Last Updated:
ದುನಿಯಾ ವಿಜಯ್ ಹೀಗೆ ಸಾಮಾನ್ಯವಾಗಿ ಮಾಡೋದೇ ಇಲ್ಲ. ಆದರೆ, ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಅವರ ಕಾಲಿಗೆ ಬಿದ್ದಿದ್ದಾರೆ. ಯಾಕೆ ಅನ್ನುವ ವಿವರ ಇಲ್ಲಿದೆ ಓದಿ.
ದುನಿಯಾ ವಿಜಯ್ (Duniya Vijay) ತಮ್ಮ ಸಿಟಿ ಲೈಟ್ಸ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ (Music Director) ಕಾಲಿಗೆ ಬಿದ್ದಿದ್ದಾರೆ. ಈ ರೀತಿ ಕಾಲಿಗೆ ಬೀಳೋದು ಸುಮ್ನೆ ಅಲ್ಲ. ಹಾಗೆ ದುನಿಯಾ ವಿಜಯ್ (Duniya Vijay) ಯಾರ ಕಲಿಗೂ ಬೀಳೋಕೆ ಹೋಗಿಲ್ಲ. ಆದರೆ, ಚರಣ್ ರಾಜ್ ತಮ್ಮ ಕಾಲಿಗೆ ಬೀಳಿಸಿಕೊಳ್ಳುವ ಕೆಲಸವನ್ನೆ ಮಾಡಿದ್ದಾರೆ. ಅಂದ್ರೆ ಅಷ್ಟು ಒಳ್ಳೆ ಸಾಂಗ್ ಕೊಟ್ಟಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ‘ಬಾವ ಬಾವ’ ಹಾಡಿನ ವಿಚಾರದಲ್ಲಿಯೇ ದುನಿಯಾ ವಿಜಯ್ ಹೀಗೆ ಮಾಡಿದ್ದಾರೆ. ಮಗಳು ಮೋನಿಷಾ ವಿಜಯ್ ಅಪ್ಪನ ಈ ಒಂದು ಕ್ಷಣದ ವಿಡಿಯೋ (Song Recording Video) ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸಿಟಿ ಲೈಟ್ಸ್ ಚಿತ್ರದಲ್ಲಿ ವಿಶೇಷ ಕಥೆ ಇದೆ. ವಾಸ್ತವಕ್ಕೆ ಹತ್ತಿರ ಇರೋ ಸ್ಟೋರಿನೇ ಮಾಡಿದ್ದಾರೆ. ಮಗಳು ಮೋನಿಷಾ ವಿಜಯ್ ಕುಮಾರ್ ಈ ಚಿತ್ರದ ಮೂಲಕ ನಾಯಕಿ ಆಗುತ್ತಿದ್ದಾರೆ.
ಅಪ್ಪನ ವಿಡಿಯೋ ಶೇರ್
(ಚಿತ್ರ ಕೃಪೆ: ಮೋನಿಷಾ ವಿಜಯ್ ಕುಮಾರ್ ಇನ್ಸ್ಟಾಗ್ರಾಮ್)
ಈ ಚಿತ್ರದ ಬಾವ ಬಾವ ಅನ್ನುವ ಹಾಡು ಇತ್ತೀಚಿಗೆ ರಿಲೀಸ್ ಆಗಿದೆ. ಇದು ಜನರಿಗೂ ಇಷ್ಟ ಆಗಿದೆ. ಆದರೆ, ಇದರ ಹಿಂದಿನ ಇಂಟ್ರಸ್ಟಿಂಗ್ ವಿಚಾರವನ್ನ ಕಟ್ಟಿಕೊಡುವ ಒಂದು ವಿಡಿಯೋ ಹೊರ ಬಂದಿದೆ.
ಬಾವ ಬಾವ ಹಾಡಿನ ಹಿಂದಿನ ವಿಷಯ ಇಂಟ್ರಸ್ಟಿಂಗ್ ಆಗಿದೆ. ಇದರ ರೆಕಾರ್ಡಿಂಗ್ ಸಮಯದಲ್ಲಿ ದುನಿಯಾ ವಿಜಯ್ ಖುಷಿಗೆ ಪಾರವೇ ಇರಲಿಲ್ಲ. ಅತಿ ಉತ್ಸಾಹದಲ್ಲಿಯೇ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಸಂಗೀತ ನಿರ್ದೇಶ ಚರಣ್ ರಾಜ್ ಸಾಂಗ್ ರೆಕಾರ್ಡ್ ಮಾಡೋಕೆ ರೆಡಿ ಆಗಿದ್ದರು. ಸಿಂಗರ್ ಅಂಕಿತ್ ಕುಮಾರ್ ಈ ಹಾಡನ್ನ ಹಾಡಿದ್ದಾರೆ. ಇವರೇ ಈ ಗೀತೆಯನ್ನ ಬರೆದಿದ್ದಾರೆ.
ಬಾವ ಬಾವ ಹಾಡಿನ ರೆಕಾರ್ಡಿಂಗ್ ಆಗಿದೆ. ಇದರ ಔಟ್ ಫುಟ್ ಕೇಳಿದ್ಮೇಲೆ ದುನಿಯಾ ವಿಜಯ್ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಆ ಸಂತೋಷದಲ್ಲಿಯೇ ದುನಿಯಾ ವಿಜಯ್ ಈ ಒಂದು ಕೆಲಸ ಮಾಡಿದ್ದಾರೆ.
ಕಾಲು ಮುಗಿದಿರೋದು ಯಾಕೆ
(ಚಿತ್ರ ಕೃಪೆ: ಮೋನಿಷಾ ವಿಜಯ್ ಕುಮಾರ್ ಇನ್ಸ್ಟಾಗ್ರಾಮ್)
ಅದೆಷ್ಟು ಸಲ ಕಾಲಿಗೆ ಬಿದ್ದರು ಗೊತ್ತಾ ? ನಿಜ, ಬಾವ ಬಾವ ಹಾಡು ಕೇಳಿದ್ಮೇಲೆ ದುನಿಯಾ ವಿಜಯ್ ಸಿಕ್ಕಾಪಟ್ಟೆ ಸಂತೋಷಪಟ್ಟರು. ಅದನ್ನ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಅವರ ಕಾಲಿಗೆ ಬೀಳುವ ಮೂಲವೇ ವ್ಯಕ್ತಪಡಿಸಿದರು. ಆದರೆ, ಚರಣ್ ರಾಜ್ ಅವರಿಗೆ ಇದು ಇಷ್ಟ ಆಗ್ಲಿಲ್ಲ ನೋಡಿ. ಅದಕ್ಕೇನೆ ದುನಿಯಾ ವಿಜಯ್ ಅವರಿಗೆ ಬೇಡ ಅಂತಲೇ ಮೇಲೆ ಎಬ್ಬಿಸಿದರು.
ದುನಿಯಾ ವಿಜಯ್ ಅವರ ಈ ಒಂದು ಖುಷಿಯ ವಿಡಿಯೋವನ್ನ ಮಗಳು ಮೋನಿಷಾ ವಿಜಯ್ ಕುಮಾರ್ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ಒಂದು ವಿಡಿಯೋ ಶೇರ್ ಮಾಡಿದ್ದಾರೆ.
ನೀವೆಲ್ಲ ಬಾವ ಬಾವ ಹಾಡನ್ನ ನೋಡಿ ಖುಷಿಪಟ್ಟಿದ್ದೀರಿ. ಅಷ್ಟೆ ಚೆನ್ನಾಗಿಯೇ ರಿಸೀವ್ ಮಾಡಿದ್ದೀರಿ. ಆದರೆ, ಈ ಒಂದು ಹಾಡಿನ ಹಿಂದೆ ಇರೋ ಕ್ರಿಯೇಟಿವಿಟಿಯ ಕ್ಷಣಗಳು ಅಷ್ಟೆ ಚೆನ್ನಾಗಿಯೇ ಇವೆ. ಅದೇ ವಿಡಿಯೋವನ್ನ ದುನಿಯಾ ವಿಜಯ್ ಅವರ ಮಗಳು ಮೋನಿಷಾ ವಿಜಯ್ ಶೇರ್ ಮಾಡಿಕೊಂಡಿದ್ದಾರೆ.
ಈ ಒಂದು ಚಿತ್ರಕ್ಕೆ ದುನಿಯಾ ವಿಜಯ್ ಅವರ ನಿರ್ದೇಶನ ಇದೆ. ದೊಡ್ಮನೆ ವಿನಯ್ ರಾಜಕುಮಾರ್ ಈ ಚಿತ್ರದಲ್ಲಿ ಬೇರೆ ರೀತಿನೇ ಕಾಣಿಸುತ್ತಿದ್ದಾರೆ. ಮೋನಿಷಾ ವಿಜಯ್ ಕುಮಾರ್ ಕೂಡ ಈ ಚಿತ್ರದಲ್ಲಿ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ಒಳ್ಳೆ ಅವಕಾಶ ಪಡೆದುಕೊಂಡಿದ್ದಾರೆ.
ಈ ಚಿತ್ರದ ಪೋಸ್ಟರ್ಸ್ ಈಗಾಗಲೇ ಹೆಚ್ಚು ಗಮನ ಸೆಳೆದಿವೆ.ಇದರೊಟ್ಟಿಗೆ ಬಾವ ಬಾವ ಹಾಡು ವೈರಲ್ ಆಗಿದೆ. ಈ ಹಾಡಿನ ಮೇಕಿಂಗ್ ವಿಡಿಯೋದಲ್ಲಿ ದುನಿಯಾ ವಿಜಯ್ ಖುಷಿಯ ಕ್ಷಣಗಳು ಕ್ಯಾಪ್ಚರ್ ಆಗಿವೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
May 22, 2026 11:02 PM IST













