Last Updated:
ಸುಮಾರು 15 ದಿನಗಳ ಹಿಂದೆ ಮಹಿಳೆ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮಂದ್ಸೌರ್ನಲ್ಲಿರುವ ಶಂಕರ್ ಮನೆಗೆ ಹೋಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. 4-5 ದಿನಗಳ ಕಾಲ ಅಲ್ಲಿಯೇ ಇದ್ದ ನಂತರ, ಆಕೆ ತನ್ನ ಪತಿಯ ಗ್ರಾಮಕ್ಕೆ ಮರಳಿದಳು.
ಧಮ್ತಾರಿ: ಪತ್ನಿಯ ಪ್ರಿಯಕರನನ್ನು ಕೊಂದ ಆರೋಪದ ಮೇಲೆ (Extra Marital Affair) ಕೆರೆಗಾಂವ್ನ ಬಜಾರ್ ಕುರ್ರಿದಿಹ್ ಗ್ರಾಮದ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ವ್ಯಕ್ತಿ ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯ ನಿವಾಸಿಯಾಗಿದ್ದು, ತನ್ನ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದಾಗ ಆಕೆಯ ಪತಿ ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸ್ ಮೂಲಗಳು ಹೇಳುವಂತೆ, ಮೊಬೈಲ್ ಫೋನ್ ಸಂಭಾಷಣೆಗಳ ಮೂಲಕ ಅವರಿಬ್ಬರ ಸಂಪರ್ಕಕ್ಕೆ ಬಂದು, ಆಗಾಗ್ಗೆ ಭೇಟಿಯಾಗುತ್ತಿದ್ದರು. ಸುಮಾರು 15 ದಿನಗಳ ಹಿಂದೆ ಮಹಿಳೆ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮಂದ್ಸೌರ್ನಲ್ಲಿರುವ ಶಂಕರ್ ಮನೆಗೆ ಹೋಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. 4-5 ದಿನಗಳ ಕಾಲ ಅಲ್ಲಿಯೇ ಇದ್ದ ನಂತರ, ಆಕೆ ತನ್ನ ಪತಿಯ ಗ್ರಾಮಕ್ಕೆ ಮರಳಿದಳು. ಮೃತ ವ್ಯಕ್ತಿ ಆರೋಪಿಯ ಪತ್ನಿಯನ್ನು ಭೇಟಿಯಾಗಲು ಧಮತರಿಗೆ ಆಗಾಗ ಭೇಟಿ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಜುಲೈ 8 ರಂದು, ಸಂಜೆ 7 ಗಂಟೆ ಸುಮಾರಿಗೆ, ಶಂಕರ್ ಮತ್ತೆ ಪೂರ್ಣಿಮಾಳನ್ನು ಭೇಟಿ ಮಾಡಲು ಬಜಾರ್ ಕುರ್ರಿದಿಹ್ಗೆ ಭೇಟಿ ನೀಡಿದ್ದಾನೆ. ಶಂಕರ್ ಮತ್ತು ಯೋಗೇಂದ್ರ ಅವರ ಕುಟುಂಬ ಒಟ್ಟಿಗೆ ಊಟ ಮಾಡಿ ನಂತರ ಅವರು ಒಂದೇ ಹಾಲ್ನಲ್ಲಿ ಮಲಗಲು ಹೋಗಿದ್ದಾರೆ. ಯೋಗೇಂದ್ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಎಚ್ಚರವಾದಾಗ, ಕೋಪದಿಂದ ಶಂಕರ್ ಮೇಲೆ ಹಲ್ಲೆ ನಡೆಸಿ, ಕೊಡಲಿಯಿಂದ ಅವನ ಕುತ್ತಿಗೆಗೆ ಹೊಡೆದನು ಎಂದು ತಿಳಿದು ಬಂದಿದೆ.
ಗಾಯಗೊಂಡ ಶಂಕರ್ ನನ್ನು ತಕ್ಷಣವೇ 108 ಆಂಬ್ಯುಲೆನ್ಸ್ ಮೂಲಕ ಧಮತರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಆತ ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಅಲ್ಲಿಂದ ಅವನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.
‘ಆರೋಪಿಯು ಮನೆಯಲ್ಲಿ ಮಲಗಿದ್ದಾಗ, ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ’ ಎಂದು ಧಮತರಿಯ ಪೊಲೀಸ್ ವರಿಷ್ಠಾಧಿಕಾರಿ ಸೂರಜ್ ಸಿಂಗ್ ಪರಿಹಾರ್ ತಿಳಿಸಿದ್ದಾರೆ.
Dhamtari,Dhamtari,Chhattisgarh














