Diamond Corridor: ಬೆಂಗಳೂರಿನಿಂದ ಚೆನ್ನೈಗೆ ಕೇವಲ 73 ನಿಮಿಷ, ಭಾರತೀಯ ರೈಲ್ವೆಯ ‘ಡೈಮಂಡ್’ ಪ್ಲಾನ್ ಇದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಡೈಮಂಡ್ ಕಾರಿಡಾರ್ ಯೋಜನೆ


Last Updated:

ಭಾರತೀಯ ರೈಲ್ವೆಯ ಹೈ ಸ್ಪೀಡ್ ಡೈಮಂಡ್ ಕಾರಿಡಾರ್ ಯೋಜನೆ ಬೆಂಗಳೂರು, ಚೆನ್ನೈ, ಮುಂಬೈ, ಪುಣೆ, ಹೈದರಾಬಾದ್ ನಗರಗಳನ್ನು ವೇಗ ರೈಲಿನಿಂದ ಜೋಡಿಸಿ ಪ್ರಯಾಣ ಸಮಯ ಕಡಿಮೆ ಮಾಡಿ ಆರ್ಥಿಕತೆಗೆ ಬೂಸ್ಟ್ ನೀಡಲಿದೆ

 ಡೈಮಂಡ್ ಕಾರಿಡಾರ್ ಯೋಜನೆ
ಡೈಮಂಡ್ ಕಾರಿಡಾರ್ ಯೋಜನೆ

ಭಾರತೀಯ ರೈಲ್ವೆ (Indian Railways) ಇಲಾಖೆ ಈಗ ಹಳಿಗಳ ಮೇಲೆ ಹೊಸ ಚರಿತ್ರೆ ಬರೆಯಲು ಸಜ್ಜಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ರೂಪಿಸಲಾಗಿರುವ ‘ಹೈ-ಸ್ಪೀಡ್ ಡೈಮಂಡ್ ಕಾರಿಡಾರ್’ (Diamond Corridor) ಯೋಜನೆ ಭಾರತದ ಸಾರಿಗೆ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ. ನೀವು ಬೆಂಗಳೂರಿನಿಂದ (Bengaluru) ಚೆನ್ನೈಗೆ ಹೋಗಲು ಅಥವಾ ಮುಂಬೈನಿಂದ ಪುಣೆಗೆ (Pune) ಪ್ರಯಾಣಿಸಲು ಗಂಟೆಗಟ್ಟಲೆ ಟ್ರಾಫಿಕ್‍ನಲ್ಲಿ ಸಿಲುಕಬೇಕಿಲ್ಲ, ಏಕೆಂದರೆ ಈ ಹೊಸ ಯೋಜನೆಯು ವಿಮಾನದ ವೇಗದಲ್ಲಿ ನಿಮ್ಮನ್ನು ಗುರಿ ಮುಟ್ಟಿಸಲಿದೆ.

ಏನಿದು ಡೈಮಂಡ್ ಕಾರಿಡಾರ್?

ಇದು ವಜ್ರದ ಆಕಾರದಲ್ಲಿ ಭಾರತದ ಪ್ರಮುಖ ಆರ್ಥಿಕ ಕೇಂದ್ರಗಳನ್ನು ಸಂಪರ್ಕಿಸುವ ಬೃಹತ್ ರೈಲ್ವೆ ಜಾಲ. ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ ಮತ್ತು ಪುಣೆಯಂತಹ ಮಹಾನಗರಗಳನ್ನು ಈ ಹೈ-ಸ್ಪೀಡ್ ಹಳಿಗಳು ಬೆಸೆಯಲಿವೆ. ಈ ಯೋಜನೆ ಪೂರ್ಣಗೊಂಡರೆ ಜನರು ದೂರದ ಪ್ರಯಾಣವನ್ನು ಕೇವಲ ಸಿನಿಮಾ ನೋಡುವಷ್ಟು ಸಮಯದಲ್ಲಿ ಮುಗಿಸಬಹುದು ಎಂದು ನ್ಯೂಸ್ 24 ಆನ್‍ಲೈನ್ ವೆಬ್‍ಸೈಟ್ ವರದಿ ಮಾಡಿದೆ.
ಪ್ರಯಾಣದ ಸಮಯ ಎಷ್ಟು ಕಡಿತವಾಗಲಿದೆ?

ಮುಂಬೈ ಟು ಪುಣೆ: ಕೇವಲ 50 ನಿಮಿಷ.

ಚೆನ್ನೈ ಟು ಬೆಂಗಳೂರು: ಕೇವಲ 73 ನಿಮಿಷ.

ಅಮರಾವತಿ ಟು ಹೈದರಾಬಾದ್ ಸುಮಾರು 70 ನಿಮಿಷ.

ಹೈದರಾಬಾದ್ ಟು ಬೆಂಗಳೂರು: ಕೇವಲ 2 ಗಂಟೆ.

ಆರ್ಥಿಕತೆಗೆ ಸಿಗಲಿದೆ ಬೂಸ್ಟ್

ಈ ಕಾರಿಡಾರ್ ಕೇವಲ ಜನರನ್ನು ಕರೆದೊಯ್ಯುವುದು ಮಾತ್ರವಲ್ಲದೆ, ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ ನೀಡಲಿದೆ. ಸರಕುಗಳ ಸಾಗಣೆ ವೇಗವಾಗಿ ನಡೆಯುವುದರಿಂದ ವ್ಯಾಪಾರ ವಹಿವಾಟು ಹೆಚ್ಚಲಿದೆ. ಅಲ್ಲದೆ, ಪ್ರತಿದಿನ ಕೆಲಸಕ್ಕಾಗಿ ನಗರಗಳ ನಡುವೆ ಓಡಾಡುವ ಐಟಿ ಉದ್ಯೋಗಿಗಳಿಗೆ ಮತ್ತು ವ್ಯಾಪಾರಿಗಳಿಗೆ ಇದು ವರದಾನವಾಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed