Last Updated:
ಲಾರ್ಡ್ಸ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಚರಿತ್ರೆ ಸೃಷ್ಟಿಸಿದ್ದಾರೆ.
ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ ಟೆಸ್ಟ್ (Test) ಪಂದ್ಯದಲ್ಲಿ ಭಾರತ (India) ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur) ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ಲಾರ್ಡ್ಸ್ (Lords) ಮೈದಾನದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಅವರು ಅದ್ಭುತ ಅರ್ಧಶತಕ ಗಳಿಸಿದರು. ಇದರೊಂದಿಗೆ, ಐತಿಹಾಸಿಕ ಲಾರ್ಡ್ಸ್ನಲ್ಲಿ ಮೂರು ಸ್ವರೂಪಗಳಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ಮಹಿಳಾ/ಪುರುಷ ಕ್ರಿಕೆಟಿಗರಾದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು 58 ರನ್ ಗಳಿಸಿದರು. ನಾಯಕಿ ಜೊತೆಗೆ, ಸ್ಮೃತಿ ಮಂಧಾನ (Smriti Mandhana) ಮತ್ತು ದೀಪ್ತಿ ಶರ್ಮಾ (Deepti Sharma) ಅವರ ಅರ್ಧಶತಕಗಳು ಮಹಿಳಾ ಟೆಸ್ಟ್ನ ಮೊದಲ ದಿನದಂದು ಭಾರತವು 285 ರನ್ ಗಳಿಸಲು ಸಹಾಯ ಮಾಡಿತು.
ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಈ ಹಿಂದೆ ಲಾರ್ಡ್ಸ್ ನಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಲಾರ್ಡ್ಸ್ನಲ್ಲಿ ಮೂರು ಸ್ವರೂಪಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಹರ್ಮನ್ಪ್ರೀತ್ ಇತಿಹಾಸ ನಿರ್ಮಿಸಿದರು. ಲಾರ್ಡ್ಸ್ನಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಓವರ್ಗಳಲ್ಲಿ ಎರಡು ವಿಕೆಟ್ ಗಳನ್ನು ಕಳೆದುಕೊಂಡಿತು. ಶೆಫಾಲಿ ವರ್ಮಾ ಮತ್ತು ಯಸ್ತಿಕಾ ಭಾಟಿಯಾ ಕಡಿಮೆ ರನ್ಗಳಿಗೆ ಔಟಾದರು. ಭಾರತ ತಂಡವು 37 ರನ್ಗಳಿಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ಜೆಮಿಮಾ ರೊಡ್ರಿಗಸ್ ಜೊತೆಗೆ ಮಂಧಾನ ಮೂರನೇ ವಿಕೆಟ್ ಗೆ 64 ರನ್ಳನ್ನು ಸೇರಿಸಿದರು. ರೊಡ್ರಿಗಸ್ 38 ಎಸೆತಗಳಲ್ಲಿ 35 ರನ್ ಗಳಿಸಿದರು. ನಂತರ ಹರ್ಮನ್ ಪ್ರೀತ ಕೌರ್ ಮಂಧಾನ ಅವರೊಂದಿಗೆ ನಾಲ್ಕನೇ ವಿಕೆಟ್ಗೆ 89 ರನ್ ಗಳನ್ನು ಸೇರಿಸುವ ಮೂಲಕ ಭಾರತ ತಂಡಕ್ಕೆ ಆಸರೆಯಾದರು.
ಮೊದಲು ಬ್ಯಾಟ್ ಮಾಡಿದ ಭಾರತ 74.5 ಓವರ್ಗಳಲ್ಲಿ ಆಲೌಟ್ ಆಗಿ 285 ರನ್ ಗಳಿಸಿತು. ಟೀಮ್ ಇಂಡಿಯಾ ಪರ ಸ್ಮೃತಿ ಮಂಧಾನ (83), ನಾಯಕಿ ಹರ್ಮನ್ಪ್ರೀತ್ ಕೌರ್ (58), ಮತ್ತು ದೀಪ್ತಿ ಶರ್ಮಾ (57) ಅರ್ಧಶತಕ ಗಳಿಸಿದರು. ಇಂಗ್ಲೆಂಡ್ ಪರ ಸೋಫಿ ಮೂರು ವಿಕೆಟ್ ಪಡೆದರು. ಮೊದಲ ದಿನದ ಕೊನೆಯ ಅವಧಿಯಲ್ಲಿ, ಇಂಗ್ಲೆಂಡ್ 11 ಓವರ್ಗಳಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯಿತು. ಆದರೆ, 21 ರನ್ ಗಳಿಸಿ ಟ್ಯಾಮಿಯನ್ನು ಕಳೆದುಕೊಂಡಿತು. ಇಂಗ್ಲೆಂಡ್ ಈಗ 264 ರನ್ಗಳ ಹಿನ್ನಡೆಯಲ್ಲಿದೆ. ಮೊದಲ ದಿನದ ಆಟದ ಅಂತ್ಯದಲ್ಲಿ, ಇಂಗ್ಲೆಂಡ್ನ ಮಾಯಾ ಬೌಚಿಯರ್ 17 ರನ್ಗಳೊಂದಿಗೆ ಮತ್ತು ಹೀದರ್ ನೈಟ್ 1 ರನ್ನೊಂದಿಗೆ ಕ್ರೀಸ್ನಲ್ಲಿದ್ದರು. ಕ್ರಾಂತಿ ಗೌರ್ ಆರಂಭಿಕ ಆಟಗಾರ್ತಿ ಟ್ಯಾಮಿ ಬ್ಯೂಮಾಂಟ್ ಅನ್ನು ಔಟ್ ಮಾಡಿದರು.
ಶನಿವಾರ ಮೊದಲ ದಿನದ ಆಟ ಆರಂಭವಾಗುವಾಗ ಇಂಗ್ಲೆಂಡ್ನ ಸ್ಕೋರ್ 21 ರನ್ಗೆ 1 ವಿಕೆಟ್ ಆಗಿತ್ತು. ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ಮೊದಲ ಸೆಷನ್ನಲ್ಲೇ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಕ್ರಾಂತಿ ಗೌಡ್ ಮೊದಲು ಆರಂಭಿಕ ಆಟಗಾರ್ತಿ ಟಾಮಿ ಬ್ಯೂಮಾಂಟ್ ಅವರನ್ನು ಔಟ್ ಮಾಡಿದರು. ನಂತರ ಮಾಯಾ ಬೌಚಿಯರ್ ಅವರನ್ನು 52 ಎಸೆತಗಳಲ್ಲಿ 23 ರನ್ಗಳಿಗೆ ಔಟ್ ಮಾಡಿದರು.
ಸಯಾಲಿ ಸತ್ವರೆ ಹೀದರ್ ನೈಟ್ ಅವರನ್ನು ಕೇವಲ 6 ರನ್ಗಳಿಗೆ ಔಟ್ ಮಾಡಿದರು. ಕ್ರಾಂತಿ ಗೌಡ್ ನಂತರ ಆಲಿಸ್ ಕ್ಯಾಪ್ಸಿ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್ಗೆ ನಾಲ್ಕನೇ ಆಘಾತ ನೀಡಿದರು. ಸ್ನೇಹ್ ರಾಣಾ 62 ಎಸೆತಗಳಲ್ಲಿ 52 ರನ್ ಗಳಿಸಿದ್ದ ಆಮಿ ಜೋನ್ಸ್ ಅವರನ್ನು ಔಟ್ ಮಾಡಿದರು. ಈಗ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿದ್ದು, 141 ರನ್ ಹಿನ್ನೆಡೆಯಲ್ಲಿದೆ.














