Last Updated:
ಗಾಯಕ ಹೊರಬರುವುದನ್ನೇ ಹೊಂಚು ಹಾಕಿ ಕಾಯುತ್ತಿದ್ದ ಹಂತಕರು, ಗುಂಡಿನ ಸುರಿಮಳೆಗೈದಿದ್ದಾರೆ
ಉತ್ತರ ಪ್ರದೇಶ: ಹರಿಯಾಣ್ವಿ ಗಾಯಕ (Singer) ಮತ್ತು ಯೂಟ್ಯೂಬರ್ ಅಂಕಿತ್ ಬಾಲಿಯನ್ (Ankit Baliyan) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಉತ್ತರ ಪ್ರದೇಶದ (Uttar Pradesh) ಶಾಮ್ಲಿಯ ಮೊಹಲ್ಲಾ ನಾಲಾ ಪಟರಿಯಲ್ಲಿ ಗಾಯಕ ಅಂಕಿತ್ ಬಾಲಿಯಾನ್ ಅವರ ಮೇಲೆ 4 ದುಷ್ಕರ್ಮಿಗಳು ಗುಂಡಿನ ಸುರಿಮಳೆಗೈದಿದ್ದಾರೆ. ಸುಮಾರು 14ಕ್ಕೂ ಹೆಚ್ಚು ಬಾರಿ ಗುಂಡುಗಳನ್ನು ಹಾರಿಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಈ ಗುಂಡಿನ ದಾಳಿಯಿಂದ ಇಡೀ ಶಾಮ್ಲಿಯ ಮೊಹಲ್ಲಾ ನಾಲಾ ಪಟರಿ ಬೆಚ್ಚಿ ಬಿದ್ದಿದೆ. ಮೃತ ಗಾಯಕ ಅಂಕಿತ್ ಬಾಲಿಯಾನ್ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದ್ದು, ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.














