Last Updated:
ದುಲೀಪ್ ಟ್ರೋಫಿ ಪಂದ್ಯಾವಳಿಯು ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಮೈದಾನದಲ್ಲಿ ನಡೆಯಲಿದೆ.
ಮುಂಬರುವ ದುಲೀಪ್ ಟ್ರೋಫಿಗೆ (Duleep Trophy) ಭಾರತದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ (Ruturaj Giakwad) ಅವರನ್ನು ಪಶ್ಚಿಮ ವಲಯ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ ಮತ್ತು ಅನುಭವಿ ಎಡಗೈ ಸ್ಪಿನ್ ಆಲ್‌ರೌಂಡರ್ ಶಮ್ಸ್ ಮುಲಾನಿ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ವಲಯ ಆಯ್ಕೆ ಸಮಿತಿಯ ಸಭೆಯ ನಂತರ ಸೋಮವಾರ ತಂಡವನ್ನು ಘೋಷಿಸಲಾಗಿದೆ. ದುಲೀಪ್ ಟ್ರೋಫಿ ಪಂದ್ಯಾವಳಿಯು ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಮೈದಾನದಲ್ಲಿ ನಡೆಯಲಿದೆ.
ಕಳೆದ ವರ್ಷ, ಭಾರತದ ಸೀಮ್-ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಪಶ್ಚಿಮ ವಲಯವನ್ನು ಮುನ್ನಡೆಸಿದರು. ತಂಡವು ಸೆಮಿಫೈನಲ್ ತಲುಪಿತ್ತು. ಆದರೆ ಕೇಂದ್ರ ವಲಯವು ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ್ದ ಫೈನಲ್ ಪ್ರವೇಶಿಸಿತ್ತು. ಇದೀಗ ಮುಂಬರುವ ಟೂರ್ನಮೆಂಟ್‌ಗೆ ಗಾಯಕ್ವಾಡ್‌ಗೆ ನಾಯಕತ್ವವನ್ನು ನೀಡಲಾಗಿದೆ.
ಇತ್ತೀಚೆಗೆ ಶ್ರೀಲಂಕಾ ಎ ವಿರುದ್ಧದ 50 ಓವರ್‌ಗಳ ತ್ರಿಕೋನ ಸರಣಿ ಮತ್ತು ರೆಡ್-ಬಾಲ್ ಪಂದ್ಯಗಳಿಗಾಗಿ ಭಾರತ ಎ ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಲಾಗಿದೆ. ಪಶ್ಚಿಮ ವಲಯದ ತಂಡದಲ್ಲಿ ಹಾರ್ವಿಕ್ ದೇಸಾಯಿ ಮತ್ತು ಉರ್ವಿಲ್ ಪಟೇಲ್ ಎಂಬ ಇಬ್ಬರು ತಜ್ಞ ವಿಕೆಟ್ ಕೀಪರ್‌ಗಳಿದ್ದಾರೆ. ಗಾಯಕ್ವಾಡ್ ಜೊತೆಗೆ, ಪೃಥ್ವಿ ಶಾ ಮತ್ತು ಖಾನ್ ಸಹೋದರರು (ಸರ್ಫರಾಜ್ ಮತ್ತು ಮುಶೀರ್) ಸಹ ತಂಡದಲ್ಲಿದ್ದಾರೆ. ಜಯಮೀತ್ ಪಟೇಲ್ ಮತ್ತು ಶಿವಾಲಿಕ್ ಶರ್ಮಾ ಬ್ಯಾಟಿಂಗ್ ಲೈನ್‌ಅಪ್ ಅನ್ನು ಬಲಪಡಿಸುತ್ತಾರೆ.
ಸ್ಪಿನ್ ಬೌಲಿಂಗ್ ಕರ್ತವ್ಯಗಳನ್ನು ಉಪನಾಯಕ ಮುಲಾನಿ, ಆಫ್-ಸ್ಪಿನ್ ಆಲ್‌ರೌಂಡರ್ ತನುಷ್ ಕೋಟಿಯನ್ ಮತ್ತು ಎಡಗೈ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ ಅವರಿಗೆ ವಹಿಸಲಾಗಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಠಾಕೂರ್, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ ಮತ್ತು ಆಲ್‌ರೌಂಡರ್ ಅತಿತ್ ಸೇಠ್ ಸೇರಿದ್ದಾರೆ. ಆಯ್ಕೆದಾರರು ಆರು ಸದಸ್ಯರ ಸ್ಟ್ಯಾಂಡ್‌ಬೈ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದಾರೆ, ಇದರಲ್ಲಿ ಜೇ ಗೋಹಿಲ್, ಆರ್ಯ ದೇಸಾಯಿ, ಅರ್ಶಿನ್ ಕುಲಕರ್ಣಿ, ಮಹೇಶ್ ಪಿಥಿಯಾ, ವಿಶಾಲ್ ಜೈಸ್ವಾಲ್ ಮತ್ತು ರಾಜವರ್ಧನ್ ಹಂಗರ್ಗೇಕರ್ ಸೇರಿದ್ದಾರೆ.
ರುತುರಾಜ್ ಗಾಯಕ್‌ವಾಡ್ (ನಾಯಕ), ಶಮ್ಸ್ ಮುಲಾನಿ (ಉಪನಾಯಕ), ಹಾರ್ವಿಕ್ ದೇಸಾಯಿ (ವಿಕೆಟ್‌ಕೀಪರ್), ಉರ್ವಿಲ್ ಪಟೇಲ್ (ವಿಕೆಟ್‌ಕೀಪರ್), ಜಯಮೀತ್ ಪಟೇಲ್, ಪೃಥ್ವಿ ಶಾ, ಶಿವಾಲಿಕ್ ಶರ್ಮಾ, ಸಿದ್ಧಾರ್ಥ್ ದೇಸಾಯಿ, ಸರ್ಫರಾಜ್ ಖಾನ್, ಮುಶೀರ್ ಖಾನ್, ತನುಷ್ ಕೋಟಿಯನ್, ಅತಿತ್ ಸೇಥ್, ಶಾರ್ದೂಲ್ ಠಾಕೂರ್ ಮತ್ತು ತುಷಾರ್ ದೇಶಪಾಂಡೆ.
ಮೀಸಲು ಆಟಗಾರರು: ಜೈ ಗೋಹಿಲ್, ಆರ್ಯ ದೇಸಾಯಿ, ಅರ್ಶಿನ್ ಕುಲಕರ್ಣಿ, ಮಹೇಶ್ ಪಿಥಿಯಾ, ವಿಶಾಲ್ ಜೈಸ್ವಾಲ್ ಮತ್ತು ರಾಜವರ್ಧನ್ ಹಂಗರ್ಗೇಕರ್.
Jul 20, 2026 11:31 PM IST














