Last Updated:
Darshan: ನಿಯಮ ಮೀರಿ ತನ್ನನ್ನು ಕ್ವಾರಂಟೈನ್ ಸೆಲ್ನಲ್ಲಿಡಲಾಗಿದೆ ಹೀಗೆ ಹಲವು ವಿಚಾರಗಳನ್ನು ಉಲ್ಲೇಖಿಸಿ ದರ್ಶನ್ ಅಳಲು ತೋಡಿಕೊಂಡಿದ್ದರು. ಇದೀಗ ದರ್ಶನ್ ಮಾಡಿರುವ ಎಲ್ಲಾ ಆರೋಪಗಳಿಗೆ ಜೈಲಾಧಿಕಾರಿಗಳು ಅಧಿಕೃತವಾಗಿ ಉತ್ತರ ನೀಡಿದ್ದು, ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಆಗಿರುವ ಕಾರಾಗೃಹ ಇಲಾಖೆ ಸಲ್ಲಿಸಿರುವ ರಿಪೋರ್ಟ್ ಕುರಿತ ಎಕ್ಸ್‌ಕ್ಲೂಸಿವ್ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಜೈಲು ಸೇರಿ ಬರೋಬ್ಬರಿ ಒಂದು ವರ್ಷ ಕಳೆದಿದೆ. ಮೊದಲು 2024ರ ಜೂನ್ 11 ರಂದು ಮೈಸೂರಿನಲ್ಲಿ ದರ್ಶನ್ ಬಂಧನಕ್ಕೆ ಒಳಗಾಗಿದ್ರು. 2024 ಅಕ್ಟೋಬರ್ 30ರ ತನಕ ಅಂದ್ರೆ 131 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ರು. ಇದಾದ ಬಳಿಕ ದರ್ಶನ ಸೇರಿ ಉಳಿದ ಎಲ್ಲಾ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ರು. ಆ ಬಳಿಕ ಮತ್ತೆ ದರ್ಶನ ಸಹಿತ ಏಳು ಜನ ಆರೋಪಿಗಳ ಜಾಮೀನು ರದ್ದಾಗಿ ಮತ್ತೆ ಜೈಲು ಸೇರುವಂತಾಯಿತು.
ಈ ಮಧ್ಯೆ ಇತ್ತೀಚೆಗೆ ನಟ ದರ್ಶನ್ ಮತ್ತೆ ಜಾಮೀನಿಗಾಗಿ ಸುಪ್ರೀಂಕೋರ್ಟ್ನಲ್ಲಿ (Supreme Court) ಅರ್ಜಿ ಸಲ್ಲಿಸಿದ್ದರು. ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ನಟ ಹಲವು ವಿಚಾರಗಳನ್ನು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಜೈಲಿನಲ್ಲಿ ಸಹಕೈದಿಗಳಿಂದ ಬೆದರಿಕೆ ಮತ್ತು ನಿಂದನೆ, ಜೈಲಿನಲ್ಲಿ ತನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿಯಮ ಮೀರಿ ತನ್ನನ್ನು ಕ್ವಾರಂಟೈನ್ ಸೆಲ್ನಲ್ಲಿಡಲಾಗಿದೆ ಹೀಗೆ ಹಲವು ವಿಚಾರಗಳನ್ನು ಉಲ್ಲೇಖಿಸಿ ದರ್ಶನ್ ಅಳಲು ತೋಡಿಕೊಂಡಿದ್ದರು. ಇದೀಗ ದರ್ಶನ್ ಮಾಡಿರುವ ಎಲ್ಲಾ ಆರೋಪಗಳಿಗೆ ಜೈಲಾಧಿಕಾರಿಗಳು ಅಧಿಕೃತವಾಗಿ ಉತ್ತರ ನೀಡಿದ್ದು, ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಆಗಿರುವ ಕಾರಾಗೃಹ ಇಲಾಖೆ ಸಲ್ಲಿಸಿರುವ ರಿಪೋರ್ಟ್ ಕುರಿತ ಎಕ್ಸ್‌ಕ್ಲೂಸಿವ್ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ನಟ ದರ್ಶನ್ ಹೇಳುವಂತೆ ಯಾವುದೇ ರೀತಿಯ ತೊಂದರೆಗಳು ಜೈಲಿನಲ್ಲಿ ಆಗಿಲ್ಲ ಎಂದು ಜೈಲಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಆಗಿರುವ ಕಾರಾಗೃಹ ಇಲಾಖೆ ಸಲ್ಲಿಸಿರುವ ರಿಪೋರ್ಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನಟ ದರ್ಶನ್ ಇರುವ ಬ್ಯಾರಕ್‌ನಲ್ಲಿ 24X7 ಭದ್ರತೆ ನೀಡಲಾಗಿದೆ. ಅಷ್ಟೇ ಅಲ್ಲದೆ ನಟ ದರ್ಶನ್‌ಗೆ ಕಾರ್ಪೆಟ್, ಕಂಬಳಿ, ತಟ್ಟೆ, ಲೋಟ, ಬೌಲ್ ಹಾಗೆಯೇ ಕೋರ್ಟ್ ಆದೇಶದಂತೆ ಚಾದರ್/ಕಂಬಳಿ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಹಗಲಿನಲ್ಲಿ ಭದ್ರತೆಗೆ ಒಬ್ಬ ಸಹಾಯಕ ಜೈಲರ್, ವಾರ್ಡರ್ ನೇಮಿಸಲಾಗಿದೆ. ಹಾಗೂ ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್‌ಗಳ ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಬೇರೆ ಕೈದಿಗಳು ಕಾರಿಡಾರ್‌ಗೆ ಬಾರದಂತೆ ಭದ್ರತೆಗಾಗಿ ಬ್ಯಾರಕ್ ಮುಂಭಾಗದ ಕಾರಿಡಾರ್‌ನಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೇ, ನಟ ದರ್ಶನ್ ಜೈಲಿನಲ್ಲಿ ಇತರೆ ಕೈದಿಗಳಿಗಿಂತ ತೊಂದರೆ ಉಂಟಾಗುತ್ತಿದೆ, ಕುಟುಂಬದವರ ಭೇಟಿಗೆ ಸರಿಯಾದ ಸಮಯವಕಾಶವನ್ನು ಸಹ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಕಾರಾಗೃಹ ಇಲಾಖೆ ಸಲ್ಲಿಸಿರುವ ರಿಪೋರ್ಟ್‌ನಲ್ಲಿ ಉತ್ತರ ನೀಡಲಾಗಿದೆ. ಆ ರಿಪೋರ್ಟ್‌ನಲ್ಲಿ ‘2025 ಆಗಸ್ಟ್‌ನಿಂದ ಜೈಲಿನಲ್ಲಿರುವ ದರ್ಶನ್ ಅವರಿಗೆ ಈವರೆಗೆ 70 ಬಾರಿ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೆ 73 ಬಾರಿ ಫೋನ್ ಕರೆಗಳ ಸೌಲಭ್ಯವನ್ನು ನೀಡಲಾಗಿದೆ. ಜೊತೆಗೆ ಜೈಲಿನಲ್ಲಿ 28 ಬಾರಿ ವಕೀಲರ ಭೇಟಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಮೂಲಭೂತ ಸೌಕರ್ಯಗಳಾದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆಯಲೂ ಬಿಡುತ್ತಿಲ್ಲ ಎಂದು ದರ್ಶನ್ ಆರೋಪಿಸಿದ್ದರು ಇದಕ್ಕೆ ಉತ್ತರ ನೀಡಿ ಜೈಲಿನ ಮೆನುವಿನಂತೆ ಆಹಾರ ಪೂರೈಕೆ ಆಗುತ್ತಿದೆ
ಮೊಟ್ಟೆ, ಬ್ರೆಡ್ ಮತ್ತು ಹಾಲಿನಂತಹ ಹೆಚ್ಚುವರಿ ಆಹಾರಗಳನ್ನು ನೀಡಲಾಗುತ್ತಿದೆ. ಅದರ ಜೊತೆಗೆ ಸಂದರ್ಶಕರು ತರುವ ಹಣ್ಣುಗಳು, ಡ್ರೈ ಫ್ರೂಟ್ಸ್‌ಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದೀಗ ದರ್ಶನ್ ಮಾಡಿರುವ ಆರೋಪಗಳಿಗೆ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಆಗಿರುವ ಕಾರಾಗೃಹ ಇಲಾಖೆ ಸಲ್ಲಿಸಿರುವ ರಿಪೋರ್ಟ್‌ನಲ್ಲಿ ಅಧಿಕೃತ ಮಾಹಿತಿಗಳ ಮೂಲಕ ತಿರುಗೇಟು ನೀಡಿದ್ದಾರೆ.
Bangalore [Bangalore],Bangalore,Karnataka













