Last Updated:
Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದರು. ಇದೀಗ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ , ಮಗ ವಿನೀಶ್ ಹಾಗೂ ಮ್ಯಾನೇಜರ್ ನಾಗರಾಜ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ (Actor Darshan) ಅವರನ್ನು ಭೇಟಿ ಮಾಡಲು ಅವಕಾಶ ಬೇಕು ಎಂದು ಪತ್ನಿ ವಿಜಯಲಕ್ಷ್ಮಿ(Vijaylakshmi) ಮನವಿ ಮಾಡಿಕೊಂಡಿದ್ದರು. ಜೊತೆಗೆ ಇಂದು ನಟ ದರ್ಶನ್ ಗೆ ವಿವಾಹ ವಾರ್ಷಿಕೊತ್ಸವದ ಆಗಿರುವುದರಿಂದ ಈ ಭೇಟಿಗೆ ಅವಕಾಶ ನೀಡಬೇಕು ಎಂದು ಹೇಳಿಕೊಂಡಿದ್ದರು. ಈ ಹಿಂದೆ ಪ್ರತಿಬಾರಿ ಪತ್ನಿ, ಮಗ, ಕುಟುಂಬದವರ ಜೊತೆ ಸೇರಿ ಸೆಲಬರೇಷನ್ ಮಾಡ್ತಿದ್ರು.ಆದ್ರೆ ಈ ಬಾರಿ ಕೊಲೆ ಸಂಬಂಧ ಜೈಲಿನಲ್ಲಿ ಇರುವ ಹಿನ್ನೆಲೆ ಸೆಲಬರೇಷನ್ ಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಪತ್ನಿ ವಿಜಯಲಕ್ಷ್ಮಿ ಇಂದು ಜೈಲಿನಲ್ಲಿ ದರ್ಶನ್ ಭೇಟಿ ಮಾಡಲು ಅನುಮತಿ ಕೋರಿದ್ದರು.
ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದರು. ಇದೀಗ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ , ಮಗ ವಿನೀಶ್ ಹಾಗೂ ಮ್ಯಾನೇಜರ್ ನಾಗರಾಜ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ.
ಇದೀಗ ಜೈಲಿನಲ್ಲಿರುವ ನಟ ದರ್ಶನ್, ಪತ್ನಿ ಹಾಗೂ ,ಮಗನ ಕಂಡು ಭಾವುಕರಾಗಿದ್ದಾರೆ. ಜೊತೆಗೆ ಎಂಟು ತಿಂಗಳ ಬಳಿಕ ಇದು ಮೊದಲ ಮುಖಾಮುಖಿ ಭೇಟಿಯಾಗಿರುವುದರಿಂದ ದರ್ಶನ್ ಸ್ವಲ್ಪ ಜಾಸ್ತಿನೇ ಎಮೋಷನಲ್ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಜೊತೆಗೆ ಸುಮಾರು ದಿನಗಳ ಬಳಿಕ ನೋಡಿದ್ದರಿಂದ ದರ್ಶನ್, ಮಗನನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ದರ್ಶನ್ ಭೇಟಿ ವೇಳೆ ಹಣ್ಣು ಸೇರಿದಂತೆ ಮನೆಯ ಪದಾರ್ಥಗಳನ್ನು ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಹಾಗೆಯೇ ಮನೆಯಿಂದ ತರುವ ಎಲ್ಲಾ ಪದಾರ್ಥಗಳನ್ನು ಸ್ಕ್ಯಾನ್ ಮಾಡಿ ಸಂಪೂರ್ಣ ಪರಿಶೀಲಿಸಿ ದರ್ಶನ್ ಗೆ ಕೊಡಲು ಅವಕಾಶ ನೀಡಲಾಗಿದೆ.
ಹಾಗೆಯೇ ಜೈಲಿನ ಮ್ಯಾನ್ಯುಯಲ್ ಪ್ರಕಾರ ಓರ್ವ ಕೈದಿ ಮಾನಸಿಕ ಹಾಗೂ ಶಾರೀರಿಕವಾಗಿ ಕುಗ್ಗಿದ ಸಂದರ್ಭದಲ್ಲಿ ಈ ರೀತಿಯ ಅವಕಾಶ ಕೊಡಲಾಗುತ್ತೆ. ಹೀಗಾಗಿಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಈ ಬೇಡಿಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಜೈಲು ಸೇರಿ ಬರೋಬ್ಬರಿ ಒಂದು ವರ್ಷ ಕಳೆದಿದೆ. ಮೊದಲು 2024ರ ಜೂನ್ 11 ರಂದು ಮೈಸೂರಿನಲ್ಲಿ ದರ್ಶನ್ ಬಂಧನಕ್ಕೆ ಒಳಗಾಗಿದ್ರು. 2024 ಅಕ್ಟೋಬರ್ 30ರ ತನಕ ಅಂದ್ರೆ 131 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ರು. ಇದಾದ ಬಳಿಕ ದರ್ಶನ ಸೇರಿ ಉಳಿದ ಎಲ್ಲಾ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ರು. ಆ ಬಳಿಕ ಮತ್ತೆ ದರ್ಶನ ಸಹಿತ ಏಳು ಜನ ಆರೋಪಿಗಳ ಜಾಮೀನು ರದ್ದಾಗಿ ಮತ್ತೆ ಜೈಲು ಸೇರುವಂತಾಯಿತು.
Bangalore [Bangalore],Bangalore,Karnataka













