Last Updated:
ಜೊತೆಗೇ ಕೂತ್ಕೊಂಡು ಪಾರ್ಟಿ ಮಾಡಿದವ್ರೇ ಈಗ ಕಂಟಕವಾಗೋ ಸೂಚನೆ ಕೊಡ್ತಿದ್ದಾರೆ. ಇಷ್ಟು ದಿನ ಆರೋಪಿಯಾಗಿದ್ದ ಮೂವರು, ಮಾಫಿ ಸಾಕ್ಷಿಯಾಗೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ದರ್ಶನ್ ಪಾಲಿಗೀಗ ತನ್ನ ಜೊತೆಗಿದ್ದವ್ರೇ ಶತ್ರುಗಳಂತೆ ಕಾಣೋದಕ್ಕೆ ಶುರುವಾಗಿದ್ದಾರೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಮಹತ್ವದ ಬೆಳವಣಿಗೆ ಕಂಡುಬಂದಿದೆ. ಆರೋಪಿ ದರ್ಶನ್ಗೆ ಒಂದರ ಮೇಲೊಂದರಂತೆ ಗಂಡಾಂತರ ಎದುರಾಗ್ತಾನೇ ಇದ್ದು, ಇದೀಗ ದರ್ಶನ್ (Darshan) ಪಾಲಿಗೆ ಬರಸಿಡಿಲೊಂದು ಅಪ್ಪಳಿಸಿದೆ. ಜೊತೆಗೇ ಕೂತ್ಕೊಂಡು ಪಾರ್ಟಿ ಮಾಡಿದವ್ರೇ ಈಗ ಕಂಟಕವಾಗೋ ಸೂಚನೆ ಕೊಡ್ತಿದ್ದಾರೆ. ಇಷ್ಟು ದಿನ ಆರೋಪಿಯಾಗಿದ್ದ ಮೂವರು, ಮಾಫಿ ಸಾಕ್ಷಿಯಾಗೋದಕ್ಕೆ (Approver) ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ದರ್ಶನ್ ಪಾಲಿಗೀಗ ತನ್ನ ಜೊತೆಗಿದ್ದವ್ರೇ ಶತ್ರುಗಳಂತೆ ಕಾಣೋದಕ್ಕೆ ಶುರುವಾಗಿದ್ದಾರೆ.














