Last Updated:
13 ವರ್ಷದ ಬಾಲಕಿ ತೆಂಗಿನಕಾಯಿ ಖರೀದಿಸಲು ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆಗೆ ಹೋಗಿದ್ದಳು. ತೆಂಗಿನಕಾಯಿ ಖರೀದಿಸಿದ ನಂತರ ಅವಳು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಸುಮಾರು ನಾಲ್ವರು ಯುವಕರು ಎಸ್‌ಯುವಿಯಲ್ಲಿ ಬಂದು ಅವಳನ್ನು ವಾಹನದೊಳಗೆ ಎಳೆದುಕೊಂಡು ವೇಗವಾಗಿ ಎಸ್ಕೇಪ್ ಅದರು ಎಂದು ತಿಳಿದು ಬಂದಿದೆ.
ಪಾಟ್ನಾ: ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯನ್ನು ಯುವಕರ ಗುಂಪೊಂದು ಅಪಹರಿಸಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.
ಸದ್ಯ ಬಾಲಕಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರೂ, ಆಕೆಯ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಇದುವರೆಗೆ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ಸಂಜೆ ಜಿಲ್ಲೆಯ ಸಹಾರ್‌ನಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಬಾಲಕಿ ತೆಂಗಿನಕಾಯಿ ಖರೀದಿಸಲು ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆಗೆ ಹೋಗಿದ್ದಳು. ತೆಂಗಿನಕಾಯಿ ಖರೀದಿಸಿದ ನಂತರ ಅವಳು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಸುಮಾರು ನಾಲ್ವರು ಯುವಕರು ಎಸ್‌ಯುವಿಯಲ್ಲಿ ಬಂದು ಅವಳನ್ನು ವಾಹನದೊಳಗೆ ಎಳೆದುಕೊಂಡು ವೇಗವಾಗಿ ಎಸ್ಕೇಪ್ ಅದರು ಎಂದು ತಿಳಿದು ಬಂದಿದೆ.
ಸಂತ್ರಸ್ತೆಯನ್ನು ಹತ್ತಿರದ ಕಾಡಿನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಲಾಯಿತು. ಅಲ್ಲಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು, ಅಪರಾಧಿಗಳು ಕೃತ್ಯ ಎಸಗಿ ನಂತರ ಅಲ್ಲಿಂದ ಪರಾರಿಯಾಗಿದ್ದರು. ನಂತರ ಆಕೆ ತನ್ನ ಮನೆಗೆ ತಲುಪಿ ತನ್ನ ಕುಟುಂಬದವರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಬಳಿಕ ಆಕೆಯ ಕುಟುಂಬ, ಪರಿಚಯಸ್ಥರು ಮತ್ತು ಸ್ಥಳೀಯರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಕೃತ್ಯ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ಬಾಲಕಿಯನ್ನು ಅರಾದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಅಪರಾಧದಲ್ಲಿ ಭಾಗಿಯಾಗಿರುವ ಯುವಕರಲ್ಲಿ ತನ್ನ ಸಹ-ಗ್ರಾಮಸ್ಥನೊಬ್ಬ ಇದ್ದಾನೆ ಎಂದು ಸಂತ್ರಸ್ತೆ ಗುರುತಿಸಿದ್ದಾರೆ.
‘ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಾವು ಒಬ್ಬ ಅಪರಿಚಿತ ಮತ್ತು ಮೂವರು ಅಪರಿಚಿತ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಅವರನ್ನು ಬಂಧಿಸಲು ನಮ್ಮ ತಂಡಗಳನ್ನು ಕಳುಹಿಸಿದ್ದೇವೆ. ಅಪರಾಧ ನಡೆದ 24 ಗಂಟೆಗಳ ಒಳಗೆ ಬಸಿದಿಹರಿ ಗ್ರಾಮದ ನಿವಾಸಿ ಸಂತು ಕುಮಾರ್ ಎಂಬಾತನನ್ನು ಬಂಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ’ ಎಂದು ಸಹರ್ ಠಾಣೆಯ ಠಾಣೆ ಅಧಿಕಾರಿ (ಎಸ್‌ಎಚ್‌ಒ) ಸುಬೋಧ್ ಕುಮಾರ್ ತಿಳಿಸಿದ್ದಾರೆ ಎಂದು ಈಟಿವಿ ಭಾರತ್ ವರದಿ ಮಾಡಿದೆ.
ಇತರ ಎಲ್ಲಾ ಆರೋಪಿಗಳನ್ನು ಈಗ ಗುರುತಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸುಬೋಧ್ ಹೇಳಿದರು. ನ್ಯಾಯಕ್ಕಾಗಿ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ಕಳುಹಿಸುವ ಬಗ್ಗೆ ಪೊಲೀಸರು ಯೋಚಿಸುತ್ತಿದ್ದಾರೆ.













