Last Updated:
Dragon Movie: ಗ್ಲಿಂಪ್ಸ್‌ಗೆ ಸಿಕ್ಕಿರುವ ಭಾರೀ ಪ್ರತಿಕ್ರಿಯೆಗೆ ಸಂತೋಷ ವ್ಯಕ್ತಪಡಿಸಿರುವ ಜೂನಿಯರ್ ಎನ್‌ಟಿಆರ್, ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತೀಯ ಸಿನಿಪ್ರಿಯರು ಬಹು ನಿರೀಕ್ಷೆಯಿಂದ ಕಾದಿದ್ದ ಡ್ರಾಗನ್ (Dragon) ಚಿತ್ರದ ಮೊದಲ ಗ್ಲಿಂಪ್ಸ್ ಇಂದು ಬಿಡುಗಡೆಯಾಗಿ ಜೂನಿಯರ್ ಎನ್‌ಟಿಆರ್ (Junior NTR) ಅಭಿಮಾನಿಗಳಿಗೆ ಅದ್ಭುತ ಉಡುಗೊರೆ ನೀಡಿದೆ . ಆಕ್ಷನ್, ತೀವ್ರತೆ ಮತ್ತು ಭರ್ಜರಿ ಪ್ರೆಸೆಂಟೇಷನ್ ನಿಂದ ಕೂಡಿದ ಈ ಗ್ಲಿಂಪ್ಸ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಡ್ರಾಗನ್ ಗ್ಲಿಂಪ್ಸ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲಾ ವೇದಿಕೆಗಳಲ್ಲಿ ಟ್ರೆಂಡ್ ಆಗಲು ಆರಂಭವಾಗಿದೆ . ಪ್ರಶಾಂತ್ ನೀಲ್ ತಮ್ಮ ವಿಶೇಷವಾದ ಡಾರ್ಕ್, ಇಂಟೆನ್ಸ್ ಮತ್ತು ಮಾಸ್ ಮೇಕಿಂಗ್‌ನೊಂದಿಗೆ ಜೂನಿಯರ್ ಎನ್‌ಟಿಆರ್ ಅವರನ್ನು ಇನ್ನಷ್ಟು ವೈಲೆಂಟ್ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲವರು ಪ್ರಶಾಂತ್ ನೀಲ್ ಶೈಲಿ ಇದೇ ಆದರೂ ಜೂನಿಯರ್ ಎನ್‌ಟಿಆರ್ ಲುಕ್ ಮಾತ್ರ ಇದೀಗ ಎಲ್ಲರ ಗಮನ ಸೆಳೆಯುತ್ತದೆ. ಇನ್ನು ಬಿಡುಗಡೆಗೊಂಡ ಗ್ಲಿಂಪ್ಸ್ ಕಂಡು ಜನ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಆರ್‌ಆರ್‌ಆರ್ ಮತ್ತು ಕೆಜಿಎಫ್ 2 ನಂತರ 1000 ಕೋಟಿಗೂ ಹೆಚ್ಚು ಗಳಿಸುವ ಸಿನಿಮಾ ಆಗಲಿ ಎಂದು ಶುಭ ಹಾರೈಸುತ್ತಿದ್ದಾರೆ.
ಕೆಜಿಎಫ್ ಮೂಲಕ ದೇಶದಾದ್ಯಂತ ಖ್ಯಾತಿ ಗಳಿಸಿದ ಪ್ರಶಾಂತ್ ನೀಲ್ ಅವರು ಸಲಾರ್ ನಂತರ ಮತ್ತೊಂದು ಭಾರೀ ಮಟ್ಟದ ಆಕ್ಷನ್ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಜೂನಿಯರ್ ಎನ್‌ಟಿಆರ್ ಕೂಡ ಆರ್‌ಆರ್‌ಆರ್ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವುದರಿಂದ, ಈ ಇಬ್ಬರ ಕಾಂಬಿನೇಷನ್ ಮೇಲೆ ಸಹಜವಾಗಿಯೇ ಅಪಾರ ನಿರೀಕ್ಷೆ ನಿರ್ಮಾಣವಾಗಿದೆ.
ಗ್ಲಿಂಪ್ಸ್‌ಗೆ ಸಿಕ್ಕಿರುವ ಭಾರೀ ಪ್ರತಿಕ್ರಿಯೆಗೆ ಸಂತೋಷ ವ್ಯಕ್ತಪಡಿಸಿರುವ ಜೂನಿಯರ್ ಎನ್‌ಟಿಆರ್, ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ವರ್ಷಗಳಿಂದ ಅಭಿಮಾನಿಗಳು ತೋರಿಸುತ್ತಿರುವ ಬೆಂಬಲವೇ ತಮ್ಮ ಪ್ರಯಾಣದ ದೊಡ್ಡ ಆಶೀರ್ವಾದ. ಜನ್ಮದಿನದ ಶುಭಾಶಯ ಕೋರಿದ ಪ್ರತಿ ಅಭಿಮಾನಿಗೂ ಅವರು ಧನ್ಯವಾದ ಹೇಳಿದ್ದಾರೆ.
ಡ್ರಾಗನ್ ಚಿತ್ರದ ಕುರಿತು ಈಗಾಗಲೇ ಹಲವಾರು ಊಹಾಪೋಹಗಳು ಕೇಳಿಬಂದಿದ್ದರೂ, ಮೊದಲ ಗ್ಲಿಂಪ್ಸ್ ಎಲ್ಲಾ ನಿರೀಕ್ಷೆಗಳನ್ನು ಮತ್ತಷ್ಟು ಎತ್ತಲು ಕಾರಣವಾಗಿದೆ. ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಬೇಕಿದ್ದರೂ, ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಅಲೆ ಸೃಷ್ಟಿಯಾಗಿರುವುದು ಮಾತ್ರ ನಿಜ.
ಜೂನಿಯರ್ ಎನ್‌ಟಿಆರ್ ಈ ಚಿತ್ರದಲ್ಲಿ ಡ್ರ್ಯಾಗನ್ ಆಗಿಯೇ ಅಬ್ಬರಿಸಿದ್ದಾರೆ. ಈ ಡ್ರ್ಯಾಗನ್ ಒಳ್ಳೆಯವನಾ? ಕೆಟ್ಟವನಾ ಅನ್ನುವ ಕುತೂಹಲವು ಇದೆ.ಆದರೆ, ಗ್ಲಿಂಪ್ಸ್ ನೋಡಿದ್ರೆ ಪಕ್ಕಾ ವಿಲನ್ ಅನಿಸುತ್ತದೆ. ಕೆಜಿಎಫ್ ರಾಕಿ ಭಾಯ್ ರೀತಿನೇ ಈ ಡ್ರ್ಯಾಗನ್ ಬೆಳೆಯುತ್ತಾನೆ ಅನಿಸುತ್ತದೆ. ಈ ಒಂದು ಫೀಲ್ ಅನ್ನ ಡ್ರ್ಯಾಗನ್ ಚಿತ್ರದ ಗ್ಲಿಂಪ್ಸ್ ವಿಡಿಯೋ ಈಗಲೇ ಕೊಟ್ಟಿದೆ. ಮುಂದಿನ ವರ್ಷ 11.06.2027 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













