Last Updated:
Darshan: ದಿಢೀರ್ ಆಗಿ ವಿಜಯಲಕ್ಷ್ಮಿ ದರ್ಶನ್ ಹಾಗೂ ರಕ್ಷಿತಾ ಪ್ರೇಮ್ ನಟ ದರ್ಶನ್ ಅವರ ಭೇಟಿಗೆ ಬಂದಿದ್ಯಾಕೆ? ಸದ್ಯ ಈ ಭೇಟಿಯ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದಲ್ಲಿ ಕನ್ನಡದ ಖ್ಯಾತ ನಟ ದರ್ಶನ್ (Darshan) ಆವರು ಆರೋಪಿಯಾಗಿ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇತ್ತೀಚೆಗೆ ವಿಜಯಲಕ್ಷ್ಮಿ (Vijayalakshmi) ಅವರು ತಮ್ಮ ಮಗನ ಜೊತೆ ಆ್ಯನಿವರ್ಸರಿ ಸಮಯದಲ್ಲಿ ಬಂದು ಭೇಟಿ ಮಾಡಿದ್ದರು. ಇದೀಗ ಅವರು ಮತ್ತೊಮ್ಮೆ ಗಂಡನನ್ನು ಭೇಟಿ ಮಾಡೋಕೆ ಬಂದಿದ್ದಾರೆ.
ಪತ್ನಿ ಮತ್ತು ಸ್ನೇಹಿತೆ ಈಗ ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟಿ ರಕ್ಷಿತಾ ಪ್ರೇಮ್ ದರ್ಶನ್ ಭೇಟಿಗೆ ಬಂದಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಹಾಗೂ ವಿಜಯಲಕ್ಷ್ಮಿ ಅವರು ಪ್ರತ್ಯೇಕವಾಗಿ ನಟ ದರ್ಶನ್ ಭೇಟಿಗೆ ಆಗಮಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷ್ಮಿ, ರಕ್ಷಿತಾ ಭೇಟಿ ನೀಡಿದ್ದು ಈಗ ಕುತೂಹಲ ಮೂಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರೋ ದರ್ಶನ್ ಅವರನ್ನು ಇಂದು ಇಬ್ಬರೂ ಭೇಟಿ ಮಾಡಲಿದ್ದು, ಈ ದಿಢೀರ್ ಭೇಟಿಗೆ ಕಾರಣ ಏನು ಎನ್ನುವುದು ಕುತೂಗಲ ಮೂಡಿಸಿದೆ.
ವರದಿ: ಚಂದ್ರು ಆನೇಕಲ್, ನ್ಯೂಸ್18 ಕನ್ನಡ ಪ್ರತಿನಿಧ
Bangalore,Karnataka














