Dragon-Junior NTR: ಜೂನಿಯರ್​​ NTR ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಬಿಗ್​ ಗಿಫ್ಟ್​, ‘ಡ್ರ್ಯಾಗನ್’ ಸಿನಿಮಾ ಗಿಂಪ್ಸ್ ಔಟ್​ | | ACTPnews

News18


Last Updated:

ಎನ್​ಟಿಆರ್​​ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್​​ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಹೆಸರನ್ನು ‘ಡ್ರ್ಯಾಗನ್’ ಸಿನಿಮಾ ಸ್ಪೆಷಲ್​​​ ಗ್ಲಿಂಪ್ಸ್ ವಿಡಿಯೋ ಬಿಡುಗಡೆಯಾಗಿದೆ

News18
News18

ಜೂನಿಯರ್ ಎನ್​​ಟಿಆರ್​​ ಹುಟ್ಟುಹಬ್ಬದಂದು (NTR Birthday) ಅಭಿಮಾನಿಗಳಿಗೆ ಬಿಗ್​ ಗಿಫ್ಟ್​​  ಸಿಕ್ಕಿದೆ. ಎನ್​ಟಿಆರ್​​ ಹಾಗೂ ಪ್ರಶಾಂತ್ ನೀಲ್ (Prashant Neel) ಕಾಂಬಿನೇಷನ್​​ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಹೆಸರನ್ನು ‘ಡ್ರ್ಯಾಗನ್’ (Dragon Movie) ಸಿನಿಮಾ ಸ್ಪೆಷಲ್​​​ ಗ್ಲಿಂಪ್ಸ್ ವಿಡಿಯೋ ಬಿಡುಗಡೆಯಾಗಿದೆ. ಡ್ರ್ಯಾಗನ್ ಸಿನಿಮಾದಲ್ಲಿ ಜೂನಿಯರ್​ ಎನ್​​ಟಿಆರ್​ ಲುಕ್​ ನೋಡಿ ಅಭಿಮಾನಿಗಳು (Fans) ಫಿದಾ ಆಗಿದ್ದಾರೆ.

ಡ್ರ್ಯಾಗನ್ ಗಿಂಪ್ಸ್​ ಔಟ್​

ಜೂನಿಯರ್​​ NTR  ಹಾಗೂ ಪ್ರಶಾಂತ್​ ನೀಲ್ ಚಿತ್ರಕ್ಕೆ ‘ಡ್ರ್ಯಾಗನ್’ ಎಂಬ ಪವರ್‌ಫುಲ್ ಟೈಟಲ್​ ಫೈನಲ್​ ಮಾಡಿದೆ. ಇಂದು (ಮೇ 20) NTR ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮಂಗಳವಾರ ರಾತ್ರಿ 11.52ಕ್ಕೆ  ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. 4.28 ನಿಮಿಷಗಳ ಈ ಗ್ಲಿಂಪ್ಸ್ ವೀಡಿಯೊ ಡ್ರ್ಯಾಗನ್ ಸಿನಿಮಾದ ಕಥೆ ಹಾಗೂ ಪಾತ್ರಗಳ ಸುಳಿವು ಕೊಟ್ಟಿದೆ.

ಪ್ರಶಾಂತ್ ನೀಲ್ ಹೊಸ ಮ್ಯಾಜಿಕ್​

ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ಅಂದ್ರೆ ನಿರೀಕ್ಷೆ ಹೆಚ್ಚೇ ಇರುತ್ತೆ. ಇಲ್ಲಿ ಪ್ರಶಾಂತ್ ಪ್ರಯತ್ನ ಮಾಡಿದ್ದು, ಕಥೆ ಏನು ಅನ್ನೋ ಸುಳಿವು ಬಿಚ್ಚಿಟ್ಟಿದ್ದಾರೆ. ‘ಡ್ರ್ಯಾಗನ್’ ಕಥೆಯು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಹಿನ್ನೆಲೆಯಾಗಿದೆ. ಹೆರಾಯಿನ್ ತಯಾರಿಸಲು ಬಳಸುವ ಅಫೀಮು ತೋಟಗಳಲ್ಲಿ ವ್ಯಾಪಾರ ಮಾಡುವ ಉದ್ದೇಶಕ್ಕಾಗಿ ಆ ಸಮಯದಲ್ಲಿ ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ್ರು ಎಂಬಂತೆ ದೃಶ್ಯದಲ್ಲಿ ತೋರಿಸಲಾಗಿದೆ.

ಅಫ್ಘಾನಿಸ್ತಾನ, ತ್ರಿಕೋನ ಯುದ್ಧ

ಅಫ್ಘಾನಿಸ್ತಾನ ಮತ್ತು ಗೋಲ್ಡನ್ ಟ್ರಯಾಂಗಲ್ ವಿಶ್ವದ ಎರಡು ಪ್ರಮುಖ ಅಫೀಮು ಬೆಳೆಯುವ ಪ್ರದೇಶಗಳಾಗಿವೆ. ಬ್ರಿಟಿಷರು ಭಾರತವನ್ನು ತೊರೆದರೂ, ಅವರು ವಿಶ್ವದ ಅತ್ಯಂತ ಲಾಭದಾಯಕ ಅಫೀಮು ವ್ಯಾಪಾರವನ್ನು ಬಿಟ್ಟು ಹೋದರು. ಕಾಲಾನಂತರದಲ್ಲಿ, ಎರಡು ಪ್ರಮುಖ ಮಾಫಿಯಾ ಗುಂಪುಗಳು ಹೊರಹೊಮ್ಮಿದವು. ಅವು ‘ಅಫ್ಘಾನ್ ಟ್ರೇಡಿಂಗ್ ಕಂಪನಿ’ ಮತ್ತು ‘ಗೋಲ್ಡನ್ ಟ್ರೇಡಿಂಗ್ ಕಂಪನಿ’.

‘The DEVIL WAS BORN’

ಗ್ಲಿಂಪ್ಸ್​ನಲ್ಲಿ ನಾಯಕ ನಟಿ ರುಕ್ಮಿಣಿ ವಸಂತ್ ಒಂದು ಕಥೆ ಹೇಳ್ತಾ ದೇವರ ಸೃಷ್ಟಿ ಬಗ್ಗೆ ವಿವರಿಸುತ್ತಾರೆ. ಪಾತ್ರಗಳು ಅವಳ ಕಥೆಯ ಆಧಾರದ ಮೇಲೆ ತೆರೆದುಕೊಳ್ಳುತ್ತೆ. ಕೊನೆಯಲ್ಲಿ, The DEVIL WAS BORN ಎನ್ನುತ್ತಾ ಎನ್​ಟಿಆರ್ ಅವರ ಪವರ್ ಫುಲ್​ ಎಂಟ್ರಿ ಆಗಿದ್ದು, ಇದು ಡ್ರ್ಯಾಗನ್ ಗ್ಲಿಂಪ್ಸ್‌ನ ಹೈಲೈಟ್ ಆಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports