FIFA World Cup: ಸೋಲಿನ ಹತಾಶೆಯಲ್ಲಿ ಅರ್ಜೆಂಟೀನಾ ಆಟಗಾರನ ಮೇಲೆ ದಾಳಿ ಮಾಡಿದ ಇಂಗ್ಲೆಂಡ್ ತಂಡ | ಕ್ರೀಡಾ ಸುದ್ದಿ | ACTPnews

ಅರ್ಜೆಂಟೀನಾ vs ಇಂಗ್ಲೆಂಡ್ ಆಟಗಾರರ ನಡುವೆ ಕಿರಿಕ್


Last Updated:

ಇಂಗ್ಲೆಂಡ್ ಮಣಿಸಿದ ನಂತರ ಅರ್ಜೆಂಟೀನಾ ತಂಡವು ತಮ್ಮ ವಿಜಯವನ್ನು ಆಚರಿಸುತ್ತಿದ್ದಂತೆ, ಕ್ಯಾಮೆರಾಗಳು ಇಂಗ್ಲೆಂಡ್ ಸ್ಟಾರ್ ಮಿಡ್‌ಫೀಲ್ಡರ್ ಜೂಡ್ ಬೆಲ್ಲಿಂಗ್‌ಹ್ಯಾಮ್ ಅರ್ಜೆಂಟೀನಾದ ಬದಲಿ ಆಟಗಾರ ವ್ಯಾಲೆಂಟಿನೋ ಬಾರ್ಕೊ ಅವರ ತಲೆಗೆ ಹೊಡೆಯುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಅರ್ಜೆಂಟೀನಾ vs ಇಂಗ್ಲೆಂಡ್ ಆಟಗಾರರ ನಡುವೆ ಕಿರಿಕ್
ಅರ್ಜೆಂಟೀನಾ vs ಇಂಗ್ಲೆಂಡ್ ಆಟಗಾರರ ನಡುವೆ ಕಿರಿಕ್

2026 ರ FIFA ವಿಶ್ವಕಪ್​ನ 2ನೇ ಸೆಮಿಫೈನಲ್ ಪಂದ್ಯ ಫುಟ್​ಬಾಲ್ ಆಟಕ್ಕಿಂತ ಆಟಗಾರರ ನಡುವಿನ ಕಿತ್ತಾಟ ಜಾಗತಿಕವಾಗಿ ಚರ್ಚೆಯ ವಿಷಯವಾಗಿದೆ. ಗುಂಪು ಹಂತದಿಂದ ಸೆಮಿಫೈನಲ್ ತಲುಪುವವರೆಗೂ ಅದ್ಭುತವಾಗಿ ಆಡಿದ ಇಂಗ್ಲೆಂಡ್, ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ 2-1 ಸೋಲಿನ ನಂತರ ಹೊರಬಿದ್ದಿತು. ಆದರೆ, ಪಂದ್ಯದ ನಂತರ ಆಟಗಾರರ ನಡುವಿನ ಕಿರಿಕ್, ಕೈಕೈ ಮಿಲಾಯಿಸಿದ ಘಟನೆ ಕ್ರೀಡಾ ಮನೋಭಾವವನ್ನು ಹಾಳುಮಾಡಿತು. ಇಂಗ್ಲೆಂಡ್‌ನ ಸ್ಟಾರ್ ಮಿಡ್‌ಫೀಲ್ಡರ್ ಜೂಡ್ ಬೆಲ್ಲಿಂಗ್‌ಹ್ಯಾಮ್ ಅವರ ನಡವಳಿಕೆಯು ಈಗ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ.

ರೆಫ್ರಿ ಗಮನಕ್ಕೆ ಬಾರದ ಘಟನೆ

ಇಂಗ್ಲೆಂಡ್ ಮಣಿಸಿದ ನಂತರ ಅರ್ಜೆಂಟೀನಾ ತಂಡವು ತಮ್ಮ ವಿಜಯವನ್ನು ಆಚರಿಸುತ್ತಿದ್ದಂತೆ, ಕ್ಯಾಮೆರಾಗಳು ಇಂಗ್ಲೆಂಡ್ ಸ್ಟಾರ್ ಮಿಡ್‌ಫೀಲ್ಡರ್ ಜೂಡ್ ಬೆಲ್ಲಿಂಗ್‌ಹ್ಯಾಮ್ ಅರ್ಜೆಂಟೀನಾದ ಬದಲಿ ಆಟಗಾರ ವ್ಯಾಲೆಂಟಿನೋ ಬಾರ್ಕೊ ಅವರ ತಲೆಗೆ ಹೊಡೆದಿರುವುದು ಸೆರೆಯಾಗಿವೆ. ಈ ಘಟನೆ ನಂತರ ಬೆಲ್ಲಿಂಗ್‌ಹ್ಯಾಮ್ ಮತ್ತು ಬಾರ್ಕೊ ನಡುವೆ ಬಿಸಿಯಾದ ವಾಗ್ವಾದ ನಡೆಯಿತು. ತಂಡದ ಸದಸ್ಯರು ಮಧ್ಯಪ್ರವೇಶಿಸಿ ಅವರನ್ನು ಇಬ್ಬರನ್ನ ಬೇರ್ಪಡಿಸಿ ವಾಗ್ವಾದವನ್ನು ಶಮನಗೊಳಿಸಿದರು.

ಕುತೂಹಲಕಾರಿಯಾಗಿ, ಈ ಘಟನೆ ಪಂದ್ಯ ಅಧಿಕಾರಿಗಳ ಗಮನಕ್ಕೆ ಬಾರಲಿಲ್ಲ. ಪರಿಣಾಮವಾಗಿ, ಮೈದಾನದಲ್ಲಿ ಬೆಲ್ಲಿಂಗ್ಹ್ಯಾಮ್ ವಿರುದ್ಧ ಯಾವುದೇ ತಕ್ಷಣದ ಕ್ರಮ ಕೈಗೊಳ್ಳಲಾಗಿಲ್ಲ. ಆದರೆ, ಘಟನೆ ವೀಡಿಯೊದಲ್ಲಿ ಸೆರೆಯಾಗಿರುವುದರಿಂದ, FIFA ಈಗ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ. FIFA ಈ ವಿಷಯವನ್ನು ಪರಿಶೀಲಿಸುವ ಸಾಧ್ಯತೆಯಿದೆ. FIFA ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರೆ, ಬೆಲ್ಲಿಂಗ್ಹ್ಯಾಮ್ ದಂಡ ಅಥವಾ ಒಂದು ಪಂದ್ಯದ ನಿಷೇಧವನ್ನು ಎದುರಿಸಬೇಕಾಗುತ್ತದೆ.

ಮೂರನೇ ಸ್ಥಾನಕ್ಕೆ ನಡೆಯುವ ಪಂದ್ಯದಿಂದ ಹೊರಬೀಳುವ ಸಾಧ್ಯತೆ

ಒಂದು ವೇಳೆ ಐಸಿಸಿ ಕ್ರಮ ತೆಗೆದುಕೊಂಡರೆ ಶನಿವಾರ ಫ್ರಾನ್ಸ್ ವಿರುದ್ಧದ ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಪ್ಲೇ-ಆಫ್ ಪಂದ್ಯದಲ್ಲಿ ಜೂಡ್ ಬೆಲ್ಲಿಂಗ್ಹ್ಯಾಮ್ ತಪ್ಪಿಸಿಕೊಳ್ಳಬಹುದು. ಆದರೆ, ಪ್ರಸ್ತುತ FIFA ಈ ಕ್ರಮವನ್ನು ಎಚ್ಚರಿಕೆ ಅಥವಾ ದಂಡಕ್ಕೆ ಸೀಮಿತಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ವಿಷಯದ ಬಗ್ಗೆ FIFA ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಸೋಲಿನ ನಂತರ ಬೆಲ್ಲಿಂಗ್ಹ್ಯಾಮ್ ತೀವ್ರ ಭಾವುಕರಾಗಿದ್ದರು. ಫೈನಲ್ ವಿಜಲ್​ ಊದಿದಾಗ ಅವರು ಮೈದಾನದಲ್ಲಿ ಕಣ್ಣೀರು ಹಾಕುತ್ತಾ ನಿಂತಿದ್ದರು. ಅವರು ಆರಂಭದಲ್ಲಿ ಯುವ ಆಟಗಾರ ನಿಕೊ ಒ’ರೈಲಿಯನ್ನು ಸಮಾಧಾನಪಡಿಸಿದರು. ಆದರೆ ಶೀಘ್ರದಲ್ಲೇ ತಮ್ಮದೇ ತಂಡದ ಸದಸ್ಯರೊಂದಿಗೆ ವಾಗ್ವಾದ ನಡೆಸುತ್ತಿದ್ದರು. ಪಂದ್ಯದ ನಂತರ ಇಂಗ್ಲೆಂಡ್‌ನ ಮಾರ್ಗನ್ ರೋಜರ್ಸ್ ಮತ್ತು ಅರ್ಜೆಂಟೀನಾದ ಆಟಗಾರರ ನಡುವೆಯೂ ಘರ್ಷಣೆ ನಡೆದು ಮೈದಾನ ರಣರಂಗದಂತೆ ಕಾಣಿಸುತ್ತಿತ್ತು.

ಹೆಚ್ಚುವರಿ ಸಮಯದಲ್ಲಿ ಗೆದ್ದ ಅರ್ಜೆಂಟೀನಾ

ಮೈದಾನದಲ್ಲಿನ ಈ ಉದ್ವಿಗ್ನ ಕ್ಷಣಗಳು ಪಂದ್ಯದ ಪರಾಕಾಷ್ಠೆಯನ್ನು ಗುರುತಿಸಿದವು, ಇದರಲ್ಲಿ ಅರ್ಜೆಂಟೀನಾ ತಡವಾಗಿ ಸಿಡಿಸಿದ 2 ಗೋಲುಗಳಿಂದ ಇಂಗ್ಲೆಂಡ್ ವಿರುದ್ಧ 2-1ರ ಅಂತರದಲ್ಲಿ ಸೋಲಿಸಿ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿತು. ಕಳೆದ ಆವೃತ್ತಿಯಲ್ಲಿ ಫ್ರಾನ್ಸ್ ತಂಡವನ್ನ ಮಣಿಸಿದ್ದ ಅರ್ಜೆಂಟೀನಾ ಚಾಂಪಿಯನ್ ಆಗಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed