Last Updated:
ಡಾರ್ಲಿಂಗ್ ಕೃಷ್ಣ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ದಿನದ ಹಿನ್ನೆಲೆಯಲ್ಲಿ ಪತ್ನಿ ಮಿಲನ ನಾಗರಾಜ್ ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಮಗಳು ಪರಿ ಕೂಡ ಇದ್ದಾಳೆ. ಮುಂದೇನಾಯಿತು ಅನ್ನೋ ವಿವರ ಇಲ್ಲಿದೆ ಓದಿ.
ನಾಯಕ-ನಿರ್ದೇಶಕ-ನಿರ್ಮಾಪಕ ಡಾರ್ಲಿಂಗ್ ಕೃಷ್ಣ (Darling Krishna) ಜನ್ಮ ದಿನದ (Birthday) ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಪತ್ನಿ ಮಿಲನ ನಾಗರಾಜ್ ಈಗೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದು ಅಷ್ಟೇ ಸ್ಪೆಷಲ್ ಆಗಿದೆ. ಈ ವಿಡಿಯೋದಲ್ಲಿ ಮಗಳು ಪರಿ ಇದ್ದಾಳೆ. ಡಾರ್ಲಿಂಗ್ ಕೃಷ್ಣ, (Darling Krishna) ಮಿಲನ ನಾಗರಾಜ್ ಸಹ ಇದ್ದಾರೆ. ಇಲ್ಲೊಂದು ವಿಶೇಷ ಕ್ಷಣವೂ ಇದೆ. ಇದರ ಬಗ್ಗೇನೆ ಮಿಲನ ನಾಗರಾಜ್ (Milana Nagaraj) ಬರೆದುಕೊಂಡಿದ್ದಾರೆ. ಇದು ಅಪ್ಪ ಮತ್ತು ಮಗಳ ನಡುವಿನ ಬಾಂಧವ್ಯದ ಚಿತ್ರಣವೇ ಆಗಿದೆ. ಇದರ ವಿವರ ಇಲ್ಲಿದೆ ಓದಿ.
ಅಪ್ಪನ ಅನುಕರಿಸುತ್ತಾಳೆ
(ಚಿತ್ರ ಕೃಪೆ: ಮಿಲನ ನಾಗರಾಜ್ ಇನ್‌ಸ್ಟಾಗ್ರಾಮ್)
ಈ ವಿಚಾರದಲ್ಲಿ ಮಿಲನ ಕೂಡ ಹಿಂದೆ ಬಿದ್ದಿಲ್ಲ. ಮಗಳನ್ನ ಅಷ್ಟೆ ಪ್ರೀತಿ ಮಾಡ್ತಾರೆ. ಮಿಲನ ಮತ್ತು ಡಾರ್ಲಿಂಗ್ ಕೃಷ್ಣ ಲೈಫ್ ಅಲ್ಲಿ ಪರಿ ಬಂದ್ಮೇಲೆ ಹೊಸದೊಂದು ಉತ್ಸಾಹ ಮತ್ತು ಉಲ್ಲಾಸ ಬಂದಿದೆ.
ಡಾರ್ಲಿಂಗ್ ಕೃಷ್ಣ ಪತ್ನಿ ಮಿಲನ ಅವರಿಗೆ ಪ್ರೀತಿಯಿಂದ ಒಂದು ಕಿಸ್ ಕೊಡ್ತಾರೆ. ಇದನ್ನ ನೋಡಿದ ಪರಿ, ಒಂದು ಅರೆ ಕ್ಷಣ ಸುಮ್ನೆ ಇರ್ತಾಳೆ. ಆ ಮೇಲೆ ಅಮ್ಮನಿಗೆ ಅಪ್ಪನಂತೆ ಮುತ್ತುಕೊಡ್ತಾಳೆ.
ಈ ಒಂದು ಕ್ಷಣದ ವಿಡಿಯೋವನ್ನ ಸ್ವತಃ ಮಿಲನ ನಾಗರಾಜ್ ಹಂಚಿಕೊಂಡಿದ್ದಾರೆ. ಇದರೊಟ್ಟಿಗೆ ಒಂದು ಲೈನ್ ಕೂಡ ಬರೆದಿದ್ದಾರೆ. ಅದು ಈ ರೀತಿ ಇದೆ. “Happy birthday to the center of our world! darling krishnaa Pari Copying her favorite person already”
ಮಗಳು ಪರಿ ಬಗ್ಗೆ ಮಿಲನ ಈ ಮಾತು ಬರೆದಿದ್ದಾರೆ. ಇಂಗ್ಲಿಷ್ ಅಲ್ಲಿ ಬರೆದ ಮೇಲಿನ ಸಾಲುಗಳ ಕನ್ನಡದ ಅರ್ಥ ಹೀಗಿದೆ. ಮಗಳು ಪರಿ ಅಪ್ಪನನ್ನ ಅನುಕರಿಸುತ್ತಿದ್ದಾಳೆ. ಅಪ್ಪ ಅವಳ ಫೇವರಿಟ್ ಆಗಿದ್ದಾರೆ.
ಅಂದಾಗೆ ನಮ್ಮ ಪ್ರಪಂಚದ ಕೇಂದ್ರ ಬಿಂದು ಡಾರ್ಲಿಂಗ್ ಕೃಷ್ಣ ಅವರಿಗೆ ಜನ್ಮ ದಿನದ ಶುಭಾಶಯಗಳು ಅಂತಲೂ ಹೇಳಿದ್ದಾರೆ. ಇನ್ನು ಡಾರ್ಲಿಂಗ್ ಕೃಷ್ಣ ಅವರು ಮಗಳ ಈ ಒಂದು ಪ್ರೀತಿಯ ಅನುಕರಣೆ ನೋಡಿ ತುಂಬಾನೆ ಖುಷಿಪಟ್ಟಿದ್ದಾರೆ.
ಅಪ್ಪನ ಮಗಳು..
(ಚಿತ್ರ ಕೃಪೆ: ಮಿಲನ ನಾಗರಾಜ್ ಇನ್‌ಸ್ಟಾಗ್ರಾಮ್)
ಡಾರ್ಲಿಂಗ್ ಕೃಷ್ಣ ಅಭಿನಯದ ಫಾದರ್ ಚಿತ್ರ ರಿಲೀಸ್‌ಗೆ ರೆಡಿ ಆಗುತ್ತಿದೆ. ಚಿತ್ರದ ನಿರ್ಮಾಪಕ ಆರ್.ಚಂದ್ರು ತಮ್ಮ ಈ ಚಿತ್ರದ ಪೋಸ್ಟರ್ ಹಂಚಿಕೊಂಡು ಕೃಷ್ಣ ಅವರಿಗೆ ವಿಶ್ ಮಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರ ಈ ಹಿಂದಿನ ಚಿತ್ರಗಳು ಅಂತ ಬಂದ್ರೆ, ಬ್ರ್ಯಾಟ್ ಸಿನಿಮಾ ಗಮನ ಸೆಳೆಯಿತು. ಶುಗರ್ ಫ್ಯಾಕ್ಟರಿ ರಿಲೀಸ್ ಆಯಿತು. ಕೌಶಲ್ಯ ಸುಪ್ರಜಾ ರಾಮ ಚೆನ್ನಾಗಿ ಹೋಯಿತು.
ಲವ್ ಮಾಕ್ಟೇಲ್-3 ಚಿತ್ರ ಹಿಟ್ ಆಗಿದೆ. ಬಾಕ್ಸ್ ಆಫೀಸ್ ಅಲ್ಲೂ ಸೌಂಡ್ ಮಾಡಿದೆ. ಈ ಚಿತ್ರದ ಮೂಲಕ ಲವ್ ಮಾಕ್ಟೇಲ್ ಸರಣಿ ಕಂಪ್ಲೀಟ್ ಆಯಿತು ಅಂತಲೂ ಕೃಷ್ಣ ಪ್ರೆಸ್ ಮೀಟ್ ಅಲ್ಲಿ ಹೇಳಿಕೊಂಡಿದ್ದಾರೆ.
ಹಾಗೆ ಕೃಷ್ಣ ಈ ವರ್ಷ 41 ನೇ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕೃಷ್ಣ ಅವರ ಜನ್ಮ ದಿನಕ್ಕೆ ಆತ್ಮೀಯರು ಮತ್ತು ಸಿನಿಮಾ ಸ್ನೇಹಿತರು, ಅಭಿಮಾನಿಗಳು ಮನದುಂಬಿ ಶುಭಾಶಯ ಕೋರಿದ್ದಾರೆ.
Bangalore,Karnataka
Jun 12, 2026 10:11 PM IST













