ಈ ದೊಡ್ಡ ಬಜೆಟ್ ಆಕ್ಷನ್ ಸಿನಿಮಾ ಜುಲೈ 10 ರಂದು ಜಪಾನ್ನಲ್ಲಿ ಸುಮಾರು 80 ಸ್ಕ್ರೀನ್ನಲ್ಲಿ ರಿಲೀಸ್ ಆಗಿತ್ತು. ಆದರೆ ವ್ಯಾಪಾರ ವರದಿಗಳ ಪ್ರಕಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಈ ಸಿನಿಮಾ ಜಪಾನ್ನ ಟಾಪ್ 25 ಸಿನಿಮಾಗಳ ಲಿಸ್ಟ್ನಲ್ಲಿ ಎಂಟ್ರಿ ಕೊಡಲು ಸಾಧ್ಯವಾಗಿಲ್ಲ.
ಬಿಡುಗಡೆಯಾದ ಮೊದಲ ದಿನ, ಚಿತ್ರವು 57 ಸ್ಥಳಗಳಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ 449 ಎಂಟ್ರಿ ದಾಖಲಿಸಿದೆ. ಆದರೆ ಆ ದಿನದ ಮಧ್ಯಾಹ್ನ ನಂತರದ ಕಲೆಕ್ಷನ್ನಲ್ಲಿ ಹೆಚ್ಚಿನ ಏರಿಕೆ ಕಾಣಲಿಲ್ಲ.
80 ಸ್ಥಳಗಳಲ್ಲಿ ಒಟ್ಟು ಒಟ್ಟು ಎಂಟ್ರಿ ಜಸ್ಟ್ 900 ಕ್ಕೆ ಏರಿತು. ಜಪಾನ್ನಲ್ಲಿ ಬಿಡುಗಡೆಯಾಗುವ ಮೊದಲು ಭಾರಿ ಪ್ರಚಾರ ಮಾಡಲಾಗಿದ್ದರೂ ಚಿತ್ರವು ಅಲ್ಲಿ ದೊಡ್ಡ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಮೊದಲ ಮೂರು ದಿನಗಳಲ್ಲಿ ಧುರಂಧರ್ ಕಳಪೆ ಬಾಕ್ಸ್ ಆಫೀಸ್ ಪ್ರದರ್ಶನ ಕೊಟ್ಟಿದೆ. ಜಪಾನ್ನಲ್ಲಿ ಅತಿ ಹೆಚ್ಚು ಆರಂಭಿಕ ದಿನದ ಗಳಿಕೆ ಮಾಡಿರುವ ಟಾಪ್ 10 ಭಾರತೀಯ ಚಿತ್ರಗಳಲ್ಲಿ ಸ್ಥಾನ ಪಡೆಯೋಕೆ ಸಾಧ್ಯವಾಗಿಲ್ಲ. ಈ ಲಿಸ್ಟ್ಗೆ ಎಂಟ್ರಿಯಾಗೋಕೆ ಸಿನಿಮಾ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಅನ್ನು 1,300 ಎಂಟ್ರಿ ಕ್ರಾಸ್ ಮಾಡಬೇಕಾಗಿತ್ತು.
ಟೈಗರ್ 3 ಪ್ರಸ್ತುತ 10 ನೇ ಸ್ಥಾನದಲ್ಲಿದೆ. ಆದರೆ ರಣವೀರ್ ಸಿಂಗ್ ಅಭಿನಯದ ಚಿತ್ರ ಆ ಮೈಲಿಗಲ್ಲು ಸಾಧಿಸುವಲ್ಲಿ ವಿಫಲವಾಗಿದೆ. ಇದಕ್ಕೂ ಮೊದಲು ಪುಷ್ಪ 2 ಸಹ ಟಾಪ್ 10 ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಪುಷ್ಪ ಸಿನಿಮಾಗೆ ಜಪಾನ್ನಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿತ್ತು.
ಪ್ರಸ್ತುತ ಯಶ್ ಅವರ RRR ಜಪಾನ್ನಲ್ಲಿ 8,230 ಎಂಟ್ರಿಯೊಂದಿಗೆ ಭಾರತೀಯ ಸಿನಿಮಾಗಳಲ್ಲಿ ಜಪಾನ್ನಲ್ಲಿ ಅತಿದೊಡ್ಡ ಓಪನಿಂಗ್ ದಾಖಲೆಯನ್ನು ಹೊಂದಿದೆ. ಇದರ ನಂತರ ಸಾಹೋ (6,510), ಕಲ್ಕಿ 2898 AD (3,700), ಪಠಾಣ್ (2,220), ಸಲಾರ್ (2,200), ಜವಾನ್ (1,960), ರಂಗಸ್ಥಳಂ (1,610), ದೇವರಾ (1,550), ಬಾಹುಬಲಿ 2 (1,330), ಮತ್ತು ಟೈಗರ್ ಇದೆ.
ಧುರಂಧರ್ ಭಾರತದಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಫ್ರ್ಯಾಂಚೈಸ್ನ ಎರಡನೇ ಚಿತ್ರವಾದ ಧುರಂಧರ್: ದಿ ರಿವೆಂಜ್, ಆಮಿರ್ ಖಾನ್ ಅವರ ದಂಗಲ್ ನಂತರ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ. ಈ ಚಿತ್ರವು ವಿಶ್ವಾದ್ಯಂತ ₹ 1,813 ಕೋಟಿ ಕಲೆಕ್ಷನ್ ಮಾಡಿದೆ.
ಡಿಸೆಂಬರ್ 2025 ರಲ್ಲಿ ಬಿಡುಗಡೆಯಾದ ಫ್ರಾಂಚೈಸಿಯ ಮೊದಲ ಚಿತ್ರವಾದ ಧುರಂಧರ್ ಕೂಡ ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸನ್ನು ಕಂಡಿತು, ವಿಶ್ವಾದ್ಯಂತ ₹ 1,307 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿತು. ಎರಡೂ ಚಿತ್ರಗಳು ಒಟ್ಟಾಗಿ ವಿಶ್ವಾದ್ಯಂತ ₹ 3,100 ಕೋಟಿಗೂ ಹೆಚ್ಚು ಸಂಗ್ರಹಿಸಿವೆ.













