Darshan: ಸ್ಪೆಷಲ್ ಸಾಂಗ್ ಹಾಡಿದ ದರ್ಶನ್! ‘ಸೆಲೆಬ್ರಿಟಿಸ್‌’ಗಾಗಿ ವಿಡಿಯೋ ಹಂಚಿಕೊಂಡ ವಿಜಯಲಕ್ಷ್ಮಿ | | ACTPnews

Darshan


Last Updated:

ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಳೆಯ ವಿಡಿಯೋವೊಂದು ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Darshan
Darshan

ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಳೆಯ ವಿಡಿಯೋವೊಂದು ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ದರ್ಶನ್ ತುಂಬಾನೇ ಖುಷಿಯಿಂದ ಹಾಡು ಹೇಳುತ್ತಿರುವ ಈ ಅಪರೂಪದ ಕ್ಷಣವನ್ನು ನೋಡಿದ ಫ್ಯಾನ್ಸ್ (Fans) ಅಂತೂ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.

ಅಭಿಮಾನಿಗಳಿಗಾಗಿ ವಿಶೇಷ ವಿಡಿಯೋ

ಹೌದು ಸಾಮಾನ್ಯವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಫೋಟೋಗಳು ಹಾಗೂ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೀಗಿರುವಾಗ ಇದೀಗ ಅವರು ದರ್ಶನ್ ಹಾಡು ಹೇಳುತ್ತಿರುವ ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದು, ‘ಈ ಸ್ಪೆಷಲ್ ವಿಡಿಯೋ ಅಭಿಮಾನಿಗಳಿಗಾಗಿ’ ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ದರ್ಶನ್

ದರ್ಶನ್
ಖುಷಿಯಿಂದ ಹಾಡಿದ ದರ್ಶನ್

ವಿಡಿಯೋದಲ್ಲಿ ದರ್ಶನ್ ತುಂಬಾ ಖುಷಿಯಿಂದ ಹಾಡು ಹೇಳುತ್ತಿರುವುದನ್ನು ಕಾಣಬಹುದು. ಜೊತೆಗೆ ದರ್ಶನ್ ನಗು ಅಭಿಮಾನಿಗಳ ಮನ ಗೆದ್ದಿದೆ. ಹೀಗಾಗಿ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೀಗಿರುವಾಗ ವಿಜಯಲಕ್ಷ್ಮಿ ಹಂಚಿಕೊಂಡಿರುವ ಈ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed