ಶಿವಣ್ಣನೇ ಎಲ್ಲ…
(ಚಿತ್ರ ಕೃಪೆ: ನಟ ಪುನೀತ್ ಕುಮಾರ್)
ನಾನು ಏನಾದರೂ ಈಗ ಆಗಿದ್ದರೆ ಅದು ಶಿವಣ್ಣನಿಂದಲೆ ಹೊರತು ಬೇರೆ ಏನೂ ಅಲ್ಲ. ನಾನು ಶಿವಣ್ಣನ ಅಭಿಮಾನಿ ಆಗಿದ್ದಕ್ಕೆ ಕೆ.ಪಿ.ಶ್ರೀಕಾಂತ್ ಅವರ ಪರಿಚಯ ಆಯಿತು. ಅವರ ಜೊತೆಗೆ ಕೆಲಸ ಮಾಡೋಕು ಸಾಧ್ಯ ಆಯಿತು. ಸಲಗ ಚಿತ್ರದ ಪ್ರಮೋಷ್ ಮತ್ತು ಇತರ ವಿಚಾರಗಳನ್ನ ತಿಳಿದುಕೊಳ್ಳಲು ಸಹಾಯ ಆಯಿತು.
ದುನಿಯಾ ವಿಜಯ್ ಅವರು ನನಗೆ ಅಣ್ಣನೇ ಬಿಡಿ. ಸಲಗ ಚಿತ್ರದ ಪ್ರಮೋಷನ್ ಮತ್ತು ಇತರ ವಿಚಾರವನ್ನ ನೋಡಿ ತುಂಬಾನೆ ಮೆಚ್ಚಿಕೊಂಡಿದ್ದರು. ಸಲಗ ಚಿತ್ರದಲ್ಲಿ ನಾನು ಒಂದು ರೋಲ್ ಕೂಡ ಮಾಡಿದ್ದೇನೆ.
ಸಿಟಿ ಲೈಟ್ಸ್ ಚಿತ್ರದ ನನ್ನ ಪಾತ್ರವನ್ನ ಬೇರೆ ಕಲಾವಿದರು ಮಾಡಬೇಕಿತ್ತು. ಅವರು ಬರದೇ ಇರೋ ಕಾರಣಕ್ಕೆ ಈ ರೋಲ್ ನಾನು ಮಾಡಿದ್ದೇನೆ. ನಿಜಕ್ಕೂ ನಾನು ನಟ ಅಲ್ವೇ ಅಲ್ಲ. ಶಿವಣ್ಣನ ಒಬ್ಬ ಅಭಿಮಾನಿ ಅಷ್ಟೆ ಆಗಿದ್ದೇನೆ.
ಇಂತಹ ದೊಡ್ಡ ರೋಲ್ ಮಾಡೋದು ಹೇಗೆ ಅನ್ನುವ ಪ್ರಶ್ನೆ ಇತ್ತು. ಆದರೆ, ದುನಿಯಾ ವಿಜಯ್ ಅವರಂತಹ ಡೈರೆಕ್ಟರ್ ಎಲ್ಲರಿಂದಲೂ ಅಭಿನಯ ತೆಗೆಸಬಲ್ಲರು. ನನ್ನಿದಲೂ ಅಭಿನಯ ತೆಗೆಸಿದ್ದಾರೆ.
ಚಿತ್ರದಲ್ಲಿ ನನ್ನ ನಟನೆ ನೋಡಿ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ, ಇದರ ಎಲ್ಲ ಕ್ರೆಡಿಟ್ ದುನಿಯಾ ವಿಜಯ್ ಅವರಿಗೇನೆ ಹೋಗ್ಬೇಕು.
ಯಾಕಂದ್ರೆ, ಅವರು ಹೇಳಿದಂತೆ ನಾನು ನಟಿಸಿದ್ದೇನೆ. ಪ್ರತಿಯೊಂದನ್ನು ಅವರೆ ಅಭಿನಯಿಸಿ ತೋರಿಸಿದ್ದಾರೆ. ಇದು ನನಗೆ ತುಂಬಾನೆ ಹೆಲ್ಪ್ ಆಗಿದೆ. ಆ ಅಭಿನಯವನ್ನ ಜನ ಮೆಚ್ಚಿಕೊಳ್ಳುತ್ತಿದ್ದಾರೆ.
ನಾನು ಏನೂ ಅಲ್ಲ..
(ಚಿತ್ರ ಕೃಪೆ: ನಟ ಪುನೀತ್ ಕುಮಾರ್)
ವಿನಯ್ ರಾಜ್ಕುಮಾರ್ ಅವರನ್ನ ಕಾಲಿನಿಂದ ಒದೆಯೋ ಸೀನ್ ಇತ್ತು. ಇದನ್ನ ಮಾಡುವಾಗ ತುಂಬಾನೆ ಬೇಸರವೂ ಇತ್ತು. ಅಣ್ಣಾವ್ರ ಮೊಮ್ಮಗನನ್ನ ಒದೆಯೋದು ಹೇಗೆ ಅಂತಲೂ ಇತ್ತು.
ಆದರೆ, ದುನಿಯಾ ವಿಜಯ್ ಅವರು ಹೇಳಿದರು, ಇದು ಸಿನಿಮಾ ಕಣೋ, ರಿಯಲ್ ಆಗಿ ನೀನು ಒದೆಯೋದಿಲ್ಲ. ಸುಮ್ನೆ ಹೀಗೆ ಟಚ್ ಮಾಡು ಅಂತಲೇ ಹೇಳಿದ್ದರು. ಅಷ್ಟು ಹೇಳಿದ್ಮೇಲೆ ಆ ಸೀನ್ ಮಾಡಿದ್ದೇನೆ.
ಮೊನಿಷಾ ವಿಜಯ್ ಕುಮಾರ್ ನಿಜಕ್ಕೂ ಒಳ್ಳೆ ಹುಡುಗಿ. ನಾನು ಕೂದಲು ಹಿಡಿದು ಎಳೆಯೋ ಸೀನ್ ಒಂದು ಈ ಚಿತ್ರದಲ್ಲಿದೆ. ಆಗ ನಾನು ಸುಮ್ನೆ ನೋವಾಗಬಾರದರ ಅಂತ ಮೆತ್ತಗೆ ಕೂದಲು ಹಿಡಿಯುತ್ತಿದ್ದೆ.
ನನಗೆ ನಟನೆ ಗೊತ್ತಿಲ್ಲ. ಅದನ್ನ ಚೆನ್ನಾಗಿ ಕಲಿತುಕೊಂಡೇ ಮುಂದುವರೆಯುತ್ತೇನೆ. ಒಳ್ಳೆ ಪಾತ್ರ ಬಂದ್ರೆ ಮಾಡುತ್ತೇನೆ. ದುನಿಯಾ ವಿಜಯ್ ಅವರ ಮಾರ್ಗದರ್ಶನವನ್ನು ತೆಗೆದುಕೊಳ್ಳುತ್ತೇನೆ.
ನಮ್ಮ ಫ್ಯಾಮಿಲಿಯಲ್ಲಿ ಯಾರಿಗೂ ಸಿನಿಮಾ ನಂಟು ಇಲ್ಲವೇ ಇಲ್ಲ. ನಾನು ಶಿವಣ್ಣನ ಅಭಿಮಾನಿ ಮಾತ್ರ ಆಗಿದ್ದೇನೆ. ಆ ತರ ನಟನೆ ಆಸಕ್ತಿ ಇದ್ದರೆ ಅದ್ಯಾವಾಗಲೋ ಅವಕಾಶವನ್ನು ಕೇಳುತ್ತಿದ್ದೆ.
ಆದರೆ, ಅವಕಾಶ ಹುಡುಕಿ ಬಂದಿತ್ತು. ಅದನ್ನ ಮನಸಾರೆ ಸ್ವೀಕರಿಸಿದ್ದೇನೆ. ನನಗೆ ಭಯ ಏನೂ ಇಲ್ಲ. ಆದರೆ, ಉಮಾಶ್ರೀ ಅವರ ಜೊತೆಗಿನ ಸೀನ್ ಮಾಡುವಾಗ ಒಂಚೂರು ನರ್ವಸ್ ಆಗಿದ್ದೆ ಅಂತಲೇ ಪುನೀತ್ ಕುಮಾರ್ ಹೇಳಿಕೊಂಡಿದ್ದಾರೆ. ಹೀಗೆ ಕನ್ನಡಕ್ಕೆ ಒಬ್ಬ ಹೊಸ ವಿಲನ್ ಸಿಕ್ಕಿದ್ದಾರೆ ಅಂತಲೇ ಹೇಳಬಹುದು.













