Darshan: ಸುಪ್ರೀಂ ಕೋರ್ಟ್​ಗೆ 3 ಅರ್ಜಿ! ಹೈಕೋರ್ಟ್ ಆದೇಶದ ವಿರುದ್ದ ದರ್ಶನ್-ವಿಜಯಲಕ್ಷ್ಮಿ ಚಾಲೆಂಜ್ | Renukaswamy case darshan vijayalakshmi plea to supreme court | | ACTPnews

ದರ್ಶನ್-ವಿಜಯಲಕ್ಷ್ಮಿ


Last Updated:

Renukaswamy Case: ಸುಪ್ರೀಂ ಕೋರ್ಟ್​ಗೆ ಮೂರು ಅರ್ಜಿ ಸಲ್ಲಿಕೆ! ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿಯಿಂದಲೂ ಅರ್ಜಿ!

ದರ್ಶನ್-ವಿಜಯಲಕ್ಷ್ಮಿ
ದರ್ಶನ್-ವಿಜಯಲಕ್ಷ್ಮಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿ ಪ್ರದೋಷ್ (Approver Pradosh) ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದೆ. ಸುಪ್ರೀಂಕೋರ್ಟ್​ಗೆ (Supreme Court) ದರ್ಶನ್ ಅವರಿಂದ 2 ಮೇಲ್ಮನವಿ ಸಲ್ಲಿಸಲಾಗಿದೆ.

ದರ್ಶನ್ ಪರವಾಗಿ ವಿಜಯಲಕ್ಷ್ಮಿ ರಿಂದಲೂ ಮೇಲ್ಮನವಿ ಸಲ್ಲಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಒಟ್ಟು 3 ಮೇಲ್ಮನವಿ ಸಲ್ಲಿಸಿದ ದರ್ಶನ್ ಸದ್ಯ ಅದರ ಆದೇಶಕ್ಕಾಗಿ ಕಾಯುತ್ತಿದ್ದಾರೆ.

ಇದೇ ವಾರ ದರ್ಶನ್ ಅರ್ಜಿಗಳ ವಿಚಾರಣೆ ಸಾಧ್ಯತೆ ಇದೆ. ಮಾಫಿ ಸಾಕ್ಷಿ ಆದೇಶಕ್ಕೂ ಮುನ್ನ ಸಹ ಆರೋಪಿಯ ವಾದ ಕೇಳಬೇಕಿಲ್ಲ ಎಂದು ಹೈಕೋರ್ಟ್ ನೀಡಿರುವ ಈ ತೀರ್ಪು ಪ್ರಶ್ನಿಸಿ ದರ್ಶನ್ ಮೇಲ್ಮನವಿ ಸಲ್ಲಿಸಿದ್ದಾರೆ.

ಮಾಫಿ ಸಾಕ್ಷಿಗೆ ಮರುಪರಿಶೀಲಿಸುವಂತೆ ಹೈಕೋರ್ಟ್ ಆದೇಶಿಸಿದ್ದು, ಈ ತೀರ್ಪನ್ನೂ ಪ್ರಶ್ನಿಸಿ ದರ್ಶನ್ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಮಾಫಿ ಸಾಕ್ಷಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಸೆ.23 ರ ಆದೇಶ ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಅರ್ಜಿ ಸಲ್ಲಿಸಿದ್ದಾರೆ.

ಈಗ ಮಾಫಿ ಸಾಕ್ಷಿಗೆ ಸಂಬಂಧಿಸಿದಂತೆ ಒಟ್ಟು 3 ಮೇಲ್ಮನವಿ ಅರ್ಜಿ ದರ್ಶನ್ ಪರವಾಗಿ ಸಲ್ಲಿಸಲಾಗಿದೆ.

ಈ ಕೇಸ್​ನಲ್ಲಿ ಆರೋಪಿಯಾಗಿದ್ದ ಪ್ರದೋಷ್ ಈಗ ಆರೋಪಿ ಅಲ್ಲ. ಸದ್ಯ ಚಾರ್ಜ್​ಶೀಟ್ ಲಿಸ್ಟ್​ನಿಂದ ಪ್ರದೋಷ್ ಹೆಸರು ಡಿಲೀಟ್ ಮಾಡಲು ಕೋರ್ಟ್ ಸೂಚಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ನಿಗದಿಯಾಗಿದ್ದಂತೆ ಸೆ. 28 ಹಾಗೂ 29ರಂದು ಅಂದರೆ ನಿನ್ನೆ ಹಾಗೂ ಇಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದೆ.

ಆದರೆ ಈ ನಡುವೆ ದರ್ಶನ್ ಲಾಯರ್ ಪ್ರದೋಷ್ ವಿರುದ್ಧ ಗರಂ ಆಗಿದ್ದು ಆ ಒಂದು ನಡೆಯನ್ನು ವಿರೋಧಿಸಿದ್ದಾರೆ. ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿ 15 ನಿಮಿಷ ಲಾಯರ್ ಜೊತೆ ಪ್ರದೋಷ್ ಮಾತನಾಡಿದ್ದು, ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದರ್ಶನ್ ಲಾಯರ್ ಆರೋಪಿಸಿದ್ದಾರೆ.

ಈ ರೀತಿಯಾಗಿ ಪ್ರದೋಷ್​ಗೆ ಅವಕಾಶ ನೀಡಬರಾರದಾಗಿತ್ತು ಎಂದು ದರ್ಶನ್ ಲಾಯರ್ ಹೇಳಿದ್ದಾರೆ. ಸದ್ಯ ಈಗ 2ನೇ ದಿನದ ಮಾಫಿ ಸಾಕ್ಷಿ ಹೇಳಿಕೆ ಪ್ರಕ್ರಿಯೆ ನಡೆಯುತ್ತಿದೆ.

ವಿಚಾರಣೆಗೂ ಮುನ್ನ ಕೆಲ ಹೊತ್ತು ವಕೀಲರ ಜೊತೆ ಮಾತಾಡಿದ್ದ ಪ್ರದೂಷ್ ನಡೆಯನ್ನು ದರ್ಶನ್ ಲಾಯರ್ ಪ್ರಶ್ನಿಸಿದ್ದಾರೆ.

ವರದಿ: ಮಾದೇಶ್ ಸಿ.ಎನ್ ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed