Last Updated:
ಡಾಲಿ ಧನಂಜಯ್ ಮಗನ ಫೋಟೋ ಹಂಚಿಕೊಂಡಿದ್ದಾರೆ. ಪ್ರತಿ ಭರವಸೆನೂ ಪ್ರೀತಿಯಿಂದಲೇ ಆರಂಭಗೊಳ್ಳುತ್ತದೆ ಅಂತ ಬರೆದಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪ್ರತಿಯೊಂದು ಭರವಸೆನೂ ಪ್ರೀತಿಯಿಂದಲೇ ಆರಂಭವಾಗುತ್ತಿದೆ. Every Promise begins with love ಹೀಗೆ ಬರೆದುಕೊಂಡ ಡಾಲಿ ಧನಂಜಯ್ (Daali Dhananjaya) ಒಂದು ಇಂಟ್ರಸ್ಟಿಂಗ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಎರಡು ತಿಂಗಳ ಮಗ ಇದ್ದಾನೆ. ಈ ಮೂಲಕ ಡಾಲಿ ಧನಂಜಯ್ (Daali Dhananjaya) ತಮ್ಮ ಮಗನ ಫೋಟೋವನ್ನ ಫಸ್ಟ್ ಟೈಮ್ ಶೇರ್ ಮಾಡಿಕೊಂಡಿದ್ದಾರೆ. ಆದರೆ, ಇಲ್ಲಿ ಮಗುವಿನ (Son) ಮುಖ ಕಾಣೋದಿಲ್ಲ. ಆದರೂ ಇದು ಅಷ್ಟೆ ಬ್ಯೂಟಿಫುಲ್ ಅನಿಸುತ್ತದೆ. ಇದರ ಇತರ ವಿವರ ಇಲ್ಲಿದೆ ಓದಿ.
ಪ್ರತಿಯೊಂದು ಹೊಸ ಭರವಸೆನೂ ಪ್ರೀತಿಯಿಂದಲೇ ಆರಂಭಗೊಳ್ಳುತ್ತಿದೆ. ಇದನ್ನ ಇಂಗ್ಲೀಷ್ ಅಲ್ಲಿ ಈಗಾಗಲೇ ಹೇಳಿದಂತೆ Every Promise begins with love ಅನ್ನೋದೆ ಆಗಿದೆ.
ಪ್ರತಿ ಭರವಸೆನೂ ಪ್ರೀತಿಯಿಂದಲೇ ಆರಂಭ
(ಚಿತ್ರ ಕೃಪೆ: ಡಾಲಿ ಧನಂಜಯ್ ಇನ್ಸ್ಟಾಗ್ರಾಮ್)
ಜುಲೈ-10 ರಂದು ಮದರ್ ಪ್ರಾಮಿಸ್ ಚಿತ್ರ ಬರ್ತಿದೆ. ಇದರಲ್ಲಿ ಡಾಲಿ ಧನಂಜಯ್ ನಾಯಕರಾಗಿದ್ದಾರೆ. ಇವರ ಗೆಳೆಯ ಪೂರ್ಣ ಮೈಸೂರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಈ ಮದರ್ ಪ್ರಾಮಿಸ್ಗೂ ಡಾಲಿ ಹಂಚಿಕೊಂಡ ಮಗನ ಜೊತೆಗಿನ ಫೋಟೋ ಪ್ರಾಮಿಸ್ ಲೈನ್ಗೂ ಏನು ಸಂಬಂಧ ಇಲ್ಲ ಅನಿಸುತ್ತದೆ. ಆದರೆ, ಡಾಲಿ ಈ ಒಂದು ಫೋಟೋದಲ್ಲಿ ಮದರ್ ಪ್ರಾಮಿಸ್ ಟೈಟಲ್ ಇರೋ ಟೀ-ಶರ್ಟ್ ಹಾಕಿದ್ದಾರೆ ನೋಡಿ.
ರೆಡ್ ಹಾರ್ಟ್ ಇಮೋಜಿಗಳು ಸಾಲು ಸಾಲು ಬಂದಿವೆ. ಮಗನ ಜೊತೆಗಿನ ಡಾಲಿ ಫೋಟೋ ನೋಡಿದವರು ಪ್ರೀತಿಯಿಂದಲೇ ರೆಡ್ ಹಾರ್ಟ್ ಇಮೋಜಿಗಳನ್ನೆ ಹೆಚ್ಚಾಗಿ ಕಾಮೆಂಟ್ ಬಾಕ್ಸ್ ಅಲ್ಲಿ ಹಾಕಿದ್ದಾರೆ.
ಪ್ರೀತಿಯಿಂದಲೇ ಆರಂಭ
(ಚಿತ್ರ ಕೃಪೆ: ಡಾಲಿ ಧನಂಜಯ್ ಇನ್ಸ್ಟಾಗ್ರಾಮ್)
ಇದರ ಹೊರತಾಗಿ ಬೇರೆ ವಿಚಾರ ಅಂತ ಬಂದ್ರೆ, ಡಾಲಿ ಧನಂಜಯ್ ಅವರ ಮಗ ಮೇ-2,2026 ರಂದು ಹುಟ್ಟಿದ್ದಾನೆ. ಈ ಲೆಕ್ಕದಂತೆ ಮಗ ಹುಟ್ಟಿ ಎರಡು ತಿಂಗಳು ಮಾತ್ರ ಆಗಿದೆ.
ಮಗ ಹುಟ್ಟಿದ್ಮೇಲೆ ಮಗನ ಪುಟ್ಟ ಕೈ ಇರೋ ಒಂದು ಫೋಟೋವನ್ನ ಡಾಲಿ ಧನಂಜಯ್ ಹಂಚಿಕೊಂಡಿದ್ದರು. ಅದಾದ್ಮೇಲೆ ಈಗಲೇ ಮಗನ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ಆದರೆ, ಮಗನ ಮುಖ ಮಾತ್ರ ರಿವೀಲ್ ಆಗಿಲ್ಲ. ತೆಗೆದಿರೋ ಫೋಟೋ ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ನೋಡಿದಾಕ್ಷಣ ಗಮನ ಸೆಳೆಯುತ್ತಿದೆ.
ಮದರ್ ಪ್ರಾಮಿಸ್ ಚಿತ್ರದ ರಿಲೀಸ್ ಸನಿಹಕ್ಕೆ ಬಂದಿದೆ. ಈ ವಾರವೇ ಈ ಚಿತ್ರ ತೆರೆ ಕಾಣುತ್ತಿದೆ. ಈ ಚಿತ್ರದ ಪ್ರಚಾರದ ಓಡಾಟದಲ್ಲೂ ಡಾಲಿ ಧನಂಜಯ್ ಇದ್ದಾರೆ.
ಆದರೂ ಮಗನಿಗೆ ಟೈಮ್ ಕೊಟ್ಟಿದ್ದಾರೆ. ಸ್ವಲ್ಪ ಹೊತ್ತು ಆಟವಾಡಿದ್ದಾರೆ. ಮುದ್ದಿಸಿದ್ದಾರೆ, ಪ್ರೀತಿಸಿದ್ದಾರೆ. ಆ ಕ್ಷಣ ತೆಗೆದ ಫೋಟೋವನ್ನ ಡಾಲಿ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಈಗ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 06, 2026 10:23 AM IST













