನೆ.
ಗಾನವಿ ಅಟ್ಟಹಾಸ ಶುರು
(ಚಿತ್ರ ಕೃಪೆ: ಗಾನವಿ ಗೌಡ ಇನ್ಸ್ಟಾಗ್ರಾಮ್)
ಇಲ್ಲಿಂದ ನಾನು ಜನರನ್ನ ಎಂಟರ್ಟೈನ್ ಮಾಡುತ್ತೇನೆ ಅಂತ ಹೇಳಿದ್ದಾರೆ. ನಟಿ ಸೋನಿಕಾ ಗೌಡ ಕೂಡ ಬಂದಿದ್ದಾರೆ. ಇವರ ಆಟ ಹೇಗೆ ಅಂತ ನೋಡ್ಬೇಕು. ಇವರು ಒಂದು ರೀತಿ ಘಾಟಿ ಆಗಿಯೆ ಇದ್ದಾರೆ.
ತಾಂಡವ್ ರಾಮ್ ವಾಪಾಸ್ ಬಂದಿದ್ದಾರೆ. ಸುದೀಪ್ ಇವರನ್ನ ಸ್ಟೇಜ್ ಮೇಲೆ ಕರೆದಿದ್ದಾರೆ. ಕಿವಿ ಹಿಂಡಿ ಬುದ್ಧಿ ಹೇಳಿದ್ದಾರೆ. ಚೆನ್ನಾಗಿ ಆಡು ಅಂತ ಬೆನ್ನು ತಟ್ಟಿದ್ದಾರೆ.
ದೊಡ್ಮನೆಯಿಂದ ಈಗ ನಾಲ್ಕು ಜನ ಹೋಗಿದ್ದಾರೆ. ಪ್ರಥಮ ಪ್ರಸಾದ್, ಓಂ ಪ್ರಕಾಶ್ ರಾವ್, ವೈಷ್ಣವಿ ವಿ.ಕೌಂಡಿನ್ಯ, ಅವಿನಾಶ್ ಹೋಗಿದ್ದಾರೆ.
ಆದರೆ, ಇವರು ಹೋದ್ಮೇಲೆ ಇದೀಗ ಮೂರು ಜನ ವೈಲ್ಡ್ ಕಾರ್ಡ್ ಮೂಲಕ ಬಂದಿದ್ದಾರೆ. ತಾಂಡವ್ ರಾಮ್ ವಾಪಾಸ್ ಬಂದಿದ್ದಾರೆ ಅಂತ ಹೇಳಬಹುದು.













