Last Updated:
ಜನರಲ್ ಅನಸ್ತೇಷಿಯಾ ನೀಡಲು ತಯಾರಿಮಡಿಕೊಳ್ಳಲು ದೇಹವು ಸಮತೋಲನಕ್ಕೆ ಬರಬೇಕು. 5ನೇ ತಾರೀಖಿನಂದು ಮತ್ತೊಂದು ವರದಿ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲರು ಹೇಳಿದ್ರು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ನಟ ದರ್ಶನ್ ಆರೋಪಿಯಾಗಿದ್ದಾರೆ. ಮಧ್ಯಂತರ ಜಾಮೀನು (Interim Bail) ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ (Actor Darshan) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಡಿ.09) ಹೈಕೋರ್ಟ್ನಲ್ಲಿ (High Court) ಜಾಮೀನು ಅರ್ಜಿ ವಿಚಾರಣೆ ನಡೆಯಿತು. ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಕೋರ್ಟ್ಗೆ ದರ್ಶನ್ ಹೆಲ್ತ್ ಅಪ್ಡೇಟ್ ನೀಡಿದ್ದಾರೆ. ಜೊತೆಗೆ ದರ್ಶನ್ ಸರ್ಜರಿ ಡೇಟ್ ಕೂಡ ತಿಳಿಸಿದ್ದಾರೆ.
ಮಧ್ಯಂತರ ಜಾಮೀನು ನೀಡುವಾಗ ನ್ಯಾಯಾಲಯ ವಿಧಿಸಿರುವ ಷರತ್ತು ಉಲ್ಲಂಘಿಸಿಲ್ಲ ಎಂದು ಸಿವಿ ನಾಗೇಶ್ ಹೇಳಿದ್ರು. ಜನರಲ್ ಅನಸ್ತೇಷಿಯಾ ನೀಡಲು ತಯಾರಿಮಡಿಕೊಳ್ಳಲು ದೇಹವು ಸಮತೋಲನಕ್ಕೆ ಬರಬೇಕು. 5ನೇ ತಾರೀಖಿನಂದು ಮತ್ತೊಂದು ವರದಿ ನೀಡಿದ್ದಾರೆ. ಸ್ಟಿರಾಯ್ಡ್ ಇಂಜೆಕ್ಷನ್ ನೀಡಲಾಗ್ತಿದೆ ಎಂದು ಕೋರ್ಟ್ಗೆ ತಿಳಿಸಿದ್ರು.
ದರ್ಶನ್ ಆಪರೇಷನ್ಗೆ ದಿನಾಂಕ ನಿಗದಿಯಾಗಿದೆ ಎಂದು ಹೇಳಿದ್ರಿ ಅಲ್ವಾ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಸಿವಿ ನಾಗೇಶ್ ಅವರು ಡಿಸೆಂಬರ್ 11ರಂದು ಆಪರೇಷನ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ ಎಂದು ಹೇಳಿದ್ರು.
ಫಿಸಿಯೋಥೆರಪಿ ಹಾಗೂ ವ್ಯಾಯಾಮ ಮಾಡಿಸಲಾಗ್ತಿದೆ. ಮೂರು ವಾರ ಆಯ್ತು ನಾಲ್ಕು ವಾರ ಆಯ್ತು ಆಪರೇಷನ್ ಮಾಡಿಸಿ ಅಂತ ಹೇಳೋಕೆ ಆಗಲ್ಲ ಡಾಕ್ಟರ್ ಹೇಳಿದಂತೆ ನಾವು ಆಪರೇಷನ್ ಮಾಡಿಸಬೇಕು ಎಂದು ಸಿವಿ ನಾಗೇಶ್ ಹೇಳಿದ್ರು.
ಡಿಸೆಂಬರ್ 11ಕ್ಕೆ ವೈದ್ಯರು ದರ್ಶನ್ಗೆ ಶಸ್ತ್ರಚಿಕಿತ್ಸೆ ಮಾಡಲು ದಿನಾಂಕ ನಿಗದಿಗೊಳಿಸಿದ್ದಾರೆ. ಮಧ್ಯಂತರ ಜಾಮೀನಿನ ಷರತ್ತು ಉಲ್ಲಂಘನೆ ಆಗಿಲ್ಲ. ವೈದ್ಯರಿಗೆ ನಿರ್ದಿಷ್ಟ ದಿನದಂದು ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಿವಿ ನಾಗೇಶ್ ಹೇಳಿದ್ರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಹೈ ಕೋರ್ಟ್ ಕೈಗೆತ್ತಿಕೊಂಡಿತ್ತು. ದರ್ಶನ್ ಪರ-ವಿರುದ್ಧ ವಕೀಲರು ವಾದ ಮಂಡಿಸಿದ್ರು. ಸುದೀರ್ಘ ವಾದ ಆಲಿಸಿದ ನ್ಯಾಯಧೀಶರು ತೀರ್ಪು ಕಾಯ್ದಿರಿಸಿದ್ದಾರೆ. ದಿನಾಂಕ ನಿಗದಿ ಮಾಡದೆ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.
ನಟ ದರ್ಶನ್ಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತೀರ್ಪು ಆದೇಶ ಹೊರಬೀಳುವವರೆಗೂ ನಟ ದರ್ಶನ್ ಮಧ್ಯಂತರ ಜಾಮೀನು ಅವಧಿ ಮುಂದುವರಿಕೆ ಆಗಲಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್, ಸದ್ಯ ಬೆಂಗಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೈಕೋರ್ಟ್ನಲ್ಲಿ ನಟ ದರ್ಶನ್ ಬೇಲ್ ಅರ್ಜಿ ವಿಚಾರಣೆ ನಡೆದಿದ್ದು, ಎಪಿಪಿ ಪ್ರಸನ್ನ ಕುಮಾರ್ ಅವರು ಪ್ರಬಲ ಪ್ರತಿವಾದ ಮಂಡಿಸಿದ್ರು. ರೇಣುಕಾಸ್ವಾಮಿ ಎದೆಯನ್ನ ದರ್ಶನ್ ತಿಳಿದಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಕೂಡ ಇದೆ ಎಂದು ಕೋರ್ಟ್ಗೆ ತಿಳಿಸಿದ್ರು.
ದರ್ಶನ್ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಹೇಗೆಲ್ಲಾ ಹಲ್ಲೆ ಮಾಡಿದ್ದಾರೆ ಎನ್ನುವುದ ಪುನೀತ್ ಬಾಯ್ಬಿಟ್ಟಿದ್ದಾನೆ ಎಂದು ಸಾಕ್ಷಿ ಹೇಳಿಕೆಯನ್ನು ಎಪಿಪಿ ಓದಿ ಹೇಳಿದ್ರು. ಫೋಟೋಗಳನ್ನು ತೋರಿಸಿದ್ದೀರಾ ಎಂದು ಜಡ್ಜ್ ಕೇಳಿದ್ರು. ಇದಕ್ಕೆ ಉತ್ತರಿಸಿದ ಎಸ್ಪಿಪಿ ಹೌದು ಎಂದಿದ್ದಾರೆ.
(ವರದಿ: ಗಂಗಾಧರ್, ನ್ಯೂಸ್ 18 ಕನ್ನಡ, ಬೆಂಗಳೂರು)













