Last Updated:
Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರದೋಷ್ ಮಾಫಿ ಸಾಕ್ಷಿಯಾಗೋಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲಿಯೇ ಈಗ ವಿನಯ್ ಕೂಡಾ ಮಾಫಿ ಸಾಕ್ಷಿಯಾಗೋಕೆ ಅರ್ಜಿ ಸಲ್ಲಿಸಿದ್ದಾನೆ. ಯಾರು ಈತ? ದರ್ಶನ್ಗೆ ಹೇಗೆ ಪರಿಚಯ?
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದ ಹಾಗೆ ಹಲವಾರು ಅಪ್ಡೇಟ್ಗಳು (Update) ನಡೆಯುತ್ತಿದೆ. ಒಂದು ಕಡೆ ಟ್ರಯಲ್ ನಡೆಯುತ್ತಿದ್ದರೆ ಇನ್ನೊಂದು ಕಡೆ ಮಾಫಿ ಸಾಕ್ಷಿ (Approver) ವಿಚಾರಣೆಗಳು ಪ್ರಗತಿಯಲ್ಲಿದೆ. ಹೀಗಿರುವಾಗಲೇ ದರ್ಶನ್ಗೆ (Darshan) ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ. ಪ್ರದೋಷ್ (Pradosh) ತಿರುಗಿಬಿದ್ದ ಬೆನ್ನಲ್ಲೇ ಈಗ ದರ್ಶನ್ ಜೊತೆಗಿದ್ದ ಮತ್ತೊಬ್ಬ ಆರೋಪಿ 10 ದಾಸನಿಗೆ ತಿರುಗಿಬಿದ್ದಿದ್ದಾನೆ. ಆ ಕುರಿತ ವಿವರ ಇಲ್ಲಿದೆ.














