Last Updated:
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು. ಈಗ ಮತ್ತೊಮ್ಮೆ ಮೇಜರ್ ಲೀಗ್ ಕ್ರಿಕೆಟ್ 2026 ರಲ್ಲಿ ಡು ಪ್ಲೆಸಿಸ್ ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಟರ್ನ್ ಮಾಡಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ (MLC) 2026 ಮಂಗಳವಾರ ಮತ್ತೊಂದು ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಟೆಕ್ಸಾಸ್ ಸೂಪರ್ ಕಿಂಗ್ಸ್ (TSK) ತಂಡದ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis), ಮೇಜರ್ ಲೀಗ್ ಕ್ರಿಕೆಟ್ 2026 ರಲ್ಲಿ ವಯಸ್ಸು (Age) ಕೇವಲ ಒಂದು ಸಂಖ್ಯೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದರು. 41 ವರ್ಷದ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಗುರುವಾರ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ (SFU) ವಿರುದ್ಧದ ಪಂದ್ಯದಲ್ಲಿ ಅದ್ಭುತ ಕ್ಯಾಚ್ (Catch) ಹಿಡಿದರು. ಇದು ಬ್ಯಾಟ್ಸ್‌ಮನ್‌ನಿಂದ ಹಿಡಿದು ಪ್ರೇಕ್ಷಕರವರೆಗೆ ಎಲ್ಲರನ್ನೂ ಬೆರಗುಗೊಳಿಸಿತು. ಫಾಫ್ ಅವರ ಅದ್ಭುತ ಕ್ಯಾಚ್ ಪಂದ್ಯದ ದಿಕ್ಕನ್ನು ಬದಲಾಯಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿತು.
ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ ಕೊಲಿಸಿಯಂನಲ್ಲಿ ನಡೆದ ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ನಡುವಿನ ಪಂದ್ಯದ ವೇಳೆ ಫಾಫ್ ಡು ಪ್ಲೆಸಿಸ್ ಅದ್ಭುತ ಕ್ಯಾಚ್ ಹಿಡಿದಿರು. ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಸತತ ಸೋಲಿನ ಸರಣಿಯನ್ನು ಕೊನೆಗೊಳಿಸಿದ್ದರಿಂದ ಈ ಪಂದ್ಯವು ನಿರ್ಣಾಯಕವಾಗಿತ್ತು. ಆದರೆ 41ನೇ ವಯಸ್ಸಿನಲ್ಲಿ ಡು ಪ್ಲೆಸಿಸ್ ಅವರ ಅದ್ಭುತ ಕ್ಯಾಚ್ ಎಲ್ಲರ ಗಮನ ಸೆಳೆಯಿತು.
ಓಕ್ಲ್ಯಾಂಡ್‌ನ ಓಕ್ಲ್ಯಾಂಡ್ ಕೊಲಿಸಿಯಂನಲ್ಲಿ ನಡೆದ ಪಂದ್ಯದಲ್ಲಿ, ಟೆಕ್ಸಾಸ್ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ 161 ರನ್‌ಗಳ ಸವಾಲಿನ ಮೊತ್ತವನ್ನು ಗಳಿಸಿತು. ನಾಯಕ ಫಾಫ್ ಡು ಪ್ಲೆಸಿಸ್ 24 ಎಸೆತಗಳಲ್ಲಿ 40 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರೆ, ಡೊನೊವನ್ ಫೆರೇರಾ 28 ಎಸೆತಗಳಲ್ಲಿ 45 ರನ್ ಗಳಿಸುವ ಮೂಲಕ ತಂಡವನ್ನು ಉತ್ತಮ ಸ್ಥಿತಿಯಲ್ಲಿಟ್ಟರು.
ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಇನ್ನಿಂಗ್ಸ್‌ನ ಐದನೇ ಓವರ್‌ನ ಮೊದಲ ಎಸೆತದಲ್ಲಿ, ಅಮಾಶಿ ಡಿ ಸಿಲ್ವಾ ಆಫ್ ಸ್ಟಂಪ್ ಹೊರಗೆ ಫುಲ್ ಲೆಂತ್ ಬಾಲ್ ಹಾಕಿದರು. ಲುವಾನ್-ಡ್ರೆ ಪ್ರಿಟೋರಿಯಸ್ ಬಾಲ್ ಅನ್ನು ಡ್ರೈವ್ ಮಾಡಲು ಪ್ರಯತ್ನಿಸಿದರು. ಆದರೆ ಅದು ಗಾಳಿಯಲ್ಲಿ ಮಿಡ್-ಆಫ್ ಕಡೆಗೆ ಹಾರಿಹೋಯಿತು. ಮಿಡ್-ಆಫ್‌ನಲ್ಲಿ ನಿಂತಿದ್ದ ಫಾಫ್ ಡು ಪ್ಲೆಸಿಸ್ ತಮ್ಮ ಬಲಕ್ಕೆ ಹಾರಿ ಒಂದೇ ಕೈಯಿಂದ ಅದ್ಭುತವಾದ ಕ್ಯಾಚ್ ಹಿಡಿದರು.
ಕ್ಯಾಚ್ ಹಿಡಿದ ನಂತರ ಫಾಫ್ ಡು ಪ್ಲೆಸಿಸ್ ನೆಲಕ್ಕೆ ಬಿದ್ದರು. ಆದರೆ ಬಾಲ್ ಹಿಡಿದುಕೊಂಡು ನಗುತ್ತಾ ಸೆಲೆಬ್ರೇಷನ್ ಮಾಡಿದರು. ಕ್ಯಾಚ್ ಎಷ್ಟು ಅದ್ಭುತವಾಗಿತ್ತೆಂದರೆ ಬ್ಯಾಟ್ಸ್‌ಮನ್ ಪ್ರಿಟೋರಿಯಸ್ ಕೂಡ ನಂಬಲು ಸಾಧ್ಯವಾಗಲಿಲ್ಲ. ಒಂದು ಕ್ಷಣ, ಅವರು ಡಿಆರ್ಎಸ್ ತೆಗೆದುಕೊಳ್ಳುವ ಬಗ್ಗೆ ಯೋಚಿಸಿದರು. ಆದರೆ ಅಂತಿಮವಾಗಿ ನಿರಾಶೆಯಿಂದ ಪೆವಿಲಿಯನ್‌ಗೆ ಹಿಂತಿರುಗಬೇಕಾಯಿತು.
ಲುವಾನ್-ಡ್ರೆ ಪ್ರಿಟೋರಿಯಸ್ ಔಟಾದ ನಂತರ, ಯುನಿಕಾರ್ನ್ಸ್ ತಂಡದ ಬ್ಯಾಟಿಂಗ್ ತೀವ್ರವಾಗಿ ಕುಸಿಯಿತು. ಮೊದಲ 10 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡ ಯುನಿಕಾರ್ನ್ಸ್ ಅಂತಿಮವಾಗಿ ಪಂದ್ಯವನ್ನು 22 ರನ್‌ಗಳಿಂದ ಸೋತಿತು. ಫಾಫ್ ಡು ಪ್ಲೆಸಿಸ್ ಅವರ ಈ ಕ್ಯಾಚ್ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಒಂದು ಮಹತ್ವದ ತಿರುವು ನೀಡಿತು.
41ನೇ ವಯಸ್ಸಿನಲ್ಲಿ, ಫಾಫ್ ಡು ಪ್ಲೆಸಿಸ್ ಅವರ ಫಿಟ್ನೆಸ್ ಮತ್ತು ಚುರುಕುತನ ಕ್ರಿಕೆಟ್ ಅಭಿಮಾನಿಗಳನ್ನು ಬೆರಗುಗೊಳಿಸಿತು. ಈ ಕ್ಯಾಚ್‌ನ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಎಂಎಲ್ಸಿ 2026 ರ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದೆಂದು ಹೇಳಲಾಗುತ್ತಿದೆ.













