Last Updated:
ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆ. ಆಲಮಟ್ಟಿ, ಹಿಡಕಲ್, ನಾರಾಯಣಪುರ, ಹಾರಂಗಿ, ಹೇಮಾವತಿ, ಕಬಿನಿ, ಕೆ.ಆರ್.ಸಾಗರ, ತುಂಗಭದ್ರಾ, ಭದ್ರಾ, ಭೀಮಾ ಲಿಫ್ಟ್ ಡ್ಯಾಂಗಳು ಭರ್ತಿ.
ಬೆಂಗಳೂರು: ರಾಜ್ಯದಲ್ಲಿ ಕೆಲವೆಡೆ ಮಳೆಯ (Rain) ಅಬ್ಬರ ಜೋರಾಗಿರುವ ಬೆನ್ನಲ್ಲೇ, ನಾಡಿನ ಜೀವನಾಡಿಗಳಾಗಿರುವ ಪ್ರಮುಖ ಅಣೆಕಟ್ಟುಗಳಲ್ಲಿ ( Dams) ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕೆಲವು ಜಲಾಶಯಗಳು ಭರ್ತಿಯಾಗಿ ಕೋಡಿ ಬೀಳುವ ಹಂತ ತಲುಪಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಒಳಹರಿವಿನ ಪ್ರಮಾಣ ನೋಡುಗರನ್ನು ದಂಗಾಗಿಸಿದೆ. ಜಲಾಶಯಗಳ ( Reservoirs) ಇಂದಿನ ನೀರಿನ ಮಟ್ಟ (Water Level) ನೋಡೋಣ ಬನ್ನಿ.














