Last Updated:
ಮೈಸೂರು ದಸರಾ ಅಂಗವಾಗಿ ಸೆಪ್ಟೆಂಬರ್ 21ರಂದು ಪಿರಿಯಾಪಟ್ಟಣದಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ. ವಿಜೇತರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಾರೆ.
ಮೈಸೂರು (Mysuru) ದಸರಾ (Dasara) ಮಹೋತ್ಸವದ ಅಂಗವಾಗಿ ಪಿರಿಯಾಪಟ್ಟಣ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು (Sports Meet) ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ (Grand) ಆಯೋಜಿಸಲಾಗಿದೆ. ಕ್ರೀಡಾಪಟುಗಳಿಗೆ ಜಿಲ್ಲಾಮಟ್ಟಕ್ಕೆ ತೆರಳಲು ಅದ್ಭುತ ಅವಕಾಶವಿದ್ದು, ಯಾವ ಯಾವ ಕ್ರೀಡೆಗಳು ಏನೇನು ಅರ್ಹತೆ ಇರಬೇಕು ಅಂತ ಇಲ್ಲಿದೆ ಸಂಪೂರ್ಣ ವಿವರ.
ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ಈ ಕ್ರೀಡಾಕೂಟ ನಡೆಯಲಿದೆ.
ದಿನಾಂಕ ಹಾಗೂ ಸಮಯ: ಸೆಪ್ಟೆಂಬರ್ 21ರಂದು ಬೆಳಿಗ್ಗೆ 9:00 ಗಂಟೆಗೆ.
ಸ್ಥಳ: ತಾಲ್ಲೂಕು ಕ್ರೀಡಾಂಗಣ, ಪಿರಿಯಾಪಟ್ಟಣ.
ದಂಡು ಕ್ರೀಡೆಗಳು: ವಾಲಿಬಾಲ್, ಫುಟ್ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಹಾಗೂ ಯೋಗಾಸನ.
ಕೇವಲ ಕರ್ನಾಟಕದ ನಿವಾಸಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ರಕ್ಷಣಾ ಪಡೆ ಹಾಗೂ ಅರೆಸೇನಾ ಪಡೆಗೆ ಸೇರಿದ ಕ್ರೀಡಾಪಟುಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಆಯ್ಕೆ ವಿಧಾನ: ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವವರು ಮತ್ತು ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಗಳು ನೇರವಾಗಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿವೆ.
ಅಧಿಕೃತ ವೆಬ್ಸೈಟ್: dasaracmcup.in
ದೂರವಾಣಿ ಸಂಖ್ಯೆ: 0821-2564179
ಸುಂದರೇಶ್ ಆರ್. – 9844487796 (ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ).
ಆಸಕ್ತ ಕ್ರೀಡಾಪಟುಗಳು ನಿಗದಿತ ಸಮಯಕ್ಕೆ ಸರಿಯಾಗಿ ಕ್ರೀಡಾಂಗಣಕ್ಕೆ ಹಾಜರಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ.














