Darling Krishna: ಲವ್ ಮಾಕ್ಟೇಲ್ ನೋಡಿ ಕಣ್ಣೀರಿಟ್ಟಿದ್ದ ನಿರ್ಮಾಪಕರು; ತಮ್ಮ ಹೊಸ ಚಿತ್ರಕ್ಕೆ ಕೃಷ್ಣನನ್ನ ಒಪ್ಪಿಸಿದ್ದು ಹೇಗೆ? | | ACTPnews

ಡಾರ್ಲಿಂಗ್ ಕೃಷ್ಣ


Last Updated:

ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೇಲ್-3 ಚಿತ್ರ ನೋಡಿಯೇ ನಿರ್ಮಾಪಕರು ಕಣ್ಣೀರು ಹಾಕಿದ್ದಾರೆ. ತಮ್ಮ ಚಿತ್ರಕ್ಕೆ ಇವರೇ ನಾಯಕರು ಅಂತಲೇ ಫಿಕ್ಸ್ ಆಗಿದ್ದಾರೆ. ಡೈರೆಕ್ಟರ್ ಪಿ.ಸಿ.ಶೇಖರ್ ಕತೆ ಹೇಳುವಾಗಲೂ ಕೃಷ್ಣ ಅವರನ್ನೆ ಕಲ್ಪಿಸಿಕೊಂಡಿದ್ದಾರೆ. ಕೊನೆಗೆ ಏನೆಲ್ಲ ಆಯಿತು ಅನ್ನೋದ ಇಲ್ಲಿದೆ ಓದಿ.

ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ

ಡಾರ್ಲಿಂಗ್ ಕೃಷ್ಣ (Darling Krishna) ಕಳೆದ ಎರಡೂವರೆ ವರ್ಷದಿಂದ ಬೇರೆಯವರ ಚಿತ್ರದಲ್ಲಿ ಕೆಲಸ ಮಾಡಿಯೇ ಇಲ್ಲ. ಪ್ರತಿ ವಾರಕ್ಕೆ ಎರಡ್ಮೂರು ಚಿತ್ರಗಳ ಕತೆಗಳನ್ನ (Movie Stories) ಕೇಳ್ತಾನೇ ಇರ್ತಾರೆ. ಆದರೆ, ಯಾವುದೂ ಕತೆಯನ್ನ ಒಪ್ಪಿರಲಿಲ್ಲ. ಡೈರೆಕ್ಟರ್ ಪಿ.ಸಿ.ಶೇಖರ್ (Director P C Shekhar) ಹೇಳಿದ ಕತೆ ಇವರಿಗೆ ತುಂಬಾನೆ ಇಷ್ಟ ಆಯಿತು. ಅದಕ್ಕೇನೆ ಈ ಚಿತ್ರವನ್ನ ಒಪ್ಪಿಕೊಂಡಿದ್ದಾರೆ. ಇನ್ನು ಸಾಕಷ್ಟು ವಿಷಯವನ್ನ ಹೇಳಿಕೊಂಡಿದ್ದಾರೆ. ಈ ಸಿನಿಮಾದ (Movie) ಇನ್ನಷ್ಟು ವಿವರ ಇಲ್ಲಿದೆ ಓದಿ.

ಮೂರು ನಾಲ್ಕು ಕತೆ ಕೇಳ್ತಾರೆ

ಡಾರ್ಲಿಂಗ್ ಕೃಷ್ಣ ಪ್ರತಿ ವಾರ ಮೂರು ಇಲ್ಲವೆ ನಾಲ್ಕು ಕತೆಗಳನ್ನ ಕೇಳ್ತಾನೇ ಇದ್ದಾರೆ. ಆದರೆ, ಒಂದೇ ಒಂದು ಕತೆನೂ ಫೈನಲ್ ಆಗಿಯೇ ಇರಲಿಲ್ಲ. ಆದರೆ, ಇವರು ತಮ್ಮ ಸಂಸ್ಥೆಯಲ್ಲಿಯೇ ಲವ್ ಮಾಕ್ಟೇಲ್ ಸರಣಿ ಚಿತ್ರವನ್ನು ಮಾಡಿಕೊಂಡೇ ಬಂದಿದ್ದರು.

ಇದರ ನಡುವೆ ಡೈರೆಕ್ಟರ್ ಪಿ.ಸಿ.ಶೇಖರ್ ಅವರು ಒಂದು ಕತೆ ತೆಗೆದುಕೊಂಡ ಬಂದರು. ಅದನ್ನ ಡಾರ್ಲಿಗ್ ಕೃಷ್ಣ ಅವರಿಗೆ ಹೇಳಿದರು. ಈ ಸ್ಟೋರಿಯಲ್ಲಿ ಹಾಸ್ಯ ಇದೆ, ಥ್ರಿಲ್ಲಿಂಗ್ ಎಲಿಮೆಂಟ್ಸ್ ಸಹ ಇದೆ. ಹಾಗೆ ಇದು ಡಾರ್ಕ್ ಕಾಮಿಡಿ ಇರೋ ಕತೆನೂ ಆಗಿದೆ. ಹೊಸ ರೀತಿಯ ಈ ಕತೆ ಕೇಳಿದ ಕೃಷ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಹೊಸತನದ ಕತೆ

ಡಾರ್ಲಿಂಗ್ ಕೃಷ್ಣ ಅವರು ಈ ಕತೆಯನ್ನ ಒಪ್ಪಲು ಕಾರಣವೂ ಇದೆ. ಇದು ಹೊಸ ರೀತಿ ಜಾನರ್‌ನ ಚಿತ್ರವೇ ಆಗಿದೆ. ಇನ್ನೂ ಒಂದು ವಿಶೇಷ ಅಂದರೆ ಇದು ಡೈರೆಕ್ಟರ್ ಪಿ.ಸಿ.ಶೇಖರ್ ಅವರಿಗೂ ಹೊಸ ರೀತಿಯ ಜಾನರ್ ಆಗಿದೆ. ಅದಕ್ಕೇನೆ ಇಬ್ಬರು ಮತ್ತೆ ಹೊಸ ಜರ್ನಿ ಆರಂಭಿಸುತ್ತಿದ್ದಾರೆ.

ಹಾಗೆ ತಮ್ಮ ಸಂಸ್ಥೆಯ ಚಿತ್ರಗಳನ್ನ ಬಿಟ್ಟರೆ, ಕಳೆದ ಎರಡೂವರೆ ವರ್ಷದಿಂದ ಡಾರ್ಲಿಂಗ್ ಕೃಷ್ಣ ಬೇರೆ ನಿರ್ಮಾಣ ಸಂಸ್ಥೆಯಲ್ಲಿ ಒಂದೇ ಒಂದು ಚಿತ್ರ ಮಾಡಿಲ್ಲ. ಆದರೆ, ಪಿ.ಸಿ.ಶೇಖರ್ ಅವರ ಈ ಚಿತ್ರವನ್ನ ಮಾಡುತ್ತಿದ್ದಾರೆ. ಪಿ.ಸಿ.ಶೇಖರ್ ಅವರ ಜೊತೆಗೆ ಈ ಹಿಂದೆ ಲವ್ ಬರ್ಡ್ಸ್ ಚಿತ್ರವನ್ನ ಇವರು ಮಾಡಿದ್ದಾರೆ. ಈ ಚಿತ್ರ ಆದ್ಮೇಲೆ ಈಗಲೇ ಈ ಚಿತ್ರವನ್ನೆ ಮಾಡುತ್ತಿದ್ದಾರೆ.

ಲವ್ ಮಾಕ್ಟೇಲ್ ನೋಡಿ ಕಣ್ಣೀರು

ಡಾರ್ಲಿಂಗ್ ಕೃಷ್ಣ ಅವರ ಈ ಚಿತ್ರವನ್ನ ಪ್ರಕಾಶ್ ಬೂದೂರು ನಿರ್ಮಿಸುತ್ತಿದ್ದಾರೆ. ಡೈರೆಕ್ಟರ್ ಪಿ.ಸಿ.ಶೇಖರ್ ಬಂದು ಈ ಕತೆ ಹೇಳಿದಾಗ ಇವರು ಕಲ್ಪಿಸಿಕೊಂಡಿರೋದು ಬೇರೆ ಯಾರನ್ನೋ ಅಲ್ಲ. ಬದಲಾಗಿ ಡಾರ್ಲಿಂಗ್ ಕೃಷ್ಣ ಅವರನ್ನೆ ಕಣ್ಮುಂದೆ ತಂದುಕೊಂಡಿದ್ದಾರೆ.

ಆದರೆ ಇದಾದ್ಮೇಲೆ ಕೃಷ್ಣ ಅವರ ಲವ್ ಮಾಕ್ಟೇಲ್-3 ಚಿತ್ರವನ್ನ ಇವರು ನೋಡಿದ್ದಾರೆ. ನೋಡಿದ್ಮೇಲೆ ಇವರು ಎಮೋಷನಲಿ ಕನೆಕ್ಟ್ ಕೂಡ ಆಗಿದ್ದಾರೆ. ಕಣ್ಣೀರು ಕೂಡ ಹಾಕಿದ್ದಾರೆ. ಆಗಲೇ ಇವರಿಗೆ ಅನಿಸಿದೆ. ನಮ್ಮ ಚಿತ್ರಕ್ಕೆ ಇವರೇ ಸೂಕ್ತ ಅಂತಲೇ ಫೀಲ್ ಆಗಿದೆ. ಕೊನೆಗೆ ತಮ್ಮ ನಿರ್ಮಾಣದ ಎರಡನೇ ಚಿತ್ರಕ್ಕೆ ಇವರನ್ನೆ ನಾಯಕರನ್ನಾಗಿಯೇ ಆಯ್ಕೆ ಮಾಡಿಕೊಂಡಿದ್ದಾರೆ.

ಮಹಾನ್ ಮೊದಲ ಸಿನಿಮಾ

ಮಹಾನ್ ಚಿತ್ರವನ್ನು ಡೈರೆಕ್ಟರ್ ಪಿ.ಸಿ.ಶೇಖರ್ ಅವರೇ ಡೈರೆಕ್ಷನ್ ಮಾಡಿದ್ದಾರೆ. ಇದು ಇನ್ನು ರಿಲೀಸ್ ಆಗಬೇಕಿದೆ. ಅಷ್ಟರಲ್ಲಿಯೇ ಈ ಹೊಸ ಚಿತ್ರ ಅನೌನ್ಸ್ ಮಾಡಿದ್ದಾರೆ.

ಈ ಚಿತ್ರಕ್ಕೆ ಇನ್ನು ಹೆಸರಿಡಬೇಕಿದೆ. ಹಾಗೆ ಮಹಾನ್ ಚಿತ್ರದ ಕೆಲಸವು ನಡೆಯುತ್ತಿದೆ. ಈ ಚಿತ್ರದಲ್ಲಿ ಶಿವಣ್ಣ ಲಾಯರ್ ಪಾತ್ರ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಇಲ್ಲಿ ರೈತನ ಪಾತ್ರ ಮಾಡಿದ್ದಾರೆ. ಇವರ ಈ ಚಿತ್ರದ ನಿರ್ಮಾಪಕ ಪ್ರಕಾಶ್ ಬೂದೂರು ಇದೀಗ ಡಾರ್ಲಿಂಗ್ ಕೃಷ್ಣ ಅವರ ವಿಭಿನ್ನ ಜಾನರ್‌ನ ಚಿತ್ರ ಮಾಡುತ್ತಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports