ಕಾಲೇ ಜೀವನವಾಗಿದ್ದ ಡ್ರಮ್ ಕಲಾವಿದನಿಗೆ ಈಗ ಕಾಲೇ ಇಲ್ಲದ ಸ್ಥಿತಿ ಎದುರಾಗಿದೆ. ಚಿಕಿತ್ಸೆ ಮತ್ತು ಮುಂದಿನ ಜೀವನಕ್ಕಾಗಿ ದೇವಾ ಕುಟುಂಬಕ್ಕೆ ಆರ್ಥಿಕ ನೆರವು ಅಗತ್ಯವಿದೆ.
ಡ್ರಮ್ಮರ್ ದೇವ
ಬೆಂಗಳೂರು: ಕನ್ನಡ ಸಂಗೀತ ಲೋಕದ ಪ್ರಸಿದ್ಧ ಡ್ರಮ್ಮರ್, ‘ಕನ್ನಡದ ಶಿವಮಣಿ’ ಎಂದು ಕರೆಯಲ್ಪಡುವ ಡ್ರಮ್ಮರ್ ದೇವಾ (Drummer Deva) ಅವರು ತೀವ್ರ ಸಂಕಷ್ಟದಲ್ಲಿದ್ದಾರೆ. ಗ್ಯಾಂಗ್ರಿನ್ ಕಾಯಿಲೆಗೆ (Gangrene Disease) ತುತ್ತಾಗಿ ಇತ್ತೀಚೆಗೆ ಅವರ ಒಂದು ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ. ಹಂಸಲೇಖ (Hamsalekha) ಮತ್ತು ಸಾಧು ಕೋಕಿಲ (Sadhu Kokila) ಅವರ ಆರ್ಕೆಸ್ಟ್ರಾ ಸೇರಿದಂತೆ ಹಲವು ಸ್ಟೇಜ್ ಶೋಗಳಲ್ಲಿ ದೇವ ಡ್ರಮ್ ನುಡಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸಾವಿರಾರು ವೇದಿಕೆ ಕಾರ್ಯಕ್ರಮಗಳಿಗೆ ರಿದಮ್ ನೀಡಿದ ಅವರಿಗೆ ಈಗ ಚಿಕಿತ್ಸೆಗಾಗಿ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ.
ಕಾಲೇ ಜೀವನವಾಗಿದ್ದ ಡ್ರಮ್ ಕಲಾವಿದನಿಗೆ ಈಗ ಕಾಲೇ ಇಲ್ಲದ ಸ್ಥಿತಿ ಎದುರಾಗಿದೆ. ಚಿಕಿತ್ಸೆ ಮತ್ತು ಮುಂದಿನ ಜೀವನಕ್ಕಾಗಿ ದೇವಾ ಕುಟುಂಬಕ್ಕೆ ಆರ್ಥಿಕ ನೆರವು ಅಗತ್ಯವಿದೆ. ಕಲಾಭಿಮಾನಿಗಳು, ಸಂಗೀತ ಪ್ರಿಯರು ಹಾಗೂ ಸಾರ್ವಜನಿಕರು ಕೈಲಾದಷ್ಟು ಸಹಾಯ ಮಾಡುವಂತೆ ಕುಟುಂಬ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Vinod Prabhakar: ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ದಿಢೀರ್ ಏರುಪೇರು! ಐಸಿಯುನಲ್ಲಿ ಚಿಕಿತ್ಸೆ
ಆರಂಭದಲ್ಲಿ ಕೇವಲ ಡ್ರಮ್ ಒರೆಸುವ ಕೆಲಸ ಮಾಡುತ್ತಿದ್ದ ಡ್ರಮ್ಮರ್ ದೇವ ಅವರು, ತಮ್ಮ ಕಠಿಣ ಪರಿಶ್ರಮ ಮತ್ತು ಸಂಗೀತದ ಮೇಲಿನ ಪ್ರೀತಿಯಿಂದಾಗಿ ಅಪ್ರತಿಮ ಡ್ರಮ್ಮರ್ ಆಗಿ ಬೆಳೆದರು, ಬಳಿಕ ಸಂಗೀತ ಲೋಕದ ದಿಗ್ಗಜ ಇಳಯರಾಜಾ ಸೇರಿದಂತೆ ಹಲವು ಪ್ರಮುಖ ಸಂಗೀತ ನಿರ್ದೇಶಕರ ಜೊತೆ ಇವರು ಕಾರ್ಯನಿರ್ವಹಿಸಿದ್ದಾರೆ. ಡ್ರಮ್ಮರ್ ದೇವಾ ಅವರು ‘5 ಈಡಿಯಟ್ಸ್’ ಮತ್ತು ‘ಪ್ರೀತಿ ನೀ ಹೀಂಗ್ಯಾಕೆ’ ಸೇರಿದಂತೆ ಕನ್ನಡದ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಹಂಸಲೇಖ ಮತ್ತು ಸಾಧು ಕೋಕಿಲ ಅವರ ಆರ್ಕೆಸ್ಟ್ರಾ ಸೇರಿದಂತೆ ಹಲವು ಸ್ಟೇಜ್ ಶೋಗಳಲ್ಲಿ ಡ್ರಮ್ ಬಾರಿಸಿದ್ದಾರೆ. ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಆರ್ಸಿಬಿ ತಂಡದ ಜೊತೆ ಡ್ರಮ್ಮರ್ ದೇವ ನಂಟು!
ಡ್ರಮ್ಮರ್ ದೇವ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಯಾಗಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪ್ರತಿಯೊಂದು ಆರ್ಸಿಬಿ ಪಂದ್ಯದಲ್ಲಿ ಡ್ರಮ್ ಬಾರಿಸಿ ಹುರಿದುಂಬಿಸುತ್ತಾರೆ. ತಮ್ಮ ಎಲೆಕ್ಟ್ರಿಕ್ ಬೀಟ್ಸ್ ಮತ್ತು ಡ್ರಮ್ಸ್ ಮೂಲಕ ಸ್ಟೇಡಿಯಂನಲ್ಲಿ ಅಭಿಮಾನಿಗಳನ್ನು ರಂಜಿಸಿದ್ದರು.