ENG vs IND: ಭಾರತ vs ಇಂಗ್ಲೆಂಡ್ ಕೊನೆ ಪಂದ್ಯದ ಟಾಸ್ ವಿಳಂಬ! ಕಾರಣ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ! | | ACTPnews

Team India


Last Updated:

ಇಂದು ನಡೆಯಲಿರುವ ಪಂದ್ಯದ ಟಾಸ್ ವಿಚಿತ್ರ ಕಾರಣದಿಂದ ಕೆಲಹೊತ್ತುಗಳ ಕಾಲ ಮುಂದೂಡಲಾಗಿದೆ.

Team India
Team India

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಸರಣಿಯ ಕೊನೆಯ ಮತ್ತು ಐದನೇ ಪಂದ್ಯ ಸೌತಾಂಪ್ಟನ್‌ನ ರೋಸ್ ಬೌಲ್‌ನಲ್ಲಿ (Rose Bowl Stadium) ನಡೆಯಲಿದೆ. ಈಗಾಗಲೇ ಮೂರು ಪಂದ್ಯಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿರುವ ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಟೀಂ ಇಂಡಿಯಾ (Team India) ಗೆಲುವಿನೊಂದಿಗೆ ಸರಣಿಯನ್ನು ಪೂರ್ಣಗೊಳಿಸಲು ಎದುರು ನೋಡುತ್ತಿದೆ. ಆದ್ರೆ, ಇಂದು ನಡೆಯುತ್ತಿರುವ ಪಂದ್ಯದ ಟಾಸ್​​ ವಿಚಿತ್ರ ಕಾರಣದಿಂದ ಕೆಲಹೊತ್ತುಗಳ ಕಾಲ ಮುಂದೂಡಲಾಗಿತ್ತು.

ಟೀಂ ಇಂಡಿಯಾ ಆಟಗಾರರು ಟ್ರಾಫಿಕ್​​ನಲ್ಲಿ ಸಿಲುಕಿಕೊಂಡು ಸ್ಟೇಡಿಯಂಗೆ ಲೇಟ್​ ಆಗಿ ಬಂದ ಹಿನ್ನೆಲೆ ಟಾಸ್​​ ವಿಳಂಬವಾಗಿದೆ ಎಂದು ಕ್ರಿಕ್​​ಬಜ್​​ ತನ್ನ ವೆಬ್​​ಸೈಟ್​ನಲ್ಲಿ ವರದಿ ಮಾಡಿದೆ. ಭಾರತ ತಂಡದ ಬಸ್​ ಟ್ರಾಫಿಕ್​​ನಲ್ಲಿ ಸಿಲುಕಿಕೊಂಡಿದ್ದು, ಈ ಹಿನ್ನೆಲೆ ಆಟಗಾರರು ಕ್ರೀಡಾಂಗಣಕ್ಕೆ ತಡವಾಗಿ ಆಗಮಿಸಿದ್ರು. ಈ ಹಿನ್ನೆಲೆ ನಿಗದಿತ ಸಮಯಕ್ಕೆ ನಡೆಯಬೇಕಿದ್ದ ಟಾಸ್​​ ವಿಳಂಬವಾಗಿದ್ದು, ಶೀಘ್ರದಲ್ಲೇ ಟಾಸ್​​ ನಡೆಯಲಿದೆ.
ಉಭಯ ತಂಡಗಳ ಹೀಗಿದೆ!

ಭಾರತ ತಂಡಗಳು: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಶಿವಂ ದುಬೆ, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್, ಸೂರ್ಯ ಶೆಡ್ಗೆ.

ಇಂಗ್ಲೆಂಡ್: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ಸಿ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಜೋಶ್ ಟೊಂಗೆ, ಲಿಯಾಮ್ ಡಾಸನ್, ಸೋನಿ ಬೇಕರ್, ಜೋರ್ಡಾನ್ ಕಾಕ್ಸ್, ಸಾಕಿಬ್ ಮಹಮೂದ್, ಲ್ಯೂಕ್ ವುಡ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed