Darshan Case: ದರ್ಶನ್​ ಕೇಸ್​​ಗೆ ರೋಚಕ ಟ್ವಿಸ್ಟ್​, ಡಿ ಗ್ಯಾಂಗ್​​ಗೆ ಸಾಥ್​​ ಕೊಟ್ಟವನಿಂದನೇ ಬೆದರಿಕೆನಾ? ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು! | | ACTPnews

News18


Last Updated:

ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸಾಕ್ಷಿಯಾಗಿರುವ ಸಂದೀಪ್​ಗೆ ಮತ್ತೊಬ್ಬ ಸಾಕ್ಷಿಯಾಗಿರೋ ಪುನೀತ್ ಎಂಬಾತನೇ ಬೆದರಿಕೆ ಹಾಕಿದ್ದಾನೆ ಎನ್ನುವ ವಿಚಾರ ಬಯಲಾಗಿದೆ. ಈ ಪುನೀತ್ ಯಾರು? ಈತನಿಗೂ ರೇಣುಕಾಸ್ವಾಮಿಗೂ ಏನು ಸಂಬಂಧ? ಇಲ್ಲಿದೆ ಸ್ಫೋಟಕ ಮಾಹಿತಿ

News18
News18

ಬೆಂಗಳೂರು (ಜು.02): ರೇಣುಕಾಸ್ವಾಮಿ (Renukaswamy Case) ಪ್ರಕರಣದ ಸಾಕ್ಷಿ ಬೆದರಿಕೆ ಕೇಸ್​​ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ನಮ್ ಡಿ ಬಾಸ್​​ನ ಜೈಲಿನಲ್ಲಿ ನೋಡೋಕೆ ಆಗ್ತಿಲ್ಲ ಅಂತ ಸಾಕ್ಷಿಗೆ ಬೆದರಿಕೆ ಹಾಕಿದವನು ಬೇರೆ ಯಾರೂ ಅಲ್ಲ. ಈ ಡಿ ಗ್ಯಾಂಗ್ (D Gang) ಕೃತ್ಯಕ್ಕೆ ಸಾಥ್ ಕೊಟ್ಟವನೇ ಎನ್ನುವ ಮಾಹಿತಿ ಹೊರಬಂದಿದೆ. ಬಂಧಿತ ಪುನೀತ್​ ಕೂಡ ರೇಣುಕಾಸ್ವಾಮಿ ಕೊಲೆ ಕೇಸ್​​ನ ಪ್ರಮುಖ ಸಾಕ್ಷಿಯಾಗಿದ್ದಾನೆ ಎನ್ನುವ ಸ್ಪೋಟಕ ವಿಚಾರ ಪೊಲೀಸ್​ ತನಿಖೆ ವೇಳೆ ಬಯಲಾಗಿದೆ. 

ಸಾಕ್ಷಿಗೆ ಬೆದರಿಕೆ ಹಾಕಿದವನೂ ಕೂಡ ಸಾಕ್ಷಿನೇ?

ಆರೋಪಿಗಳ ಪರವಾಗಿ ಸಾಕ್ಷಿ ನುಡಿಯಬೇಕು ಎಂದು ರೇಣುಕಾಸ್ವಾಮಿ ಕೊಲೆ ಕೇಸ್​​ನ ಸಾಕ್ಷಿದಾರ ಸಂದೀಪ್ ಅವರಿಗೆ ಬೆದರಿಕೆ ಹಾಕಿದ್ದರು ಎನ್ನುವ ಆರೋಪವಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದು,  ತುಮಕೂರಿನ ದುರ್ಗಾ ಬಾರ್ ಕ್ಯಾಶಿಯರ್​ಗೆ ಧಮ್ಕಿ ಹಾಕಿದವನು ಬೇರೆ ಯಾರೂ ಅಲ್ಲ, ಇದೇ ಕೇಸ್​ನ ಮತ್ತೊಬ್ಬ ಸಾಕ್ಷಿ ಅನ್ನೋ ವಿಚಾರ ಬಯಲಾಗಿದೆ.

ಬಾರ್ ಕ್ಯಾಶಿಯರ್​ ಸಂದೀಪ್

ಕಳೆದ ಜೂನ್ 25 ರಂದು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ  ತುಮಕೂರಿನ ದುರ್ಗಾ ಬಾರ್ ಕ್ಯಾಶಿಯರ್​ ಸಂದೀಪ್​ ಪ್ರಮುಖ ಸಾಕ್ಷಿಯಾಗಿದ್ದಾರೆ. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರುವ ಮಾರ್ಗಮಧ್ಯೆ ಆರೋಪಿಗಳು ತುಮಕೂರಿನಲ್ಲಿ ಕಾರು ನಿಲ್ಲಿಸಿದ್ರು.

ಪ್ರಮುಖ ಸಾಕ್ಷಿಗೆ ಮತ್ತೊಬ್ಬ ಸಾಕ್ಷಿಯಿಂದ ಬೆದರಿಕೆ

ತುಮಕೂರಿನ ದುರ್ಗಾ ಬಾರ್​ನಲ್ಲಿ ಮದ್ಯ ಖರೀದಿಸಿದ್ದರು ಎನ್ನಲಾಗ್ತಿದೆ. ಈ ವೇಳೆ ದುರ್ಗಾ ಬಾರ್ ಕ್ಯಾಶಿಯರ್ ಸಂದೀಪ್ ಗೆ ಹಣ ಪಾವತಿಸಿದ್ದಾರೆ. ಹೀಗಾಗಿ ರೇಣುಕಾಸ್ವಾಮಿಯನ್ನ ಆರೋಪಿಗಳು ಬೆಂಗಳೂರಿಗೆ ಕರೆತಂದಿದ್ದಕ್ಕೆ ಸಂದೀಪ್ ಪ್ರಮುಖ ಸಾಕ್ಷಿಯಾಗಿದ್ದ ಎಂದು ವರದಿ ಆಗಿದೆ.

ರೇಣುಕಾಸ್ವಾಮಿ ಡೆಡ್​ಬಾಡಿ ಸಾಗಿಸಿದ್ದ ಕಾರಿನ ಮಾಲೀಕ

ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸಾಕ್ಷಿಯಾಗಿರುವ ಸಂದೀಪ್​ಗೆ ಮತ್ತೊಬ್ಬ ಸಾಕ್ಷಿಯಾಗಿರೋ ಪುನೀತ್ ಎಂಬಾತನೇ ಬೆದರಿಕೆ ಹಾಕಿದ್ದಾನೆ ಎನ್ನುವ ವಿಚಾರ ಬಯಲಾಗಿದೆ. ರೇಣುಕಾಸ್ವಾಮಿ ಹತ್ಯೆಯಾದ ನಂತರ ಆರೋಪಿಗಳೆಲ್ಲಾ ಮೃತದೇಹ ಸಾಗಿಸಿದ್ದರು. ಮೃತದೇಹ ಸಾಗಾಟ ಮಾಡಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕನೇ ಬೆದರಿಕೆ ಹಾಕಿದ ಆರೋಪಿ ಪುನೀತ್ ಎನ್ನುವ ವಿಚಾರ ತನಿಖೆ ವೇಳೆ ಹೊರಬಂದಿದೆ.

ಸ್ಕಾರ್ಪಿಯೋ ಕಾರ್ ಓನರ್ ಪ್ರದೀಪ್

ಈತ ಚಿಕ್ಕಬಳ್ಳಾಪುರದಿಂದ ದರ್ಶನ್ ಫಾರ್ಮ್ ಹೌಸ್ ಗೆ ಮೇಕೆಗಳನ್ನ ಕೊಂಡೊಯ್ಯಲು ಕಾರನ್ನ ನೀಡಿದ್ದೆ ಎಂದಿದ್ದಾನೆ ಈತ. ಮೈಸೂರು ಮೂಲದ ದರ್ಶನ್ ಮ್ಯಾನೇಜರ್ ನಾಗರಾಜ್ ಸ್ಕಾರ್ಪಿಯೋ ಕಾರನ್ನ ಪಡೆದಿದ್ರಂತೆ. ಬಳಿಕ ರೇಣುಕಾಸ್ವಾಮಿ ಶವವನ್ನ ಕೂಡ ಇದೇ ಪುನೀತ್​ ಅವರ ಸ್ಕಾರ್ಪಿಯೋ ಕಾರನಲ್ಲೇ ಸಾಗಿಸಿದ್ರು.

ದರ್ಶನ್​ ಫ್ಯಾನ್ಸ್​ ಪೇಜ್​ನ ಹ್ಯಾಂಡಲ್ ಮಾಡ್ತಿದ್ದ

ಹೀಗಾಗಿ ಕಾರು ಮಾಲೀಕ ಪುನೀತ್​ನನ್ನು ಕೂಡ ಸಾಕ್ಷಿದಾರನಾಗಿ ಪರಿಗಣಿಸಲಾಗಿತ್ತು. ಪುನೀತ್​ ಮೂಲತಃ ಹಾಸನದ ಅರಸೀಕೆರೆಯವನಾಗಿದ್ದು. ಬೆಂಗಳೂರಿನ ಮಹದೇವಪುರದಲ್ಲಿ ವಾಸವಾಗಿದ್ದ. ದರ್ಶನ್ ಅಭಿಮಾನಿ ಆಗಿರೋ ಆರೋಪಿ ಪುನೀತ್, ದರ್ಶನ್ ಹೆಸರಿನಲ್ಲಿ ಇನ್ಸಾಗ್ರಾಮ್​, ಫೇಸ್​ಬುಕ್​ ಖಾತೆಗಳಾದ ಡಿ ಕಂಪನಿ, ದರ್ಶನ್ ತೂಗುದೀಪ ಶ್ರೀನಿವಾಸ್, ದಾಸ ದರ್ಶನ್ ಸೇರಿ ದರ್ಶನ್ ಕೆಲ ಫ್ಯಾನ್ಸ್ ಪೇಜ್​ಗಳನ್ನ ಈತನೇ ನೋಡಿಕೊಳ್ತಿದ್ದನಂತೆ.

ರೇಣುಕಾಸ್ವಾಮಿ ಹತ್ಯೆಗೂ ಮುನ್ನ ಎಂಟು ವರ್ಷಗಳಿಂದ ದರ್ಶನ್ ಹೆಸರಿನ ಸಾಮಾಜಿಕ ಜಾಲತಾಣಗಳನ್ನ ಪುನೀತ್ ಒಬ್ಬನೇ ಹ್ಯಾಂಡಲ್ ಮಾಡ್ತಿದ್ದ ಎನ್ನುವ ವಿಚಾರ ಇದೀಗ ಹೊರಬಂದಿದೆ.

(ವರದಿ: ಮಂಜುನಾಥ್​, ನ್ಯೂಸ್​18 ಕನ್ನಡ, ಬೆಂಗಳೂರು)

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Darshan Case: ದರ್ಶನ್​ ಕೇಸ್​​ಗೆ ರೋಚಕ ಟ್ವಿಸ್ಟ್​, ಡಿ ಗ್ಯಾಂಗ್​​ಗೆ ಸಾಥ್​​ ಕೊಟ್ಟವನಿಂದನೇ ಬೆದರಿಕೆನಾ? ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed