Darshan: ಜಸ್ಟ್ ಏಳೇ ದಿನ ಬಾಕಿ! ಜೂನ್ 1ರಿಂದ ಹೊಸ ಕೋರ್ಟ್, ಹೊಸ ಜಡ್ಜ್, ಏನಾಗಲಿದೆ ದರ್ಶನ್ ಕೇಸ್? | | ACTPnews

ದರ್ಶನ್


Last Updated:

Darshan: ಹೊಸ ಕೋರ್ಟ್, ಹೊಸ ಜಡ್ಜ್, ಒಂದು ವರ್ಷದ ಸುಪ್ರೀಂ ಗಡುವು! ಏನಾಗಲಿದೆ ದರ್ಶನ್ ಕೇಸ್? ಇತ್ತೀಚಿನ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ದರ್ಶನ್
ದರ್ಶನ್

ಸುಪ್ರೀಂ ಕೋರ್ಟ್​ನಲ್ಲಿ (Supreme Court) ದರ್ಶನ್ ಜಾಮೀನು ಅರ್ಜಿ ರಿಜೆಕ್ಟ್ ಆದ ಬೆನ್ನಲ್ಲಿಯೇ ರೇಣುಕಾಸ್ವಾಮಿ ಕೇಸ್ (Renukaswamy Case) ವಿಚಾರಣೆಯ ಅಪ್ಡೇಟ್ ಸುದ್ದಿಯಾಗುತ್ತಿದೆ. ಜೂನ್ ಒಂದರಿಂದ ಹೊಸ ಕೋರ್ಟ್ ನಲ್ಲಿ ದರ್ಶನ್ (Darshan) ಕೇಸ್ ವಿಚಾರಣೆ ನಡೆಯಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಮತ್ತೊಂದು ಕೋರ್ಟ್​ಗೆ ವರ್ಗವಾಗಿದೆ. ಸೆಷನ್ಸ್ ಕೋರ್ಟ್​ಗಳಿಗೆ ಪೊಲೀಸ್ ಸ್ಟೇಷನ್ ವಾರು ಹೊಸ ನಿಯೋಜನೆ ಮಾಡಲಾಗಿದ್ದು, ಸೆಷನ್ಸ್ ಕೋರ್ಟ್​ಗಳಿಗೆ ಸಬ್ ಡಿವಿಜನ್ಸ್ ಹಂಚಿಕೆ ಮಾಡಿ ಆದೇಶ ನೀಡಲಾಗಿದೆ. ಸಿಟಿ ಸಿವಿಲ್ ಕೋರ್ಟ್‌ನ ಡೆಪ್ಯುಟಿ ರಿಜಿಸ್ಟ್ರಾರ್ ಈ ಕುರಿತು ಆದೇಶ ಹೊರಡಿಸಿದೆ.

ಸೆಷನ್ಸ್ ಕೋರ್ಟ್ ಗಳಿಗೆ ಪೊಲೀಸ್ ಸ್ಟೇಷನ್​ಗಳ ಹಂಚಿಕೆ ಮಾಡಿ ಆದೇಶ ನೀಡಲಾಗಿದ್ದು ವಿಜಯನಗರ ಸಬ್ ಡಿವಿಜನ್ 59ನೇ ಸೆಷನ್ಸ್ ಕೋರ್ಟ್​ನಿಯೋಜನೆಯಾಗಿದೆ. ಇದರಿಂದ ಕಾಮಾಕ್ಷಿಪಾಳ್ಯ ಠಾಣೆ ಕೇಸ್​​ಗಳು 59ನೇ ಸೆಷನ್ಸ್ ಕೋರ್ಟ್ಗೆ ವರ್ಗಾವಣೆ ಆಗಲಿದೆ.

ಪ್ರಕರಣದ ವಿಚಾರಣೆ ನಡೆಸುವ ಕೋರ್ಟ್ ಮತ್ತು ನ್ಯಾಯಾಧೀಶರು ಬದಲಾಗಿದ್ದು, ಹೊಸದಾಗಿ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಜವಾಬ್ದಾರಿ ವಹಿಸಲಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಕರಣವು ಒಂದು ವರ್ಷದೊಳಗೆ ನಿರಂತರ ವಿಚಾರಣೆಗೆ ಒಳಪಡುವ ಸಾಧ್ಯತೆ ಇದೆ. ಕೋರ್ಟ್ ಹಾಗೂ ಜಡ್ಜ್ ಬದಲಾವಣೆ ದರ್ಶನ್ ಪ್ರಕರಣದಲ್ಲಿ ಯಾವ ರೀತಿಯ ಬದಲಾವಣೆಗೆ ತರಲಿದೆ ಎನ್ನುವ ಕುತೂಹಲ ಮೂಡಿಸಿದೆ.

ಹೈಪ್ರೊಫೈಲ್ ಕೇಸ್ ಜಡ್ಜ್ ಸುಜಾತಾ ಮಡಿವಾಳಪ್ಪ

ಜೂನ್ 1ರಿಂದ ಅಧಿಕೃತವಾಗಿ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಹೊಸದಾಗಿ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

ಹೊಸ ನಿಯೋಜನೆ ಪ್ರಕಾರ ದರ್ಶನ್ ಪ್ರಕರಣ ಕೂಡ ಹೊಸ ಕೋರ್ಟ್ಗೆ ವರ್ಗಾವಣೆಯಾಗುತ್ತಿದ್ದು 59ನೇ ಸೆಷನ್ಸ್ ಕೋರ್ಟ್​ನಲ್ಲಿ ಮುಂದಿನ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಜೂನ್ ಒಂದರಿಂದ ಜಾರಿಗೆ ಬರಲಿರುವ ಹೊಸ ನಿಯೋಜನೆಯಂತೆ ಅಲ್ಲಿಯೇ ದರ್ಶನ್ ಕೇಸ್ ಮುಂದಿನ ವಿಚಾರಣೆ ನಡೆಯಬಹುದು ಎನ್ನಲಾಗುತ್ತಿದೆ.

ಇಷ್ಟು ದಿನ ವಿಚಾರಣೆ ಎಲ್ಲಿ ನಡೆಯುತ್ತಿತ್ತು?

ಇಷ್ಟು ದಿನ ಇಂಚಾರ್ಜ್ ಕೋರ್ಟ್​ನಲ್ಲಿ ದರ್ಶನ್ ಕೇಸ್ ವಿಚಾರಣೆ ನಡೆಯುತ್ತಿತ್ತು. 64ನೇ ಸೆಷನ್ಸ್ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿತ್ತು. ಜೂನ್​ ಒಂದರಿಂದ 59ನೇ ಸೆಷನ್ಸ್ ಕೋರ್ಟ್ ನಲ್ಲಿ ಟ್ರಯಲ್ ಹಾಗೂ ಸಾಕ್ಷಿಗಳ ವಿಚಾರಣೆ ನಡೆಯಲಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಸಾಕ್ಷಿಗಳ ವಿಚಾರಣೆ, ಜೈಲಿನಲ್ಲಿ ಕನಿಷ್ಟ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ನಿರ್ಧಾರ, ಪ್ರಮುಖ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಒಂದು ವರ್ಷದ ಒಳಗೆ ಕೇಸ್ ವಿಚಾರಣೆ ನಡೆಸಲು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಹೊಸ ಕೋರ್ಟ್​ನಲ್ಲಿ ದರ್ಶನ್ ಪ್ರಕರಣ ಮಹತ್ವ ಪಡೆದಿದೆ.

ವರದಿ: ಮಂಜುನಾಥ್ ಎನ್ ಹಾಗೂ ಮುನಿರಾಜು ಕೆಜಿ, ನ್ಯೂಸ್ 18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports