Dasara Sports: ದಸರಾ ಕ್ರೀಡಾಕೂಟದಲ್ಲಿ ಮಿಂಚಲು ರೆಡಿಯಾಗಿ, ಕಬಡ್ಡಿ, ವಾಲಿಬಾಲ್ ಸೇರಿದಂತೆ ಹಲವು ಸ್ಪರ್ಧೆಗಳು ಇವೆ! | ಮೈಸೂರು ನ್ಯೂಸ್ (Mysuru News) | ACTPnews

ಮೈಸೂರು ದಸರಾ ಕ್ರೀಡಾಕೂಟ


Last Updated:

ಮೈಸೂರು ದಸರಾ ಅಂಗವಾಗಿ ಸೆಪ್ಟೆಂಬರ್ 21ರಂದು ಪಿರಿಯಾಪಟ್ಟಣದಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ. ವಿಜೇತರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಾರೆ.

ಮೈಸೂರು ದಸರಾ ಕ್ರೀಡಾಕೂಟ
ಮೈಸೂರು ದಸರಾ ಕ್ರೀಡಾಕೂಟ

ಮೈಸೂರು (Mysuru) ದಸರಾ (Dasara) ಮಹೋತ್ಸವದ ಅಂಗವಾಗಿ ಪಿರಿಯಾಪಟ್ಟಣ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು (Sports Meet) ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ (Grand) ಆಯೋಜಿಸಲಾಗಿದೆ. ಕ್ರೀಡಾಪಟುಗಳಿಗೆ ಜಿಲ್ಲಾಮಟ್ಟಕ್ಕೆ ತೆರಳಲು ಅದ್ಭುತ ಅವಕಾಶವಿದ್ದು, ಯಾವ ಯಾವ ಕ್ರೀಡೆಗಳು ಏನೇನು ಅರ್ಹತೆ ಇರಬೇಕು ಅಂತ ಇಲ್ಲಿದೆ ಸಂಪೂರ್ಣ ವಿವರ.

ಕ್ರೀಡಾಕೂಟದ ವಿವರಗಳು ಮತ್ತು ಸ್ಪರ್ಧೆಗಳು

ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ಈ ಕ್ರೀಡಾಕೂಟ ನಡೆಯಲಿದೆ.

ದಿನಾಂಕ ಹಾಗೂ ಸಮಯ: ಸೆಪ್ಟೆಂಬರ್ 21ರಂದು ಬೆಳಿಗ್ಗೆ 9:00 ಗಂಟೆಗೆ.

ಸ್ಥಳ: ತಾಲ್ಲೂಕು ಕ್ರೀಡಾಂಗಣ, ಪಿರಿಯಾಪಟ್ಟಣ.

ಪ್ರಮುಖ ಕ್ರೀಡಾ ವಿಭಾಗಗಳು

ಅಥ್ಲೆಟಿಕ್ಸ್: ವಿವಿಧ ಓಟದ ಸ್ಪರ್ಧೆಗಳು, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀಟರ್ ಹರ್ಡಲ್ಸ್, 4×100 ಮೀಟರ್ ಹಾಗೂ 4×400 ಮೀಟರ್ ರಿಲೇ.

ದಂಡು ಕ್ರೀಡೆಗಳು: ವಾಲಿಬಾಲ್, ಫುಟ್‍ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಹಾಗೂ ಯೋಗಾಸನ.

ನಿಯಮಗಳು ಮತ್ತು ಆಯ್ಕೆ ಪ್ರಕ್ರಿಯೆ

ಕೇವಲ ಕರ್ನಾಟಕದ ನಿವಾಸಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ರಕ್ಷಣಾ ಪಡೆ ಹಾಗೂ ಅರೆಸೇನಾ ಪಡೆಗೆ ಸೇರಿದ ಕ್ರೀಡಾಪಟುಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

ಆಯ್ಕೆ ವಿಧಾನ: ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವವರು ಮತ್ತು ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಗಳು ನೇರವಾಗಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿವೆ.

ಪ್ರಮುಖ ಸೂಚನೆ: ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ಅಥವಾ ಬಹುಮಾನವನ್ನು ನೀಡಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಅಧಿಕೃತ ವೆಬ್‍ಸೈಟ್: dasaracmcup.in

ದೂರವಾಣಿ ಸಂಖ್ಯೆ: 0821-2564179

ಸಂಚಾಲಕರ ಮೊಬೈಲ್ ಸಂಖ್ಯೆ

ಸುಂದರೇಶ್ ಆರ್. – 9844487796 (ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ).

ಆಸಕ್ತ ಕ್ರೀಡಾಪಟುಗಳು ನಿಗದಿತ ಸಮಯಕ್ಕೆ ಸರಿಯಾಗಿ ಕ್ರೀಡಾಂಗಣಕ್ಕೆ ಹಾಜರಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed