Last Updated:
Delhi Building Collapse: ರಾಷ್ಟ್ರ ರಾಜಧಾನಿ ದೆಹಲಿಯ ನೈಋತ್ಯ ಭಾಗದಲ್ಲಿರುವ ಆರ್‌ಕೆ ಪುರಂನ ಸತ್ಯ ನಿಕೇತನ್ ಪ್ರದೇಶದಲ್ಲಿ ಶನಿವಾರ ಒಂದು ಕಟ್ಟಡ ಕುಸಿದು ಬಿದ್ದಿದ್ದು, ಇದುವರೆಗೆ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ. ಹಲವು ಜನರು, ವಿಶೇಷವಾಗಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಆ ಕಟ್ಟಡದೊಳಗೆ ಸಿಲುಕಿಕೊಂಡಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ನೈಋತ್ಯ ಭಾಗದಲ್ಲಿರುವ ಆರ್‌ಕೆ ಪುರಂನ ಸತ್ಯ ನಿಕೇತನ್ ಪ್ರದೇಶದಲ್ಲಿ ಶನಿವಾರ ಒಂದು ಕಟ್ಟಡ ಕುಸಿದು (building collapse) ಬಿದ್ದಿದ್ದು, ಇದುವರೆಗೆ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ. ಹಲವು ಜನರು, ವಿಶೇಷವಾಗಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಆ ಕಟ್ಟಡದೊಳಗೆ ಸಿಲುಕಿಕೊಂಡಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. ಈ ಕಟ್ಟಡವನ್ನು ಪಿಜಿ (ಪೇಯಿಂಗ್ ಗೆಸ್ಟ್) ವಸತಿಯಾಗಿ ಬಳಸಲಾಗುತ್ತಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ದೆಹಲಿ ಅಗ್ನಿಶಾಮಕ ಸೇವೆ ಹಾಗೂ ಇತರ ಏಜೆನ್ಸಿಗಳು ಸ್ಥಳಕ್ಕೆ ತಲುಪಿ ಪಾರುಗಾಣಿಕಾ ಕಾರ್ಯಾಚರಣೆ ಆರಂಭಿಸಿವೆ.














