Last Updated:
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸಾಕ್ಷಿಯಾಗಿರುವ ಸಂದೀಪ್ಗೆ ಮತ್ತೊಬ್ಬ ಸಾಕ್ಷಿಯಾಗಿರೋ ಪುನೀತ್ ಎಂಬಾತನೇ ಬೆದರಿಕೆ ಹಾಕಿದ್ದಾನೆ ಎನ್ನುವ ವಿಚಾರ ಬಯಲಾಗಿದೆ. ಈ ಪುನೀತ್ ಯಾರು? ಈತನಿಗೂ ರೇಣುಕಾಸ್ವಾಮಿಗೂ ಏನು ಸಂಬಂಧ? ಇಲ್ಲಿದೆ ಸ್ಫೋಟಕ ಮಾಹಿತಿ
ಬೆಂಗಳೂರು (ಜು.02): ರೇಣುಕಾಸ್ವಾಮಿ (Renukaswamy Case) ಪ್ರಕರಣದ ಸಾಕ್ಷಿ ಬೆದರಿಕೆ ಕೇಸ್ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ನಮ್ ಡಿ ಬಾಸ್ನ ಜೈಲಿನಲ್ಲಿ ನೋಡೋಕೆ ಆಗ್ತಿಲ್ಲ ಅಂತ ಸಾಕ್ಷಿಗೆ ಬೆದರಿಕೆ ಹಾಕಿದವನು ಬೇರೆ ಯಾರೂ ಅಲ್ಲ. ಈ ಡಿ ಗ್ಯಾಂಗ್ (D Gang) ಕೃತ್ಯಕ್ಕೆ ಸಾಥ್ ಕೊಟ್ಟವನೇ ಎನ್ನುವ ಮಾಹಿತಿ ಹೊರಬಂದಿದೆ. ಬಂಧಿತ ಪುನೀತ್ ಕೂಡ ರೇಣುಕಾಸ್ವಾಮಿ ಕೊಲೆ ಕೇಸ್ನ ಪ್ರಮುಖ ಸಾಕ್ಷಿಯಾಗಿದ್ದಾನೆ ಎನ್ನುವ ಸ್ಪೋಟಕ ವಿಚಾರ ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ಆರೋಪಿಗಳ ಪರವಾಗಿ ಸಾಕ್ಷಿ ನುಡಿಯಬೇಕು ಎಂದು ರೇಣುಕಾಸ್ವಾಮಿ ಕೊಲೆ ಕೇಸ್ನ ಸಾಕ್ಷಿದಾರ ಸಂದೀಪ್ ಅವರಿಗೆ ಬೆದರಿಕೆ ಹಾಕಿದ್ದರು ಎನ್ನುವ ಆರೋಪವಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದು, ತುಮಕೂರಿನ ದುರ್ಗಾ ಬಾರ್ ಕ್ಯಾಶಿಯರ್ಗೆ ಧಮ್ಕಿ ಹಾಕಿದವನು ಬೇರೆ ಯಾರೂ ಅಲ್ಲ, ಇದೇ ಕೇಸ್ನ ಮತ್ತೊಬ್ಬ ಸಾಕ್ಷಿ ಅನ್ನೋ ವಿಚಾರ ಬಯಲಾಗಿದೆ.
ಕಳೆದ ಜೂನ್ 25 ರಂದು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ತುಮಕೂರಿನ ದುರ್ಗಾ ಬಾರ್ ಕ್ಯಾಶಿಯರ್ ಸಂದೀಪ್ ಪ್ರಮುಖ ಸಾಕ್ಷಿಯಾಗಿದ್ದಾರೆ. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರುವ ಮಾರ್ಗಮಧ್ಯೆ ಆರೋಪಿಗಳು ತುಮಕೂರಿನಲ್ಲಿ ಕಾರು ನಿಲ್ಲಿಸಿದ್ರು.
ತುಮಕೂರಿನ ದುರ್ಗಾ ಬಾರ್ನಲ್ಲಿ ಮದ್ಯ ಖರೀದಿಸಿದ್ದರು ಎನ್ನಲಾಗ್ತಿದೆ. ಈ ವೇಳೆ ದುರ್ಗಾ ಬಾರ್ ಕ್ಯಾಶಿಯರ್ ಸಂದೀಪ್ ಗೆ ಹಣ ಪಾವತಿಸಿದ್ದಾರೆ. ಹೀಗಾಗಿ ರೇಣುಕಾಸ್ವಾಮಿಯನ್ನ ಆರೋಪಿಗಳು ಬೆಂಗಳೂರಿಗೆ ಕರೆತಂದಿದ್ದಕ್ಕೆ ಸಂದೀಪ್ ಪ್ರಮುಖ ಸಾಕ್ಷಿಯಾಗಿದ್ದ ಎಂದು ವರದಿ ಆಗಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸಾಕ್ಷಿಯಾಗಿರುವ ಸಂದೀಪ್ಗೆ ಮತ್ತೊಬ್ಬ ಸಾಕ್ಷಿಯಾಗಿರೋ ಪುನೀತ್ ಎಂಬಾತನೇ ಬೆದರಿಕೆ ಹಾಕಿದ್ದಾನೆ ಎನ್ನುವ ವಿಚಾರ ಬಯಲಾಗಿದೆ. ರೇಣುಕಾಸ್ವಾಮಿ ಹತ್ಯೆಯಾದ ನಂತರ ಆರೋಪಿಗಳೆಲ್ಲಾ ಮೃತದೇಹ ಸಾಗಿಸಿದ್ದರು. ಮೃತದೇಹ ಸಾಗಾಟ ಮಾಡಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕನೇ ಬೆದರಿಕೆ ಹಾಕಿದ ಆರೋಪಿ ಪುನೀತ್ ಎನ್ನುವ ವಿಚಾರ ತನಿಖೆ ವೇಳೆ ಹೊರಬಂದಿದೆ.
ಈತ ಚಿಕ್ಕಬಳ್ಳಾಪುರದಿಂದ ದರ್ಶನ್ ಫಾರ್ಮ್ ಹೌಸ್ ಗೆ ಮೇಕೆಗಳನ್ನ ಕೊಂಡೊಯ್ಯಲು ಕಾರನ್ನ ನೀಡಿದ್ದೆ ಎಂದಿದ್ದಾನೆ ಈತ. ಮೈಸೂರು ಮೂಲದ ದರ್ಶನ್ ಮ್ಯಾನೇಜರ್ ನಾಗರಾಜ್ ಸ್ಕಾರ್ಪಿಯೋ ಕಾರನ್ನ ಪಡೆದಿದ್ರಂತೆ. ಬಳಿಕ ರೇಣುಕಾಸ್ವಾಮಿ ಶವವನ್ನ ಕೂಡ ಇದೇ ಪುನೀತ್ ಅವರ ಸ್ಕಾರ್ಪಿಯೋ ಕಾರನಲ್ಲೇ ಸಾಗಿಸಿದ್ರು.
ಹೀಗಾಗಿ ಕಾರು ಮಾಲೀಕ ಪುನೀತ್ನನ್ನು ಕೂಡ ಸಾಕ್ಷಿದಾರನಾಗಿ ಪರಿಗಣಿಸಲಾಗಿತ್ತು. ಪುನೀತ್ ಮೂಲತಃ ಹಾಸನದ ಅರಸೀಕೆರೆಯವನಾಗಿದ್ದು. ಬೆಂಗಳೂರಿನ ಮಹದೇವಪುರದಲ್ಲಿ ವಾಸವಾಗಿದ್ದ. ದರ್ಶನ್ ಅಭಿಮಾನಿ ಆಗಿರೋ ಆರೋಪಿ ಪುನೀತ್, ದರ್ಶನ್ ಹೆಸರಿನಲ್ಲಿ ಇನ್ಸಾಗ್ರಾಮ್, ಫೇಸ್ಬುಕ್ ಖಾತೆಗಳಾದ ಡಿ ಕಂಪನಿ, ದರ್ಶನ್ ತೂಗುದೀಪ ಶ್ರೀನಿವಾಸ್, ದಾಸ ದರ್ಶನ್ ಸೇರಿ ದರ್ಶನ್ ಕೆಲ ಫ್ಯಾನ್ಸ್ ಪೇಜ್ಗಳನ್ನ ಈತನೇ ನೋಡಿಕೊಳ್ತಿದ್ದನಂತೆ.
ರೇಣುಕಾಸ್ವಾಮಿ ಹತ್ಯೆಗೂ ಮುನ್ನ ಎಂಟು ವರ್ಷಗಳಿಂದ ದರ್ಶನ್ ಹೆಸರಿನ ಸಾಮಾಜಿಕ ಜಾಲತಾಣಗಳನ್ನ ಪುನೀತ್ ಒಬ್ಬನೇ ಹ್ಯಾಂಡಲ್ ಮಾಡ್ತಿದ್ದ ಎನ್ನುವ ವಿಚಾರ ಇದೀಗ ಹೊರಬಂದಿದೆ.
(ವರದಿ: ಮಂಜುನಾಥ್, ನ್ಯೂಸ್18 ಕನ್ನಡ, ಬೆಂಗಳೂರು)
Jul 02, 2026 10:12 AM IST
Darshan Case: ದರ್ಶನ್ ಕೇಸ್ಗೆ ರೋಚಕ ಟ್ವಿಸ್ಟ್, ಡಿ ಗ್ಯಾಂಗ್ಗೆ ಸಾಥ್ ಕೊಟ್ಟವನಿಂದನೇ ಬೆದರಿಕೆನಾ? ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು!













