Last Updated:
ಈ ಚಿತ್ರ ಗೆದ್ದರೆ ಆಯಿತು. ದುನಿಯಾ ವಿಜಯ್ ಹ್ಯಾಟ್ರಿಕ್ ಡೈರೆಕ್ಟರ್ ಆಗ್ತಾರೆ. ಮಗಳು ಮೋನಿಷಾ ನಾಯಕಿ ಆಗಿರೋ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಹೀರೋ ಆಗಿದ್ದಾರೆ. ಇವರ ಈ ‘ಸಿಟಿ ಲೈಟ್ಸ್’ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಇದರ ಡೇಟ್ ಕೂಡ ಗೊತ್ತಾಗಿದೆ. ಅದರ ವಿವರ ಇಲ್ಲಿದೆ ಓದಿ.
ದುನಿಯಾ ವಿಜಯ್ (Duniya Vijay) ಡೈರೆಕ್ಷನ್ ಮಾಡಿರೋ ಸಿಟಿ ಲೈಟ್ಸ್ (City Lights) ರೆಡಿ ಆಗಿದೆ. ಕಂದಮ್ಮ ಹಾಡು (Kandamma Song) ವೈರಲ್ ಆಗಿದೆ. ಚಿತ್ರದ ಎರಡು ಇವೆಂಟ್‌ಗಳೂ ಆಗಿವೆ. ಆದರೆ, ಚಿತ್ರದ ರಿಲೀಸ್ ಡೇಟ್ (Release Date) ಮಾತ್ರ ರಿವೀಲ್ ಆಗಿರಲಿಲ್ಲ. ಅದನ್ನ ಆಗಸ್ಟ್-3 ರಂದು ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ. ಮುಂದಿನ ತಿಂಗಳು ನಮ್ಮ ಚಿತ್ರ ರಿಲೀಸ್ ಅಂತ ಹೇಳಿದೆ. ಈ ಚಿತ್ರದ ಇತರ ಮಾಹಿತಿ ಇಲ್ಲಿದೆ ಓದಿ.
ಸಿಟಿ ಲೈಟ್ಸ್ ಚಿತ್ರ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಮುಂದಿನ ತಿಂಗಳು ಈ ಚಿತ್ರ ತೆರೆ ಕಾಣುತ್ತಿದೆ. ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆ ಆಗುತ್ತಿದೆ.
ಈ ಚಿತ್ರ ಗೆದ್ದರೆ ದುನಿಯಾ ವಿಜಯ್ ಹ್ಯಾಟ್ರಿಕ್ ಹಿಟ್ ಡೈರೆಕ್ಟರ್ (ಚಿತ್ರ ಕೃಪೆ: ದುನಿಯಾ ವಿಜಯ್ ಇನ್‌ಸ್ಟಾಗ್ರಾಮ್)
ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ನಾಯಕರಾಗಿದ್ದಾರೆ. ಮೋನಿಷಾ ವಿಜಯ್ ಕುಮಾರ್‌ಗೆ ಜೋಡಿ ಆಗಿದ್ದಾರೆ. ಇವರ ಜೋಡಿಯ ‘ಕಂದಮ್ಮ’ ಹಾಡು ಮೋಡಿ ಮಾಡುತ್ತಿದೆ.
ಸೆಪ್ಟೆಂಬರ್-18 ರಂದು ಈ ಸಿಟಿ ಲೈಟ್ಸ್ ಚಿತ್ರ ರಿಲೀಸ್ ಆಗುತ್ತಿದೆ. ರಾಜ್ಯದ ತುಂಬೆಲ್ಲ ಕೆವಿಎನ್ ಸಂಸ್ಥೆ ಈ ಚಿತ್ರವನ್ನ ರಿಲೀಸ್ ಮಾಡುತ್ತಿದೆ.
ದುನಿಯಾ ವಿಜಯ್ ಅವರ ಈ ಚಿತ್ರಕ್ಕೆ ಮಾಸ್ತಿ ಡೈಲಾಗ್ ಬರೆದಿದ್ದಾರೆ. ಈ ಚಿತ್ರಕ್ಕೆ ಶಿವಸೇನಾ ಹಾಗೂ ಹರ್ಷ ಗೌಡ ಕ್ಯಾಮರಾವರ್ಕ್ ಮಾಡಿದ್ದಾರೆ.
ದುನಿಯಾ ವಿಜಯ್ ಈ ಹಿಂದೆ ಎರಡು ಸಿನಿಮಾ ಮಾಡಿದ್ದಾರೆ. ಸಲಗ ಇವರ ನಿರ್ದೇಶನದ ಮೊದಲ ಚಿತ್ರವೇ ಆಗಿದೆ. ಇದನ್ನ ಜನ ಒಪ್ಪಿಕೊಂಡರು. ಈ ಚಿತ್ರ ಆದ್ಮೇಲೆ ದುನಿಯಾ ವಿಜಯ್ ಮತ್ತೊಂದು ಸಿನಿಮಾ ಮಾಡಿದರು.
“ಸಿಟಿ ಲೈಟ್ಸ್” ರಿಲೀಸ್ ಡೇಟ್ ಅನೌನ್ಸ್
ದುನಿಯಾ ವಿಜಯ್ ಡೈರೆಕ್ಷನ್ ಮಾಡಿರೋ ಎರಡನೇ ಚಿತ್ರ ಯಾವುದು ಅನ್ನೋದು ಗೊತ್ತೇ ಇದೆ. ಅದನ್ನ ಇಲ್ಲಿ ಮತ್ತೆ ಹೇಳೋದಾದ್ರೆ, ಅದು ಭೀಮ ಚಿತ್ರವೇ ಆಗಿದೆ. ಈ ಚಿತ್ರವು ಒಳ್ಳೆ ಹೆಸರು ತಂದುಕೊಟ್ಟಿದೆ. ಹಿಟ್ ಕೂಡ ಆಗಿದೆ.
ಡೈರೆಕ್ಷನ್ ಲೆಕ್ಕದಲ್ಲಿ ದುನಿಯಾ ವಿಜಯ್ ಅವರಿಗೆ ಸಿಟಿ ಲೈಟ್ಸ್ 3ನೇ ಚಿತ್ರವೇ ಆಗಿದೆ. ಈ ಚಿತ್ರ ಗೆದ್ದರೆ ಆಯಿತು. ಹ್ಯಾಟ್ರಿಕ್ ಡೈರೆಕ್ಟರ್ ಆಗುತ್ತಾರೆ.
ಆ ರೀತಿನೇ ಜನಕ್ಕೆ ಮತ್ತು ಯುವಕರಿಗೆ ಇಷ್ಟ ಆಗುವ ಚಿತ್ರಗಳನ್ನೆ ಮಾಡಿಕೊಂಡು ಬಂದಿದ್ದಾರೆ. ನಾಯಕ ನಟರಾಗಿಯೂ ಅಭಿನಯಿಸಿದ್ದಾರೆ. ಪರಭಾಷೆಯ ಚಿತ್ರಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಈ ಸಿಟಿ ಲೈಟ್ಸ್ ಚಿತ್ರ ಮಾಡಿದ್ದಾರೆ. ರಿಲೀಸ್ ಹಂತಕ್ಕೂ ತಂದಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka














