Last Updated:
ಡಿಪ್ಲೊಮಾ ಮಾಡಿರುವ ಉದ್ಯೋಗಾಕಾಂಕ್ಷಿಗಳಿಗೆ SSC ಭರ್ಜರಿ ಅವಕಾಶ ನೀಡಿದೆ. Junior Engineer Examination 2026 ಮೂಲಕ ಒಟ್ಟು 1,748 ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. Civil, Electrical, Mechanical, Electrical & Mechanical ಹಾಗೂ Telecom ಕ್ಷೇತ್ರಗಳಲ್ಲಿ ಹುದ್ದೆಗಳಿದ್ದು, IMDಯ Scientific Assistant ಹುದ್ದೆಯೂ ಈ ಪರೀಕ್ಷೆಯ ವ್ಯಾಪ್ತಿಯಲ್ಲಿದೆ
ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಎದುರು ನೋಡುತ್ತಿರುವ ಡಿಪ್ಲೊಮಾ, BE ಹಾಗೂ B.Tech ಅಭ್ಯರ್ಥಿಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಉತ್ತಮ ಅವಕಾಶ ನೀಡಿದೆ. Junior Engineer (JE) ಹುದ್ದೆಗಳಿಗೆ ಒಟ್ಟು 1,748 ಹುದ್ದೆಗಳ ನೇಮಕಾತಿ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 22, 2026ರೊಳಗೆ ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ದೇಶದ ವಿವಿಧ ಕೇಂದ್ರ ಸರ್ಕಾರಿ ಇಲಾಖೆ (Central Government) ಹಾಗೂ ಸಂಸ್ಥೆಗಳಲ್ಲಿನ Junior Engineer ಹುದ್ದೆಗಳಿಗೆ ನಡೆಯಲಿದೆ. ಉದ್ಯೋಗ ಸ್ಥಳ All India ಆಗಿದ್ದು, ಹುದ್ದೆಗೆ ಅನುಗುಣವಾಗಿ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಸೇರಿದಂತೆ ಸಂಬಂಧಿತ ಎಂಜಿನಿಯರಿಂಗ್ ವಿಭಾಗಗಳ ಅಭ್ಯರ್ಥಿಗಳಿಗೆ ಅವಕಾಶ ಇದೆ.














