FIFA World Cup 2026: ಮೆಸ್ಸಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ! ಫಿಫಾ ವಿಶ್ವಕಪ್​ಗೆ ಅರ್ಜೆಂಟೀನಾ ತಂಡ ಪ್ರಕಟ | ಕ್ರೀಡಾ ಸುದ್ದಿ | ACTPnews

FIFA World Cup 2026: ಮೆಸ್ಸಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ! ಫಿಫಾ ವಿಶ್ವಕಪ್​ಗೆ ಅರ್ಜೆಂಟೀನಾ ತಂಡ ಪ್ರಕಟ | ಕ್ರೀಡಾ ಸುದ್ದಿ


ಮೆಸ್ಸಿ ದಾಖಲೆಯ ಆರನೇ ಫಿಫಾ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಎಂಟು ಬಾರಿ ಬ್ಯಾಲನ್ ಡಿ’ಓರ್ (Ballon d’Or) ಪ್ರಶಸ್ತಿಯನ್ನು ಗೆದ್ದಿರುವ ಮೆಸ್ಸಿಗೆ ನಾಯಕತ್ವದ ಜವಾಬ್ದಾರಿಗಳನ್ನು ನೀಡಲಾಗಿದೆ. ಎಡ ಮಂಡಿರಜ್ಜು ಗಾಯದಿಂದ ಮೆಸ್ಸಿ ಫಿಫಾ ವಿಶ್ವಕಪ್ ಆಡುವ ಬಗ್ಗೆ ಅನುಮಾನಗಳಿದ್ದವು.

ರಿಯಲ್ ಮ್ಯಾಡ್ರಿಡ್ ಆಟಗಾರ ಫ್ರಾಂಕೊ ಮಸ್ತಾನಾ ಅವರ ಹೆಸರು ಅರ್ಜೆಂಟೀನಾ ತಂಡದಲ್ಲಿಲ್ಲ. ಇದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಕಣಕ್ಕೆ ಇಳಿದಿದೆ. ನಾಲ್ಕು ವರ್ಷಗಳ ಹಿಂದೆ ಕತಾರ್‌ನಲ್ಲಿ ಅರ್ಜೆಂಟೀನಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು. ಈಗ, ಅರ್ಜೆಂಟೀನಾ ಸತತ ಎರಡನೇ ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.

ಅರ್ಜೆಂಟೀನಾ ಮೊದಲ ಎದುರಾಳಿ ಯಾರು?

ಜೂನ್ 11 ರಿಂದ ಫಿಫಾ ವಿಶ್ವಕಪ್ 2026 ರ ಟೂರ್ನಿ ನಡೆಯಲಿದೆ. ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಈ ಮೆಗಾ ಟೂರ್ನಿಯನ್ನು ಆಯೋಜಿಸುತ್ತಿವೆ. ಅರ್ಜೆಂಟೀನಾ ತನ್ನ ಮೊದಲ ಪಂದ್ಯದಲ್ಲಿ ಕಾನ್ಸಾಸ್ ಸಿಟಿಯಲ್ಲಿ ಅಲ್ಜೀರಿಯಾವನ್ನು ಎದುರಿಸಲಿದೆ. ಇದಕ್ಕೂ ಮೊದಲು ಹೊಂಡುರಾಸ್ ಮತ್ತು ಐಸ್ಲ್ಯಾಂಡ್ ವಿರುದ್ಧ ಅರ್ಜೆಂಟೀನಾ ಸ್ನೇಹಪರ ಪಂದ್ಯಗಳನ್ನು ಆಡಲಿದೆ.

ಫಿಫಾ ವಿಶ್ವಕಪ್ 2026 ರ ಅರ್ಜೆಂಟೀನಾ ತಂಡ

ಗೋಲ್‌ಕೀಪರ್‌ಗಳು: ಎಮಿಲಿಯಾನೊ ಮಾರ್ಟಿನೆಜ್, ಗೆರೊನಿಮೊ ರುಲ್ಲಿ, ಜುವಾನ್ ಮುಸ್ಸೊ.

ಡಿಫೆಂಡರ್ಸ್ : ಗೊಂಜಾಲೊ ಮೊಂಟಿಯೆಲ್, ನಹುಯೆಲ್ ಮೊಲಿನಾ, ಲಿಸಾಂಡ್ರೊ ಮಾರ್ಟಿನೆಜ್, ನಿಕೋಲಸ್ ಒಟಮೆಂಡಿ, ಲಿಯೊನಾರ್ಡೊ ಬಲೆರ್ಡಿ, ಕ್ರಿಸ್ಟಿಯನ್ ರೊಮೆರೊ, ನಿಕೊಲಾಸ್ ಟ್ಯಾಗ್ಲಿಯಾಫಿಕೊ, ಫಾಕುಂಡೊ ಮೆಡಿನಾ.

ಮಿಡ್‌ಫೀಲ್ಡರ್‌ಗಳು : ಜಿಯೋವಾನಿ ಲೊ ಸೆಲ್ಸೊ, ಲಿಯಾಂಡ್ರೊ ಪರೆಡೆಸ್, ರೋಡ್ರಿಗೋ ಡಿ ಪಾಲ್, ಎಕ್ಸಿಕ್ವಿಯೆಲ್ ಪಲಾಸಿಯೊಸ್, ಎಂಜೊ ಫೆರ್ನಾಂಡಿಸ್, ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್, ವ್ಯಾಲೆಂಟಿನ್ ಬಾರ್ಕೊ.

ಫಾರ್ವರ್ಡ್‌ಗಳು : ಲಿಯೋನೆಲ್ ಮೆಸ್ಸಿ, ನಿಕೋಲಸ್ ಗೊನ್ಜಾಲೆಜ್, ಗಿಯುಲಿಯಾನೊ ಸಿಮಿಯೋನ್, ಲೌಟಾರೊ ಮಾರ್ಟಿನೆಜ್, ಜೋಸ್ ಮ್ಯಾನುಯೆಲ್ ಲೋಪೆಜ್, ಜೂಲಿಯನ್ ಅಲ್ವಾರೆಜ್, ಥಿಯಾಗೊ ಅಲ್ಮಾಡಾ, ನಿಕೊ ಪಾಜ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed