Last Updated:
ಟಾಲಿವುಡ್ ಸ್ಟಾರ್ ಮೇಕರ್ ನಿರ್ದೇಶಕ ರಾಘವೇಂದ್ರ ರಾವ್ ವಿಡಿಯೋ ವೈರಲ್ ಆಗಿದೆ. ವಿಕ್ಟರಿ ವೆಂಕಟೇಶ್ ಅವರ ಹೊಸ ಚಿತ್ರದ ಮುಹೂರ್ತದ ಸಮಯದಲ್ಲಿ ಈ ವಿಡಿಯೋ ಏನೇನೋ ಹೇಳುತ್ತದೆ. ಇದರ ವಿವರ ಇಲ್ಲಿದೆ ಓದಿ.
ವಿಕ್ಟರಿ ವೆಂಕಟೇಶ್ (Victory Venkatesh) ಮತ್ತು ನಂದಮೂರಿ ಕಲ್ಯಾಣ್ ರಾಮ್ ಚಿತ್ರ ಸೆಟ್ಟೇರಿದೆ. ಆದರೆ, ಈ ಚಿತ್ರದ ಸುದ್ದಿ ಅಷ್ಟೇನೂ ವೈರಲ್ ಆಗಿಲ್ಲ. ಈ ಚಿತ್ರದ ಮುಹೂರ್ತಕ್ಕೆ ಬಂದ 84 ವರ್ಷದ ಡೈರೆಕ್ಟರ್ ಕೆ.ರಾಘವೇಂದ್ರ ರಾವ್ (Raghavendra Rao) ವೈರಲ್ ಆಗಿದ್ದಾರೆ. ನಟಿಯರನ್ನ ಟಚ್ ಮಾಡಿರೋದಕ್ಕೆ ಇವರು ವೈರಲ್ ಆಗಿದ್ದಾರೆ. ಕೃತಿ ಶೆಟ್ಟಿ, (Kriti Shetty) ಕೀರ್ತಿ ಸುರೇಶ್ (Keerthi Suresh) ಅವರನ್ನ ಇವರು ಮನಸೋಯಿಚ್ಛೆ ಟಚ್ ಮಾಡಿದ್ರು ಅಂತಲೇ ಟ್ರೋಲ್ ಆಗುತ್ತಿದ್ದಾರೆ. ಆದರೆ, ನಟಿಮಣಿಯರು ಈ ಬಗ್ಗೆ ಏನೂ ಹೇಳಿಕೊಂಡಿಲ್ಲ. ಆದರೆ, ಈ ವಿಷಯ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಇದರ ಸುತ್ತ ಇನ್ನಷ್ಟು ವಿವರ ಇಲ್ಲಿದೆ ಓದಿ.
ಗುಡ್ ಟಚ್..ಬ್ಯಾಡ್ ಟಚ್ ಅಂತಲೆ ಇರುತ್ತದೆ. ಕೆಲವರು ಅದನ್ನ ಸಹಿಸಿಕೊಳ್ತಾರೆ. ಇನ್ನು ಕೆಲವರು ಕೆಂಡಾಮಂಡಲ ಆಗುತ್ತಾರೆ. ಡೈರೆಕ್ಟರ್ ರಾಘವೇಂದ್ರ ರಾವ್ ಅವರ ವಿಚಾರದಲ್ಲಿ ಒಬ್ಬರಲ್ಲ..ಇಬ್ಬರಲ್ಲ ಮೂವರು ನಾಯಕಿಯರು ಸುಮ್ಮನೆ ಇದ್ದಾರೆ.
ಈ ಟಚ್ ಅಲ್ಲಿ ಏನೋ ಇದೆ;
ಏನಂದ್ರೆ ಏನೂ ಹೇಳಿಕೊಂಡಿಲ್ಲ. ಆದರೆ, ರಾಘವೇಂದ್ರ ರಾವ್ ಅವರ ಟಚ್ ಅನ್ನ ಅವರು ಯಾವ ರೀತಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಯಾರೂ ಏನೂ ಹೇಳಿಕೊಂಡಿಲ್ಲ.
ಆದರೆ, ನಿಹಾರಿಕಾ ಅವರ ಸೊಂಟ ಹಿಡಿದು ಕುಳಿತಿದ್ದ ರಾಘವೇಂದ್ರ ರಾವ್ ಅವರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದಾಗ ಹಿಡಿತ ತುಂಬಾನೆ ಬಿಗಿ ಇತ್ತು ಅನಿಸುತ್ತದೆ.
ಒತ್ತಾಯದಿಂದಲೇ ಬಿಡಿಸಿಕೊಳ್ಳುವ ನಿಹಾರಿಕಾ, ಆ ಕೂಡಲೇ ಇದೇ ರಾಘವೇಂದ್ರ ರಾವ್ ಅವರ ಹಿಂದೆ ಹೋಗಿ ಅಷ್ಟೆ ಆತ್ಮೀಯತೆಯಿಂದ ಅವರ ಭುಜದ ಮೇಲೆ ಕೈಹಾಕುತ್ತಾರೆ. ಇದಕ್ಕೆ ಏನ್ ಹೇಳ್ತಿರಾ ಅನ್ನೋ ಪ್ರಶ್ನೆನೂ ಬರುತ್ತದೆ. ಆದರೆ, ಇದು ಹಳೆ ವಿಡಿಯೋ. ಇದು ಕೂಡ ಆಗ ವೈರಲ್ ಆಗಿತ್ತು.
ಆದರೆ ಈಗ ಹೊಸ ವಿಚಾರ ಅಂದ್ರೆ, ಕೃತಿ ಶೆಟ್ಟಿ ಮತ್ತು ಕೀರ್ತಿ ಸುರೇಶ್ ಅವರ ಜೊತೆಗೆನೂ ರಾಘವೇಂದರ ರಾವ್ ಅವರು ಹೀಗೆ ನಡೆದುಕೊಂಡರು ಅನ್ನೋದೇ ಆಗಿದೆ. ಆ ವಿಡಿಯೋ ಹೆಚ್ಚು ವೈರಲ್ ಆಗಿದೆ.
ಸ್ಟಾರ್ ಮೇಕರ್ ರಾಘವೇಂದ್ರ ರಾವ್ ವಿಡಿಯೋ ವೈರಲ್
ಚಿತ್ರದ ಮೊದಲ ದೃಶ್ಯದ ಡೈರೆಕ್ಷನ್ ಅನ್ನ ಈ ರಾಘವೇಂದ್ರ ರಾವ್ ಅವರೇ ಮಾಡಿದ್ದಾರೆ. ಆಗ ನಟಿ ಕೀರ್ತಿ ಸುರೇಶ್ ಹಾಗೂ ನಟಿ ಕೃತಿ ಶೆಟ್ಟಿ ಅವರ ತೋಳುಗಳನ್ನ ಹಿಡಿದೇ ಆ ಕಡೆಯಿಂದ ಈ ಕಡೆ ಸರಿಸುವ ಕೆಲಸವನ್ನು ಇವರು ಮಾಡ್ತಾರೆ. ಆ ಮೇಲೆ ಅಲ್ಲು ಅರವಿಂದ್ ಅವರು ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡ್ತಾರೆ. ಈ ಕ್ಷಣದ ವಿಡಿಯೋನೇ ಈಗ ಹೆಚ್ಚು ವೈರಲ್ ಆಗಿದೆ.
ಈ ಚಿತ್ರದಲ್ಲಿ ಇಬ್ಬರು ನಾಯಕರಿದ್ದಾರೆ. ವಿಕ್ಟರಿ ವೆಂಕಟೇಶ್ ಮತ್ತು ನಂದಮೂರಿ ಕಲ್ಯಾಣ್ ರಾಮ್ ಇಲ್ಲಿ ನಾಯಕರಾಗಿದ್ದಾರೆ.
ಈ ನಾಯಕ ನಟರಿಗೆ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಜೋಡಿ ಆಗಿದ್ದಾರೆ. ಈ ಮಲ್ಟಿಸ್ಟಾರರ್ ಚಿತ್ರವನ್ನ ಅನಿಲ್ ರವಿಪುಡಿ ಡೈರೆಕ್ಷನ್ ಮಾಡ್ತಿದ್ದಾರೆ. ಇದೊಂದು ಕಾಮಿಡಿ ಚಿತ್ರವೇ ಆಗಿದೆ.
ಇದು ಹಳೆ ವಿಡಿಯೋ
ಆದರೆ, ಸಿನಿಮಾ ಸುದ್ದಿಗಿಂತಲೂ ರಾಘವೇಂದ್ರ ರಾವ್ ವಿಡಿಯೋನೇ ಹೆಚ್ಚು ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಇದು ಶೇರ್ ಆಗ್ತಾನೇ ಇದೆ. ಇನ್‌ಸ್ಟಾಗ್ರಾಮ್ ಅಲ್ಲಿ ನಿಹಾರಿಕಾ ಮತ್ತು ಕೀರ್ತಿ,ಕೃತಿ ಅವರ ಆ ಎರಡೂ ವಿಡಿಯೋವನ್ನ ಹೋಲಿಕೆ ಮಾಡಿಯೇ ಶೇರ್ ಮಾಡಲಾಗುತ್ತಿದೆ.
ಆದರೆ, 84 ವರ್ಷದ ರಾಘವೇಂದ್ರ ರಾವ್ ಅವರು ಈ ರೀತಿ ಯಾಕೆ ಮಾಡಿದರು. ಇವರು ಇರೋದೇ ಹೀಗೇನಾ? ಅಥವಾ ಇಲ್ಲಿ ಬಂದಾಗ ಹೀಗೆ ಮಾಡಿದ್ರಾ ಅನ್ನುವ ಪ್ರಶ್ನೆ ಕೂಡ ಬರುತ್ತದೆ ಅಂತ ಹೇಳಬಹುದು.
Bangalore [Bangalore],Bangalore,Karnataka













