Big Update: ಬೆಂಗಳೂರಿಗರೇ, ಅಲರ್ಟ್!‌ ಈ ರಸ್ತೆಯಲ್ಲಿ ಇನ್ನೂ 2 ತಿಂಗಳು ಓಡಾಟ ಬಂದ್;‌ ಬದಲಿ ಮಾರ್ಗದ ವಿವರ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಸಂಚಾರ ಬಂದ್


Last Updated:

ಶಿವಾಜಿನಗರ ಕಾಮರಾಜ್ ರಸ್ತೆಯಲ್ಲಿ ಬಿಬಿಎಂಪಿ ಆರ್.ಸಿ.ಸಿ ಕಲ್ವರ್ಟ್ ಕಾಮಗಾರಿ, 24.05.2026ರಿಂದ 60 ದಿನ ಟ್ರಾಫಿಕ್ ಸಂಪೂರ್ಣ ಬಂದ್, ಪೊಲೀಸರು ಪರ್ಯಾಯ ಮಾರ್ಗ ಸೂಚನೆ, ಸಹಕಾರಕ್ಕೆ ವಿನಂತಿ

ಸಂಚಾರ ಬಂದ್
ಸಂಚಾರ ಬಂದ್

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಬಿಗ್ ಶಾಕ್ (Big Shock) ಎದುರಾಗಿದೆ! ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿರುವ ಬೆಂಗಳೂರಿಗರಿಗೆ, ಅದರಲ್ಲೂ ಪ್ರಮುಖವಾಗಿ (Main) ಶಿವಾಜಿನಗರ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ದಿನಾಲೂ ಓಡಾಡುವ ವಾಹನ ಸವಾರರಿಗೆ ಮುಂದಿನ 60 ದಿನಗಳ ಕಾಲ ಭಾರಿ ಸಂಕಷ್ಟ ಎದುರಾಗಲಿದೆ.

ಶಿವಾಜಿನಗರದ ವ್ಯಾಪ್ತಿಯಲ್ಲಿ ಭಾರೀ ಬದಲಾವಣೆ

ಹೌದು, ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮರಾಜ್ ರಸ್ತೆಯ ನಾಲಾ ಕ್ರಾಸ್ ರಸ್ತೆ ಹತ್ತಿರ ಬಿಬಿಎಂಪಿ ವತಿಯಿಂದ ಹಳೆಯ ಕಲ್ಲಿನ ಕಲ್ವರ್ಟ್ ತೆರವುಗೊಳಿಸಿ ಹೊಸದಾಗಿ ಆರ್.ಸಿ.ಸಿ ಕಲ್ವರ್ಟ್ ನಿರ್ಮಿಸುವ ಬೃಹತ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ದಿನಾಂಕ: 24.05.2026 ರಿಂದ ಮುಂದಿನ 60 ದಿನಗಳ ಕಾಲ ಈ ಕೆಳಗಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ!

ಹುಷಾರ್‌ ದಂಡ ಬೀಳುತ್ತೆ!

ನೀವೇನಾದರೂ ಈ ರಸ್ತೆಗಳಲ್ಲಿ ಸಂಚರಿಸುತ್ತಿದ್ದರೆ, ದಂಡ ತೆರುವುದು ಅಥವಾ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವುದು ಗ್ಯಾರಂಟಿ. ಹಾಗಾದರೆ ಯಾವ ರಸ್ತೆಗಳು ಬಂದ್ ಆಗಲಿವೆ? ನೀವು ಯಾವ ಮಾರ್ಗವಾಗಿ ಚಲಿಸಬೇಕು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

ಅಧಿಕೃತ ಆದೇಶ
ಯಾವ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಬಂದ್?

ಕಾಮರಾಜ್ ರಸ್ತೆ: ಕಾಮರಾಜ್ ರಸ್ತೆಯ ವಿಠೋಬಾ ದೇವಸ್ಥಾನದಿಂದ ನಾಲಾ ರಸ್ತೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಕಬ್ಬನ್ ರಸ್ತೆ ಜಂಕ್ಷನ್: ಕಾಮರಾಜ್ ರಸ್ತೆಯ ಕೆ.ಆರ್. ರಸ್ತೆ – ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಡಿಕ್ಕನ್ಸನ್ ಜಂಕ್ಷನ್ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೂ ಬ್ರೇಕ್ ಬಿದ್ದಿದೆ.
ಟ್ರಾಫಿಕ್‌ನಲ್ಲಿ ಸಿಲುಕದಿರಲು ಪೊಲೀಸರು ನೀಡಿದ ‘ಪರ್ಯಾಯ ಮಾರ್ಗಗಳು’ ಇಲ್ಲಿದೆ

ನೀವೇನಾದರೂ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಹೋಗಬೇಕಿದ್ದರೆ ಪೊಲೀಸರು ಸೂಚಿಸಿರುವ ಈ ಶಾರ್ಟ್‌ಕಟ್ ಮಾರ್ಗಗಳನ್ನು ಬಳಸಿ ನಿಮ್ಮ ಸಮಯ ಉಳಿಸಿಕೊಳ್ಳಿ:

  1. ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಬರುವವರಿಗೆ: ಕಾಮರಾಜ್ ರಸ್ತೆ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಕಾಮರಾಜ್ ರಸ್ತೆಯ ವಿಠೋಬಾ ದೇವಸ್ಥಾನದ ಹತ್ತಿರ ಬಲ ತಿರುವು ಪಡೆದು, ವೀರಾಪಿಳ್ಳೆ ಸ್ಟ್ರೀಟ್ ಮೂಲಕ ನಾಗಮ್ಮ ದೇವಸ್ಥಾನದ ಹತ್ತಿರ ಎಡ ತಿರುವು ಪಡೆದು ಸೆಂಟ್ ಜಾನ್ ರಸ್ತೆಯ ಮೂಲಕ ನಿರಾತಂಕವಾಗಿ ಸಾಗಬಹುದು.
  2. ಕಬ್ಬನ್ ರಸ್ತೆ ಕಡೆಯಿಂದ ಬರುವವರಿಗೆ: ಕೆ.ಆರ್. ರಸ್ತೆ – ಕಬ್ಬನ್ ರಸ್ತೆ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು ಕಬ್ಬನ್ ರಸ್ತೆಯ ಮೂಲಕ ಚಲಿಸಿ, ಮಣಿಪಾಲ್ ಜಂಕ್ಷನ್ ಹತ್ತಿರ ಎಡ ತಿರುವು ಪಡೆದು ಡಿಕ್ಕನ್ಸನ್ ರಸ್ತೆ ಮೂಲಕ ನೇರವಾಗಿ ತೆರಳಿ ಬ್ಲೂ – ಸ್ಟೋನ್ ಹತ್ತಿರ ಬಲ ತಿರುವು ಪಡೆದುಕೊಂಡು ಸೆಂಟ್ ಜಾನ್ ರಸ್ತೆಯ ಮೂಲಕ ಮುಂದೆ ಸಾಗಬಹುದು.
  3. ಡಿಸ್ಪೆನ್ಸರಿ ರಸ್ತೆ (ಅಲಿಸ್ ಜಂಕ್ಷನ್) ಕಡೆಯಿಂದ ಬರುವವರಿಗೆ: ಈ ಮಾರ್ಗವಾಗಿ ಬರುವವರು ಡಿಕ್ಕನ್ಸನ್ ರಸ್ತೆ ಮೂಲಕ ನೇರವಾಗಿ ಚಲಿಸಿ ಬ್ಲೂ – ಸ್ಟೋನ್ ಹತ್ತಿರ ಎಡ ತಿರುವು ಪಡೆದು ಸೆಂಟ್ ಜಾನ್ ರಸ್ತೆ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ

ಪೂರ್ವ ವಿಭಾಗದ ಪೊಲೀಸ್‌ ಇಲಾಖೆ ಹೊರಡಿಸಿದ ಆದೇಶ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports