Darshan: ಪತಿಗಾಗಿ 3 ಕೋರ್ಟ್​ಗಳ ಮೆಟ್ಟಿಲೇರಿದ ವಿಜಯಲಕ್ಷ್ಮಿ ದರ್ಶನ್​ ಸೋತಿದ್ದು ಯಾಕೆ? ಸುಪ್ರೀಂ ಕೋರ್ಟ್​ ನ್ಯಾಯಧೀಶರ ಖಡಕ್ ರಿಯಾಕ್ಷನ್ | | ACTPnews

News18


Last Updated:

ವಿಚಾರಣೆ ಆರಂಭವಾಗ್ತಿದ್ದಂತೆ ಅರ್ಜಿದಾರರ ಪರ ಹಿರಿಯ ವಕೀಲ ನಾಗಮುತ್ತು ಅವರು ವಾದ ಮಂಡಿಸಿದ್ರು. ತಾವು ಎರಡು ಪ್ರಮುಖ ಅಂಶಗಳನ್ನು ಆಧರಿಸಿ ವಾದ ಮಂಡಿಸುವುದಾಗಿ ತಿಳಿಸಿದರು.

News18
News18

ನವದೆಹಲಿ (ಅ.08): ರೇಣುಕಾಸ್ವಾಮಿ ಕೇಸ್​ನಲ್ಲಿ ಕೊಲೆ ಆರೋಪಿ ದರ್ಶನ್​​ಗೆ ಸುಪ್ರೀಂಕೋರ್ಟ್​ ಕೂಡ ಬಿಗ್ ಶಾಕ್​ ಕೊಟ್ಟಿದೆ. ಪತಿ ದರ್ಶನ್ ಅವರನ್ನ ಜೈಲಿಂದ ಹೊರಗೆ ತರಲು ವಿಜಯಲಕ್ಷ್ಮಿ ಕಾನೂನು ಹೋರಾಟ ಮಾಡ್ತಿದ್ದು, ಹಲವು ಬಾರಿ ಕೋರ್ಟ್​ಗಳ ಮೆಟ್ಟಿಲೇರಿದ್ರೂ ಜಯ ಸಿಗ್ತಿಲ್ಲ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಮಾಫಿ ಸಾಕ್ಷಿಗೆ ತಡೆ ಕುರಿತ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಸುಪ್ರೀಂನಲ್ಲೂ ಮತ್ತೆ ಸೋಲಾಗಿದ್ದು, ದರ್ಶನ್​ ಪಾಲಿಗಿನ ಎಲ್ಲಾ ಬಾಗಿಲು ಬಂದ್ ಆಗಿದೆ. ಸುಪ್ರೀಂಕೋರ್ಟ್ ಕೊಟ್ಟ ಈ ಖಡಕ್ ಆದೇಶದಲ್ಲಿ ಏನಿದೆ? ವಿಜಯಲಕ್ಷ್ಮಿ ದರ್ಶನ್​ಗೆ ಹಿನ್ನೆಡೆ ಆಗ್ತಿರೋದು ಯಾಕೆ?

ಹಿರಿಯ ವಕೀಲ ನಾಗಮುತ್ತು ವಾದ

ವಿಚಾರಣೆ ಆರಂಭವಾಗ್ತಿದ್ದಂತೆ ಅರ್ಜಿದಾರರ ಪರ ಹಿರಿಯ ವಕೀಲ ನಾಗಮುತ್ತು ಅವರು ವಾದ ಮಂಡಿಸಿದ್ರು. ತಾವು ಎರಡು ಪ್ರಮುಖ ಅಂಶಗಳನ್ನು ಆಧರಿಸಿ ವಾದ ಮಂಡಿಸುವುದಾಗಿ ತಿಳಿಸಿದರು. ಎರಡು ಕೋರ್ಟ್ ತೀರ್ಪುಗಳ ಬಗ್ಗೆಯೂ ಉಲ್ಲೇಖಿಸಿದ್ರು. ಈ ವೇಳೆ ಪೀಠದಲ್ಲಿದ್ದ ನ್ಯಾಯಾಧೀಶರು, “ನಾವು ಪ್ರಕರಣದ ಸಂಪೂರ್ಣ ಕಡತಗಳನ್ನು ಓದಿದ್ದೇವೆ” ಎಂದು ಹೇಳಿದ್ದಲ್ಲದೆ, ನೀವು ಮಾಫಿ ಸಾಕ್ಷಿಯನ್ನು ಕ್ರಾಸ್ ಎಕ್ಸಾಮಿನೇಷನ್  ಮಾಡುತ್ತೀರಲ್ಲವೇ? ಎಂದು ಪ್ರಶ್ನಿಸಿದರು.

ವಿಜಯಲಕ್ಷ್ಮಿಗೆ ಭಾರೀ ಹಿನ್ನಡೆ

ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್‌ ವಿಜಯಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಇದ್ರಿಂದಾಗಿ ಕೊಲೆ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿಗೆ ಈ ಬಾರಿಯೂ ಹಿನ್ನಡೆಯಾದಂತಾಗಿದೆ.

ಮಾಫಿ ಸಾಕ್ಷಿ ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಆರೋಪಿ ಪ್ರದೋಷ್​ ಮಾಫಿ ಸಾಕ್ಷಿಯಾಗಿ ಕರ್ನಾಟಕ ಹೈಕೋರ್ಟ್ ಪರಿಗಣಿಸಿತ್ತು.  ಇದೀಗ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್​ ಕೂಡ ಎತ್ತಿ ಹಿಡಿದಿದೆ.

ಸುಪ್ರೀಂ ಕೋರ್ಟ್ ನ್ಯಾಯಧೀಶರ ಖಡಕ್ ಅಭಿಪ್ರಾಯ

ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಬೇಕಾದ್ರೆ ಕ್ರಾಸ್ ಎಕ್ಸಾಮಿನ್ ಮಾಡಿ, ಅದು ಬಿಟ್ಟು ಮಾಫಿ ಅರ್ಜಿ ವಜಾ ಮಾಡಿ ಅನ್ನೋ ಅಧಿಕಾರ ಇಲ್ಲ ಎಂದು ಖಡಕ್ ಅಭಿಪ್ರಾಯ ತಿಳಿಸಿದೆ.

3 ಕೋರ್ಟ್​ನಲ್ಲೂ ಸೋಲಲು ಇದೇ ಕಾರಣವಾಯ್ತಾ?

ಮಾಫಿ ಸಾಕ್ಷಿಗೆ ತಡೆಕೋರಿ ಸೆಷನ್ಸ್ ಕೋರ್ಟ್, ಹೈಕೋರ್ಟ್, ಸುಪ್ರೀಂ ಕೋರ್ಟ್ ಅಂತ 3 ಕೋರ್ಟ್​ಗಳಲ್ಲಿ ಅರ್ಜಿ ಹಾಕಿದ್ರೂ ದರ್ಶನ್​ಗೆ ಹಿನ್ನೆಡೆ ಆಗಿದೆ. ಕಾರಣ ಮಾಫಿ ಸಾಕ್ಷಿಯಾದವರು ಸಾಕ್ಷಿ ನುಡಿಯುವ ಅಧಿಕಾರವನ್ನ ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಅನ್ನೋದು. ಮಾಫಿ ಸಾಕ್ಷಿ ಸಾಕ್ಷ್ಯ ನುಡಿದ ಬಳಿಕ ಕ್ರಾಸ್ ಎಕ್ಸಾಮಿನೇಷನ್​ ವೇಳೆ ಸತ್ಯ ಬಾಯ್ಬಿಡಿಸುವ ಅವಕಾಶ ಇರುತ್ತೆ. ಇದ್ರಿಂದಲೇ ದರ್ಶನ್ ಹಾಗೂ ವಿಜಯಲಕ್ಷ್ಮಿ ಹಿನ್ನೆಡೆ ಆಗಿದೆ ಎನ್ನಲಾಗ್ತಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports