Daughter: ಇಂತಹ ಮಗಳು ಯಾರಿಗೂ ಸಿಗೋದು ಬೇಡ, ಈಕೆ ಮಾಡಿದ್ದೇನು ಅಂತ ಗೊತ್ತಾದರೆ ನಿಮ್ಮ ಮೈಂಡ್ ಬ್ಲಾಂಕ್ ಆಗುತ್ತೆ! | Crime News | ACTPnews

ಇಂತಹ ಮಗಳು ಯಾರಿಗೂ ಇರೋದು ಬೇಡ!


Last Updated:

ಜೈಪುರದಲ್ಲಿ ಆಸ್ತಿ, ಉದ್ಯೋಗಕ್ಕಾಗಿ ತಾಯಿಯನ್ನು ಕೊಲೆ ಮಾಡಿದ ಎಲ್ಎಲ್ಬಿ ವಿದ್ಯಾರ್ಥಿನಿ ಆಯುಷಿ ಶರ್ಮಾ, ತಂದೆಯ ಸಾವಿಗೂ ಕಾರಣ ಎಂದು ಕುಟುಂಬಸ್ಥರ ಆರೋಪ. ಸಹೋದರ ಸಂಬಂಧಿ ಬಲರಾಮ್ ಪರಾರಿಯಾಗಿದ್ದಾನೆ.

ಇಂತಹ ಮಗಳು ಯಾರಿಗೂ ಇರೋದು ಬೇಡ!
ಇಂತಹ ಮಗಳು ಯಾರಿಗೂ ಇರೋದು ಬೇಡ!

ಆಸ್ತಿ, ಹಣ, ಸರ್ಕಾರಿ ಉದ್ಯೋಗ.. (Property, Money, Government Job) ಈ ಮೂರು ಅಂಶಗಳಿಗಾಗಿ ಹೆತ್ತ ಮಗಳು (Mother and Daughter) ಎಂತಹ ಕೃತ್ಯಕ್ಕೂ ಕೈಹಾಕುತ್ತಾಳೆ ಅಂತ ಜೈಪುರದಲ್ಲಿ (Jaipur) ಘಟನೆ ನಿರೂಪಿಸಿದೆ. ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆಗೈದ ಪ್ರಕರಣದಲ್ಲಿ ಎಲ್​​ಎಲ್​ಬಿ ವಿದ್ಯಾರ್ಥಿನಿ (LLB Student) ಆಯುಷಿ ಶರ್ಮಾ ಪ್ರಕರಣದಲ್ಲಿನ ಭಯಂಕರ ಸಂಗತಿಗಳು ಬೆಳಕಿಗೆ ಬರುತ್ತಿದೆ.

ರಾಜಸ್ಥಾನಕ್ಕೆ ಬಿಗ್ ಶಾಕ್ ನೀಡಿದ್ದ ಜೈಪುರ ಆಯುಷಿ ಶರ್ಮಾ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಗಳು ಬೆಳಕಿಗೆ ಬರ್ತಿದೆ. ಸರ್ಕಾರಿ ಉದ್ಯೋಗಕ್ಕಾಗಿ ಹೆತ್ತ ತಾಯಿ ನೀರಜ್ ಶರ್ಮಾಗಳನ್ನು, ಸ್ವತಃ ಮಗಳಾದ ಎಲ್​​ಎಲ್​​ಬಿ ವಿದ್ಯಾರ್ಥಿನಿ ಆಯುಷಿ ಕೊಲೆಗೈದಿದ್ದಳು. ಆದರೆ ಈಗ ತಾಯಿಯ ಕೊಲೆಗೂ ಮುನ್ನ ತಂದೆಯ ಸಾವಿಗೂ ಈಕೆ ಕಾರಣವಾಗಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಆಸ್ತಿ ಮತ್ತು ಉದ್ಯೋಗ ಆಸೆಗಾಗಿ ತಂದೆ ಚಿಕಿತ್ಸೆ ಸಿಗದಂತೆ ಮಾಡಿ ಅವರ ಸಾವಿಗೆ ಕಾರಣವಾಗಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

ಸಂತ್ರಸ್ತ ಮಹಿಳೆಯ ಸಹೋದರ ರಾಕೇಶ್ ಶರ್ಮಾ ನೀಡಿರುವ ಮಾಹಿತಿಯ ಅನ್ವಯ, ಆಯುಷಿ ತಂದೆ ವಿಜಯ್ ಶರ್ಮಾ ರಾಜಸ್ಥಾನ ಹೈಕೋರ್ಟ್ ಮಾಸ್ಟರ್​​ ಆಗಿ ಕೆಲಸ ಮಾಡುತ್ತಿದ್ದರು. 2024ರಲ್ಲಿ ಅವರಿಗೆ ಮೆದುಳಿಗೆ ಸಂಬಂಧಿಸಿದ ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆ ಬಳಿಕ ಸ್ವಲ್ಪ ಚೇತರಿಕೆ ಕಾಣಿಸಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗೆ ಅಂತ ಆಯುಷಿ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಳಂತೆ.

ಬರೋಬ್ಬರಿ ಮೂರು ತಿಂಗಳು ಆಕೆ, ತಂದೆಯನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಳು ಅನ್ನೋದು ತಿಳಿದು ಬಂದಿಲ್ಲವಂತೆ. ಆ ಬಳಿಕ ಜೈಪುರದ ಆಸ್ಪತ್ರೆಗೆ ಸೇರ್ಪಡೆ ಮಾಡಿದ್ದು ತಿಳಿದು ಕುಟುಂಬ ಸದಸ್ಯರು ಅಲ್ಲಿಗೆ ಹೋಗಿದ್ದರಂತೆ. ಆದರೆ ಆ ವೇಳೆಗಾಗಲೇ ಅವರ ಸ್ಥಿತಿ ಕೈಮೀರಿತ್ತಂತೆ. ಇದರಂತೆ ಏಪ್ರಿಲ್ 2025ರಂದು ವಿಜಯ್ ಶರ್ಮಾ ಸಾವನ್ನಪ್ಪಿದ್ದರಂತೆ. ಪ್ಲ್ಯಾನ್ ಮಾಡಿಯೇ, ತಂದೆಗೆ ಚಿಕಿತ್ಸೆ ಸಿಗದಂತೆ ಮಾಡಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.

ತಂದೆಯ ಸಾವಿನ ಬಳಿಕ ಕಾನೂನು ಅನ್ವಯ ಸರ್ಕಾರಿ ಉದ್ಯೋಗ ಆಯುಷಿಗೆ ಸಿಗದೆ ಅವರ ತಾಯಿ ನೀರಜ್ ಶರ್ಮಾಗೆ ಸಿಕ್ಕಿತ್ತಂತೆ. ಇದಕ್ಕೆ ಸಾಥ್ ನೀಡುವಂತೆ ಕುಟುಂಬದ ಆಸ್ತಿ ಎಲ್ಲಾ ತಾಯಿಯ ಹೆಸರಿಗೆ ಬಂದಿತ್ತಂತೆ. ಆಯುಷಿಗಿಂತ ತಾಯಿ ವಿಶೇಷ ಚೇತನ ತಂಗಿಗೆ ಹೆಚ್ಚು ಪ್ರೀತಿ ನೀಡುತ್ತಿದ್ದಳಂತೆ. ಇದರಿಂದ ಬೇಸರಗೊಂಡಿದ್ದ ಆಯುಷಿ, ತಾಯಿ ಮೇಲೆ ಹಗೆತನ ಬೆಳೆಸಿಕೊಂಡಿದ್ದಳಂತೆ. ತಂದೆಯ ಉದ್ಯೋಗ ತಾಯಿಗೆ ಸಿಕ್ಕ ಬಳಿಕ ತಾಯಿಯನ್ನ ತನ್ನ ದಾರಿಯಿಂದ ದೂರ ಮಾಡಲು ಪ್ಲ್ಯಾನ್ ಮಾಡಿದ್ದಳಂತೆ. ತಾಯಿ ಸಾವನ್ನಪ್ಪಿದರೆ ಉದ್ಯೋಗ, ಆಸ್ತಿ ಎರಡು ತನಗೆ ಸಿಗುತ್ತೆ ಅಂತ ಅಂದುಕೊಂಡಿದ್ದಳಂತೆ. ಎಲ್​​ಎಲ್​ಬಿ ಅಂತಿಮ ವರ್ಷದ ಶಿಕ್ಷಣ ಪಡೆಯುತ್ತಿದ್ದ ಕಾರಣ ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಇತ್ತಂತೆ. ಇದರಂತೆ ಯಾರಿಗೂ ಡೌಟ್ ಕೂಡ ಬಾರದಂತೆ ಪ್ಲ್ಯಾನ್ ಮಾಡಿ ಕೊಲೆ ಮಾಡಿದ್ದರು.

ಸಹೋದರ ಸಂಬಂಧಿಯಂತೆ ಜೊತೆಯಾಗಿ ಪ್ಲ್ಯಾನ್!

ತನ್ನ ತಾಯಿಯನ್ನು ಕೊಲೆ ಮಾಡುವ ಪ್ಲ್ಯಾನ್ ಮಾಡುವ ಆಯುಷಿ, ತನ್ನ ಸಹೋದರ ಸಂಬಂಧಿಯೊಂದಿಗೆ ಚರ್ಚೆ ಮಾಡಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಳಂತೆ. ಸದ್ಯ ಬಂಧಿತ ಆರೋಪಿಗಳಾದ ಆಯುಷಿ, ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಕೊಲೆಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿರುವ ಬಲರಾಮ್ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಆತನ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿದ್ದಾರೆ. ತಂದೆ-ತಾಯಿಯನ್ನೇ ಆಸ್ತಿ, ಉದ್ಯೋಗಕ್ಕಾಗಿ ಶಿಕ್ಷಣ ಪಡೆದುಕೊಂಡಿರುವ ಯುವತಿ ಈ ರೀತಿಯ ಕೃತ್ಯಕ್ಕೆ ಕೈಹಾಕಿದ್ದು, ದೇಶದಾದ್ಯಂತ ಸಂಚಲನ ಮೂಡಿಸಿದೆ.

ಕನ್ನಡ ಸುದ್ದಿ/ ನ್ಯೂಸ್/Crime/

Daughter: ಇಂತಹ ಮಗಳು ಯಾರಿಗೂ ಸಿಗೋದು ಬೇಡ, ಈಕೆ ಮಾಡಿದ್ದೇನು ಅಂತ ಗೊತ್ತಾದರೆ ನಿಮ್ಮ ಮೈಂಡ್ ಬ್ಲಾಂಕ್ ಆಗುತ್ತೆ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed