Last Updated:
Darshan: ಸ್ಯಾಂಡಲ್ವುಡ್ ನಟ ದರ್ಶನ್ ಅವರು ಜೈಲಿನ ಒಳಗಿದ್ದರೂ ಕೂಡಾ ಅವರ ಕ್ರೇಜ್ ಒಂಚೂರು ಕಡಿಮೆಯಾಗಿಲ್ಲ. ಅವರ ಸಿನಿಮಾ ರಿ ರಿಲೀಸ್ ಬೆಳಗ್ಗಿನ ಶೋ ಹೌಸ್ಫುಲ್ ಆಗಿದೆ.
ಸ್ಯಾಂಡಲ್ವುಡ್ (Sandalwood) ನಟ ದರ್ಶನ್ (Darshan) ಅವರು ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನ್ಲಲಿದ್ದಾರೆ. ಜೈಲಿನಲ್ಲಿದ್ದರೂ (Jail) ಕೂಡಾ ದರ್ಶನ್ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಸಿನಿಮಾ (Cinema) ಬರದಿದ್ದರೂ ದರ್ಶನ್ ಸಿನಿಮಾಗಳು ರಿ-ರಿಲೀಸ್ (Re-Release) ಆಗುವಾಗ ಯಾವುದೇ ಸಿನಿಮಾ ರಿಲೀಸ್ ಸಂಭ್ರಮಕ್ಕಿಂತ ಕಡಿಮೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಂಭ್ರಮ ಮನೆ ಮಾಡುತ್ತದೆ.
ಜೂನ್ 19ರಂದು ಇಂದು ಕಲಾಸಿಪಾಳ್ಯ ಸಿನಿಮಾ ರೀ ರಿಲೀಸ್ ಆಗಿದೆ. ನಟ ದರ್ಶನ್ ಅಭಿನಯದ ಸಿನಿಮಾ ರೀ ರಿಲೀಸ್ ಆಗಿದ್ದು ದರ್ಶನ್ ಜೈಲಿನಲ್ಲಿದ್ರೂ ದಾಸನ ಕ್ರೇಜ್ ಮಾತ್ರ ಒಂಚೂರೂ ಕಡಿಮೆಯಾಗಿಲ್ಲ.
ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ನಲ್ಲಿ 6ಗಂಟೆ ಶೋ ನಡೆದಿದ್ದು ರೀ ರಿಲೀಸ್ ಸಿನಿಮಾದ ಆರು ಗಂಟೆ ಶೋ ಹೌಸ್ ಫುಲ್ ಆಗಿದೆ. ಬೆಳ್ಳಂಬೆಳಗ್ಗೆಯೇ ಥಿಯೇಟರ್ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ.
ಬೇರೆ ಬೇರೆ ಜಿಲ್ಲೆಗಳಿಂದಲೂ ದರ್ಶನ್ ಅಭಿಮಾನಿಗಳು ಬಂದಿದ್ದಾರೆ. ಚಿತ್ರದುರ್ಗದಿಂದಲೂ ಬಂದಿರುವ ದರ್ಶನ್ ಅಭಿಮಾನಿಗಳು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಬಾಸ್ ಪರಿಸ್ಥಿತಿ ಏನೇ ಇದ್ದರೂ ನಾವು ಸಪೋರ್ಟ್ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಹೊಸ ಸಿನಿಮಾಗಳಿಗೂ ನಾವು ಪೈಪೋಟಿ ಕೊಡುತ್ತೇವೆ. ನಮ್ ಬಾಸ್ ಹಳೆ ಸಿನಿಮಾ ಮುಂದೆ ಹೊಸ ಸಿನಿಮಾಗಳು ಕೂಡ ಇಷ್ಟು ಕ್ರೆಜ್ ಪಡೆಯಲ್ಲ. ಬಾಸ್ ಹೊರಗಡೆ ಇದ್ರೆ ಇನ್ನೂ ಕ್ರೇಜ್ ಇರ್ತಿತ್ತು ಎಂದು ಹೇಳಿದ್ದಾರೆ.
2004ರಲ್ಲಿ ಬಿಡುಗಡೆಯಾದ ಕಲಾಸಿಪಾಳ್ಯ ಸಿನಿಮಾ ದರ್ಶನ್ ಅವರ ನಟನಾ ವೃತ್ತಿಯಲ್ಲಿ ಮಹತ್ವದ ಮೈಲುಗಲ್ಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಕ್ರೈಂ ಜಾನರ್ಗೆ ಹೊಸ ಹೆಸರು ತಂದು ಕೊಟ್ಟ ಸಿನಿಮಾ ಕಲಾಸಿಪಾಳ್ಯ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ.
Bangalore,Karnataka
Jun 19, 2026 10:17 AM IST













