Last Updated:
ದುಲೀಪ್ ಟ್ರೋಫಿಗೆ ಉತ್ತರ ವಲಯ ತಂಡ ಪ್ರಕಟಿಸಲಾಗಿದ್ದು, ಟೀಮ್ ಇಂಡಿಯಾ ಬೌಲರ್ಗಳಾದ ಅರ್ಷದೀಪ್ ಸಿಂಗ್ ಮತ್ತು ಅನ್ಶುಲ್ ಕಾಂಬೋಜ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಚ್ಚರಿ ಎಂದರೆ ಈ ತಂಡದಲ್ಲಿ 6 ಜಮ್ಮು-ಕಾಶ್ಮೀರ ಆಟಗಾರರ ಅವಕಾಶ ಪಡೆದಿದ್ದಾರೆ.
ಆಯ್ಕೆಸಮಿತಿ ಪ್ರತಿಷ್ಠಿತ ದೇಶೀಯ ಟೂರ್ನಮೆಂಟ್ ದುಲೀಪ್ ಟ್ರೋಫಿ 2026ಕ್ಕಾಗಿ ಉತ್ತರ ವಲಯ ತಂಡವನ್ನು ಪ್ರಕಟಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ನಾಯಕ ಕನ್ಹಯ್ಯಾ ವಾಧ್ವಾನ್ ನೇತೃತ್ವದಲ್ಲಿ 15 ಸದಸ್ಯರ ತಂಡವನ್ನ ಘೋಷಿಸಲಾಗಿದೆ. ಈ ತಂಡದಲ್ಲಿ ದೆಹಲಿ ಆಟಗಾರ ಆಯುಷ್ ಬದೋನಿ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಟೀಮ್ ಇಂಡಿಯಾ ಬೌಲರ್ಗಳಾದ ಅರ್ಷದೀಪ್ ಸಿಂಗ್ ಮತ್ತು ಅನ್ಶುಲ್ ಕಾಂಬೋಜ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಚ್ಚರಿ ಎಂದರೆ ಈ ತಂಡದಲ್ಲಿ 6 ಜಮ್ಮು-ಕಾಶ್ಮೀರ ಆಟಗಾರರು ಅವಕಾಶ ಪಡೆದಿದ್ದಾರೆ.
ಆಯ್ಕೆದಾರರು ಅರ್ಷದೀಪ್ ಸಿಂಗ್ ಅವರನ್ನು ಟೆಸ್ಟ್ ಸ್ವರೂಪಕ್ಕೆ ಸಿದ್ಧಪಡಿಸುವ ಆಲೋಚನೆಯಿಂದ ಈ ಪ್ರತಿಷ್ಠಿತ ಟೂರ್ನಿಗೆ ಆಯ್ಕೆ ಮಾಡಿದ್ದಾರೆ. ಈಗಾಗಲೇ ಭಾರತದ ಟಾಪ್ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯಗಳಿಗೆ ಒಳಗಾಗಿ, ಒಂದು ಸರಣಿ ಆಡಿದರೆ, ಮತ್ತೊಂದರಲ್ಲಿ ವಿಫಲರಾಗುತ್ತಿದ್ದಾರೆ. ಹಾಗಾಗಿ ಆಯ್ಕೆದಾರರು ಅರ್ಷದೀಪ್ ಅವರನ್ನು ಅವರಿಗೆ ಸಂಭಾವ್ಯ ಬ್ಯಾಕಪ್ ಆಗಿ ನೋಡುತ್ತಿದ್ದಾರೆ ಎಂಬುದನ್ನ ಇದರಿಂದ ತೋರುತ್ತಿದೆ. ಸುಮಾರು ಒಂದು ವರ್ಷದ ನಂತರ ಅರ್ಷದೀಪ್ ಸಿಂಗ್ ರೆಡ್-ಬಾಲ್ ಸ್ವರೂಪದಲ್ಲಿ ಆಡಲು ಸಜ್ಜಾಗಿದ್ದಾರೆ.
ಟೀಮ್ ಇಂಡಿಯಾ ಟಿ20 ಸ್ಟಾರ್ ಅಭಿಷೇಕ್ ಶರ್ಮಾ ಈ ತಂಡಕ್ಕೆ ಆಯ್ಕೆಯಾಗಿಲ್ಲ. ಇವರ ಜೊತೆಗೆ ಮತ್ತೊಬ್ಬ ಪಂಜಾಬ್ ಸ್ಟಾರ್ ಪ್ರಭಸಿಮ್ರನ್ ಸಿಂಗ್ ಕೂಡ ಆಯ್ಕೆಯಾಗಿಲ್ಲ. ವೈಟ್-ಬಾಲ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಈ ಇಬ್ಬರನ್ನು ರೆಡ್-ಬಾಲ್ ಸ್ವರೂಪಕ್ಕೆ ಪರಿಗಣಿಸಲಾಗಿಲ್ಲ.
ಶ್ರೀಲಂಕಾ ವಿರುದ್ಧ ಭಾರತದ ಎರಡು ಟೆಸ್ಟ್ ಸರಣಿಯೊಂದಿಗೆ ಆಗಸ್ಟ್ 23 ರಂದು ದುಲೀಪ್ ಟ್ರೋಫಿ ಪ್ರಾರಂಭವಾಗಲಿದೆ. ಪರಿಣಾಮವಾಗಿ, ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಮತ್ತು ಆಕಿಬ್ ನಬಿ ಅವರನ್ನು ದುಲೀಪ್ ಟ್ರೋಫಿ ತಂಡದಿಂದ ಹೊರಗಿಡಲಾಗಿದೆ.
ಉತ್ತರ ವಲಯ ತಂಡದ ಹೊಸದಾಗಿ ನೇಮಕಗೊಂಡ 24 ವರ್ಷದ ಕನ್ಹಯ್ಯಾ ವಾಧವನ್, 2025-26 ರ ರಣಜಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 13 ಇನ್ನಿಂಗ್ಸ್ಗಳಲ್ಲಿ ಒಂದು ಶತಕ ಸೇರಿದಂತೆ 474 ರನ್ ಗಳಿಸಿದ್ದರು ಮತ್ತು ನಿರ್ಣಾಯಕ ಫೈನಲ್ನಲ್ಲಿ ಅರ್ಧಶತಕದೊಂದಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಹಾಗಾಗಿ ಇವರಿಗೆ ನಾಯಕತ್ವ ಒಲಿದುಬಂದಿದೆ. ಮತ್ತೊಂದು ಗಮನಾರ್ಹ ವಿಷಯವೆಂದರೆ ರಣಜಿ ಟ್ರೋಫಿ ವಿಜೇತ ಜಮ್ಮು ಮತ್ತು ಕಾಶ್ಮೀರ ತಂಡದ ಆರು ಆಟಗಾರರು ಉತ್ತರ ವಲಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಮ್ರಾನ್, ಅಬ್ದುಲ್ ಸಮದ್, ಇಕ್ಬಾಲ್, ಯುಧ್ ವೀರ್ ಸಿಂಗ್, ಸುನಿಲ್ ಕುಮಾರ್, ಆಬಿದ್ ಮುಷ್ತಾಕ್ ಹಾಗೂ ಕಮ್ರಾನ್ ಇಕ್ಬಾಲ್ ಕೂಡ ಈ ತಂಡದಲ್ಲಿದ್ದಾರೆ.
ಸನತ್ ಸಾಂಗ್ವಾನ್, ಕಮ್ರಾನ್ ಇಕ್ಬಾಲ್, ಯಶ್ ಧುಲ್, ಆಯುಷ್ ದೋಸೇಜಾ, ಅಬ್ದುಲ್ ಸಮದ್, ಆಯುಷ್ ಬಡೋನಿ (ಉಪನಾಯಕ), ಕನ್ಹಯ್ಯಾ ವಾಧವನ್ (ನಾಯಕ), ನಿಶಾಂತ್ ಸಿಂಧು, ಅರ್ಷುನ್ ಶರ್ಮಾ, ಅಬಿದ್ ಮುಷ್ತಾಕ್, ಅರ್ಷದೀಪ್ ಸಿಂಗ್, ಸುನಿಲ್ ಕುಮಾರ್, ಅನ್ಶುಲ್ ಕಾಂಬೋಜ್, ಯುಧ್ವಿರ್ ಸಿಂಗ್, ನಿಖಿಲ್ ಕಶ್ಯಪ್














