Last Updated:
ವ್ಯಕ್ತಿಯೊಬ್ಬ ಹೆಂಡ್ತಿ ವಾಪಸ್ ಬರಲಿ ಎಂದು ಸ್ನೇಹಿತನನ್ನೇ ನರಬಲಿ ಕೊಟ್ಟಿರುವ ಘಟನೆ ನಡೆದಿದ್ದು, ಬೆಚ್ಚಿಬೀಳಿಸುವಂತೆ ಮಾಡಿದೆ.
ಜಗತ್ತು AI ಯುಗದಲ್ಲಿದ್ದರೂ ಮೂಢನಂಬಿಕೆ ಅನ್ನೋದು ಈಗಲೂ ತಾಂಡವವಾಡುತ್ತಿದೆ. ಸಾಮಾನ್ಯವಾಗಿ ಭೂತ, ಪ್ರೇತ, ಭಾನುಮತಿ, ನರಬಲಿ, ಮಾಟ-ಮಂತ್ರ ಹಳ್ಳಿಗಾಡುಗಳಲ್ಲಿ ಇಂದಿಗೂ ಸಹ ಕಂಡುಬರುತ್ತವೆ. ಅದರಲ್ಲೂ ಈ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಇಂಥವುಗಳು ನಡೆಯುವುದು ಜಾಸ್ತಿ. ಆದರೆ, ಒಡಿಶಾದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಹೆಂಡ್ತಿ ವಾಪಸ್ ಬರಲಿ ಎಂದು ಸ್ನೇಹಿತನನ್ನೇ ನರಬಲಿ ಕೊಟ್ಟಿರುವ ಘಟನೆ ನಡೆದಿದ್ದು, ಬೆಚ್ಚಿಬೀಳಿಸುವಂತೆ ಮಾಡಿದೆ.














