DK Shivakumar: ಬೆಂಗಳೂರು ನಿವಾಸಿಗಳಿಗೆ ಬಂಪರ್! ನಾಳೆ ಡಿಸಿಎಂ ಡಿಕೆಶಿ ಕೊಡಲಿರುವ ಬಿಗ್ ಗಿಫ್ಟ್ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರಿಗೆ ಬಿಗ್ ಗಿಫ್ಟ್ (ಸಾಂದರ್ಭಿಕ ಚಿತ್ರ)


Last Updated:

ಡಿಸಿಎಂ ಡಿಕೆ ಶಿವಕುಮಾರ್ ಮೇ 13ರಂದು ಬೆಂಗಳೂರಿಗೆ ದೊಡ್ಡ ಘೋಷಣೆ ಮಾಡುವ ಸುಳಿವು ನೀಡಿದ್ದಾರೆ. ಸಾರಿಗೆ, ನಮ್ಮ ಮೆಟ್ರೋ, ಕಾವೇರಿ ನೀರಿ, ಬಿಡಬ್ಲ್ಯೂಎಸ್​ಎಸ್​ಬಿ ಯೋಜನೆಗಳ ಬಗ್ಗೆ ಬಿಗ್ ಅಪ್‌ಡೇಟ್ ಸಿಗುವ ನಿರೀಕ್ಷೆ ಇದೆ.

ಬೆಂಗಳೂರಿಗೆ ಬಿಗ್ ಗಿಫ್ಟ್ (ಸಾಂದರ್ಭಿಕ ಚಿತ್ರ)
ಬೆಂಗಳೂರಿಗೆ ಬಿಗ್ ಗಿಫ್ಟ್ (ಸಾಂದರ್ಭಿಕ ಚಿತ್ರ)

ಬೆಂಗಳೂರು ನಿವಾಸಿಗಳಿಗೆ ನಾಳೆ (Bengaluru) ಒಂದು ಬಿಗ್ ಗುಡ್ ನ್ಯೂಸ್ ಸಿಗಲಿದೆ. ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಈ ಬಗ್ಗೆ ಒಂದು ಸುಳಿವು ನೀಡಿದ್ದು, ಇದು ಜನರ ಕುತೂಹಲ, ನಿರೀಕ್ಷೆಯನ್ನು ಡಬಲ್ ಮಾಡಿದೆ. ಮೇ 13 ರಂದು ಅಂದರೆ ನಾಳೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಪ್ರಮುಖ ಘೋಷಣೆ ಮಾಡೋದಾಗಿ ಡಿಸಿಎಂ ಹೇಳಿದ್ದಾರೆ. ಬೆಂಗಳೂರು ಬಹು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ (Namma Metro) ನೀಡುತ್ತಾರಾ? ಜನರ ಜೀವನವನ್ನು ಉನ್ನತೀಕರಿಸುವ ಉದ್ದೇಶದಿಂದ ನಾಳೆ ಪ್ರಮುಖ ಘೋಷಣೆ ಹೊರಬರುವ (Cauvery Water) ನಿರೀಕ್ಷೆಯನ್ನು ಜನರು ಮಾಡುತ್ತಿದ್ದಾರೆ. ಡಿಕೆಶಿ ಮಾಡುವ ಘೋಷಣೆ, ಆರ್ಥಿಕತೆಗೆ ಬಿಗ್ ಬೂಸ್ಟ್ ನೀಡುತ್ತಾ ಅಂತ ಕಾದುನೋಡಬೇಕಿದೆ.

ಬೆಂಗಳೂರಿನಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರು, ಬೆಂಗಳೂರು ಜನರಿಗೆ ಒಂದು ದೊಡ್ಡ ಗ್ಯಾರಂಟಿ ಕೊಡುತ್ತಿದ್ದೇವೆ, ಮೇ 13 ರಂದು ಈ ಬಗ್ಗೆ ತಿಳಿಸುತ್ತೇನೆ ಎಂದಿದ್ದರು. ಆದರೆ ಇದು ಯಾವುದರ ಬಗ್ಗೆ ಇರಲಿದೆ ಅನ್ನೋದು ಇನ್ನು ನಿಗೂಢವಾಗಿದೆ. ಸಾರಿಗೆ ಅಥವಾ ನೀರಿನ ಸಮಸ್ಯೆ ಬಗ್ಗೆ ಬಹುದೊಡ್ಡ ಘೋಷಣೆ ಆಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವರ್ಷಗಳಿಂದ ಬೆಂಗಳೂರನ್ನು ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ಜೊತೆಗೆ ಬೇಸಿಗೆ ಬಂದರೇ ಸಾಕು ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಇವುಗಳಿಗೆ ಪರಿಹಾರವನ್ನು ಹುಡುಕುವ ಬಗ್ಗೆ ಇರಬಹುದು. ಅಥವಾ ಬೆಂಗಳೂರು ಮೆಟ್ರೋಗೆ ಸಂಬಂಧಿಸಿದಂತೆ ಯಾವುದಾದರೂ ಬಿಗ್ ಅಪ್‌ಡೇಟ್ ನೀಡ್ತಾರಾ ಎಂದು ನಗರದ ಜನರು ಕಾತರದಿಂದಿದ್ದಾರೆ. ಮೆಟ್ರೋ ವಿಸ್ತರಣೆಯಾದರೆ ಟೆಕ್ ಹಬ್ ನಲ್ಲಿ ಪ್ರಯಾಣ ಸುಲಭವಾಗುತ್ತದೆ. ಸಾರ್ವಜನಿಕರ ಸಾರಿಗೆ ಉತ್ತಮ ಮಾಡಬೇಕು ಎಂಬುದು ಬೆಂಗಳೂರು ಜನರ ಅತೀ ದೊಡ್ಡ ಬೇಡಿಕೆಯಾಗಿದೆ.

ಸದ್ಯ ಬೆಂಗಳೂರಿನ ಜನರ ಗಮನ ಮೆಟ್ರೋ ಯಲ್ಲೋ ಲೈನ್ ಕಡೆ ಹೆಚ್ಚಿದೆ. ಜೊತೆಗೆ ಟನಲ್ ರೋಡ್ ಯೋಜನೆಯೂ ಗಮನ ಸೆಳೆದಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಣ ಮಾಡಲು ಈ ಎರಡು ಯೋಜನೆಗಳು ಪ್ರಮುಖ ಪಾತ್ರವಹಿಸಿವೆ. ಇನ್ನು ಹೊಸ ನಿಲ್ದಾಣಗಳ ಘೋಷಣೆ, ಪ್ರಯಾಣ ದರ ಬಗ್ಗೆಯೂ ಯೋಚನೆ ಮಾಡ್ತಿದ್ದಾರೆ. ಏಕೆಂದರೆ ಈ ಘೋಷಣೆಗಳು ಜನರ ಆರ್ಥಿಕ ಸ್ಥಿತಿಗೆ ನೇರವಾಗಿ ಪ್ರಭಾವ ಮಾಡುತ್ತವೆ. ನಗರವೂ ದೀರ್ಘಾವಧಿಯಲ್ಲಿ ಸುಸ್ಥಿರ ಅಭಿವೃದ್ಧಿಯಾಗಲು ಸಾರಿಗೆ ಮತ್ತು ಸಂಪರ್ಕ ಮಹತ್ವದ ಪಾತ್ರ ವಹಿಸುತ್ತದೆ.

ಮತ್ತೊಂದು ಕಡೆ ಬೆಂಗಳೂರು ನೀರಾವರಿಯ ಬಗ್ಗೆ ಅಂದರೆ ಬಿಡಬ್ಲ್ಯೂಎಸ್​ಎಸ್​ಬಿ ಬಗ್ಗೆಯೂ ದೊಡ್ಡ ಘೋಷಣೆ ಆಗಬಹುದು ಎಂದು ಹಲವರು ಊಹೆ ಮಾಡುತ್ತಿದ್ದಾರೆ. ಏಕೆಂದರೆ ಕಾವೇರಿ ಸ್ಟೇಜ್ 5ನೇ ಯೋಜನೆಯನ್ನು ವಿಸ್ತರಣೆ ಮಾಡಿ ನಗರದ ಹೊಸ ಪ್ರದೇಶಗಳಿಗೆ ನೀರು ಸಂಪರ್ಕ ಕಲ್ಪಿಸುವುದರಿಂದ ಲಕ್ಷಾಂತರ ಮಂದಿಗೆ ಅನುಕೂಲ ಆಗಲಿದೆ. ಹೊರವಲಯದ ಜನರು ಹಲವು ವರ್ಷಗಳಿಂದ ಕಾವೇರಿ ನೀರಿಗಾಗಿ ಕಾಯುತ್ತಿದ್ದಾರೆ. ಇದರಿಂದ ಟ್ಯಾಂಕರ್ ದಂಧೆಗೆ ಬ್ರೇಕ್ ಹಾಕಲು ಮಹತ್ವದ ಹೆಜ್ಜೆಯಾಗುತ್ತದೆ.

ಇದನ್ನೂ ಓದಿ: Sangeetha at Vijay Oath Ceremony: ವಿಜಯ್ ಪ್ರಮಾಣ ವಚನದಲ್ಲಿ ತ್ರಿಶಾ ಜೊತೆ ಕಾಣಿಸಿಕೊಂಡ ಸಂಗೀತಾ; ವಿಡಿಯೋ ವೈರಲ್!

ಆದರೆ, ಡಿಕೆ ಶಿವಕುಮಾರ್ ಅವರು ಮಾತ್ರ ಈ ಹೊಸ ಘೋಷಣೆ ನಗರದ ರೂಪುರೇಖೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಒಂದು ಅರ್ಥಪೂರ್ಣವಾಗಿರಲಿದೆ ಎಂದು ಹೇಳಿದ್ದಾರೆ. ನಾಳೆ ಯಾವ ಬಿಗ್ ಅಪ್‌ಡೇಟ್ ಸಿಗಲಿದೆ ಎಂದು ಸಾಮಾನ್ಯ ಜನರು, ಉದ್ಯಮಿಗಳು, ವ್ಯಾಪಾರಿಗಳು ಮೀಡಿಯಾ ಕಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಯಾವುದೇ ರಂಗಕ್ಕೆ ಸೇರಿದ್ದರೂ ಬೆಂಗಳೂರು ಅಭಿವೃದ್ಧಿಗೆ ಗ್ಲೋಬಲ್ ಸಿಟಿಯಾಗಿ ಬದಲಾವಣೆಯಾಗಲು ಈ ಅಪ್​​ಡೇಟ್ ಸಹಾಯಕವಾಗಲಿ ಎಂದು ನಿರೀಕ್ಷೆ ಮಾಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed