Cricketers Cars: ಸಚಿನ್-ಧೋನಿ-ವಿರಾಟ್ ಅಲ್ಲ! ಟೀಮ್ ಇಂಡಿಯಾದ ಈ ಆಟಗಾರನೇ ಲಕ್ಷುರಿ ಕಾರಿನ ಒಡೆಯ! | ಕ್ರೀಡಾ ಸುದ್ದಿ | ACTPnews

ಫೆರಾರಿ 12ಸಿಲಿಂಡ್ರಿ


Last Updated:

ವಿರಾಟ್ ಕೊಹ್ಲಿಯಿಂದ ರೋಹಿತ್ ಶರ್ಮಾವರೆಗೆ, ಅನೇಕ ಟೀಮ್ ಇಂಡಿಯಾ ಆಟಗಾರರ ಕಾರುಗಳು ಆಗಾಗ್ಗೆ ಸುದ್ದಿಯಾಗುತ್ತವೆ. ಇಂದು, ಯಾವ ಟೀಮ್ ಇಂಡಿಯಾ ಆಟಗಾರ ಅತ್ಯಂತ ದುಬಾರಿ ಕಾರನ್ನು ಹೊಂದಿದ್ದಾರೆಂದು ತಿಳಿಯೋಣ ಬನ್ನಿ.

ಫೆರಾರಿ 12ಸಿಲಿಂಡ್ರಿ
ಫೆರಾರಿ 12ಸಿಲಿಂಡ್ರಿ

ಟೀಮ್ ಇಂಡಿಯಾ (Team India) ಆಟಗಾರರು ತಮ್ಮ ಆಟಗಳಿಂದ ಮಾತ್ರವಲ್ಲದೆ ವೈಯಕ್ತಿಕ ಜೀವನದಿಂದ ಕೂಡ ಅಭಿಮಾನಿಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಅಭಿಮಾನಿಗಳು (Fans) ಯಾವಾಗಲೂ ತಮ್ಮ ನೆಚ್ಚಿನ ಆಟಗಾರರು ಹೊಂದಿರುವ ಕಾರುಗಳನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ವಿರಾಟ್ ಕೊಹ್ಲಿ(Virat Kohli)ಯಿಂದ ರೋಹಿತ್ ಶರ್ಮಾ(Rohit Sharma)ವರೆಗೆ, ಅನೇಕ ಟೀಮ್ ಇಂಡಿಯಾ ಆಟಗಾರರ ಕಾರುಗಳು ಆಗಾಗ್ಗೆ ಸುದ್ದಿಯಾಗುತ್ತವೆ. ಇಂದು, ಯಾವ ಟೀಮ್ ಇಂಡಿಯಾ ಆಟಗಾರ ಅತ್ಯಂತ ದುಬಾರಿ ಕಾರನ್ನು ಹೊಂದಿದ್ದಾರೆಂದು ತಿಳಿಯೋಣ ಬನ್ನಿ.

ಅನೇಕ ದಿಗ್ಗಜ ಭಾರತೀಯ ಕ್ರಿಕೆಟಿಗರು ಇಷ್ಟು ದುಬಾರಿ ಕಾರು ಹೊಂದಿಲ್ಲ. ವರದಿಗಳ ಪ್ರಕಾರ, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಅವರ ಬಳಿಯೂ ಇದಕ್ಕಿಂತ ದುಬಾರಿ ಕಾರು ಇಲ್ಲ. ಈ ಯುವ ಭಾರತೀಯ ಕ್ರಿಕೆಟಿಗನ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಸೂಪರ್ ಕಾರು ಇದೆ. ಅದರ ವೇಗ ಮತ್ತು ಬೆಲೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಲಕ್ಷುರಿ ಕಾರಿನ ಒಡೆಯ ಯಾರು?

ಟೀಮ್ ಇಂಡಿಯಾ ಸ್ಟಾರ್ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವಿಶ್ವದ ಅತ್ಯಂತ ದುಬಾರಿ ಮತ್ತು ಐಷಾರಾಮಿ ಕಾರುಗಳ ಕಲೆಕ್ಷನ್ ಹೊಂದಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಹುರಾಕನ್ ಇವಿಒ, ಲಂಬೋರ್ಘಿನಿ ಉರುಸ್, ಮರ್ಸಿಡಿಸ್-ಎಎಂಜಿ ಜಿ63, ರೇಂಜ್ ರೋವರ್ ವೋಗ್ ಮತ್ತು ಆಡಿ ಎ6 ಮುಂತಾದ ಕಾರುಗಳಿವೆ. ಆದರೆ, ಅತ್ಯಂತ ದುಬಾರಿ ಅಂದರೆ, ಫೆರಾರಿ 12ಸಿಲಿಂಡ್ರಿ.

ಎರಡನೇ ಕಾರು ಯಾರದ್ದು?

ಮಿಂಚಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಭಾರತದ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಕಾರು ಸಂಗ್ರಹಕ್ಕಾಗಿ ಸುದ್ದಿಯಲ್ಲಿದ್ದಾರೆ. ವರದಿಗಳ ಪ್ರಕಾರ, ಅಭಿಷೇಕ್ ಶರ್ಮಾ ಇತ್ತೀಚೆಗೆ ವಿಶ್ವದ ಅತ್ಯಂತ ಐಷಾರಾಮಿ ಮತ್ತು ದುಬಾರಿ ಕಾರುಗಳಲ್ಲಿ ಒಂದಾದ ಫೆರಾರಿ ಪುರೋಸಾಂಗ್ ಅನ್ನು ಖರೀದಿಸಿದ್ದಾರೆ. ದೆಹಲಿಯಲ್ಲಿ ಈ ಕಾರಿನ ಆನ್-ರೋಡ್ ಬೆಲೆ ಸುಮಾರು 11.42 ಕೋಟಿ ರೂ.

ಫೆರಾರಿ 12 ಸಿಲಿಂಡ್ರಿ ಕಾರಿನ ವಿಶೇಷತೆ

  • ಫೆರಾರಿ 12 ಸಿಲಿಂಡ್ರಿ ಕಾರು ಹಲವಾರು ವಿಶೇಷತೆಗಳನ್ನು ಹೊಂದಿದೆ. ಈ ಕಾರಿನ ಹೆಸರೇ ಸೂಚಿಸುವಂತೆ, ಇದು 6.5-ಲೀಟರ್ ಸಾಮರ್ಥ್ಯದ ನೈಸರ್ಗಿಕವಾಗಿ ಆಸ್ಪಿರೇಟೆಡ್ (Naturally Aspirated) V12 ಇಂಜಿನ್ ಹೊಂದಿದೆ. ಇದು ಯಾವುದೇ ಟರ್ಬೋಚಾರ್ಜರ್ ಇಲ್ಲದೆ, 819 BHP ಶಕ್ತಿ ಮತ್ತು 678 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
  • ವೇಗದ ವಿಷಯದಲ್ಲಿ ಈ ಕಾರಿನ ಬಗ್ಗೆ ಮಾತುನಾಡುವಂತೆಯೇ ಇಲ್ಲ. ಇದು ಕೇವಲ 2.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು. ಹಾಗೆಯೇ ಇದರ ಗರಿಷ್ಠ ವೇಗ ಗಂಟೆಗೆ 340 ಕಿ.ಮೀ ಗಿಂತಲೂ ಹೆಚ್ಚಿದೆ. ಇದರ ವಿನ್ಯಾಸವು 1960ರ ದಶಕದ ಫೆರಾರಿ 365 GTB/4 ‘ಡೇಟೋನಾ’ ಕಾರಿನಿಂದ ಸ್ಫೂರ್ತಿ ಪಡೆದಿದೆ. ಉದ್ದವಾದ ಬಾನೆಟ್ ಮತ್ತು ಮುಂದೆ ಕಪ್ಪು ಪಟ್ಟಿಯು ವಿಂಟೇಜ್ ಲುಕ್ ನೀಡುತ್ತದೆ.
  • ಕಾರಿನ ಹಿಂಭಾಗದಲ್ಲಿ ಎರಡು ಆಕ್ಟೀವ್ ಫ್ಲಾಪ್‌ಗಳನ್ನು (Active Flaps) ನೀಡಲಾಗಿದೆ. ಇವು ಹೆಚ್ಚಿನ ವೇಗದಲ್ಲಿ ಚಲಿಸುವಾಗ ಗಾಳಿಯ ಒತ್ತಡವನ್ನು ನಿಯಂತ್ರಿಸಿ, ಕಾರು ರಸ್ತೆಗೆ ಅಂಟಿಕೊಂಡಂತೆ ಸ್ಥಿರವಾಗಿ ಸಾಗಲು (Downforce) ಸಹಾಯ ಮಾಡುತ್ತವೆ.
  • ಕಾರಿನ ಒಳಭಾಗದಲ್ಲಿ ನೋಡುವುದಾರೆ, ಚಾಲಕ ಮತ್ತು ಪ್ರಯಾಣಿಕರಿಗೆ ಪ್ರತ್ಯೇಕ ಅನುಭವ ನೀಡಲು ಮೂರು ಸ್ಕ್ರೀನ್‌ಗಳನ್ನು ನೀಡಲಾಗಿದೆ. 10.25-ಇಂಚಿನ ಸೆಂಟ್ರಲ್ ಡಿಸ್‌ಪ್ಲೇ, 15.6-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು ಪ್ರಯಾಣಿಕರಿಗಾಗಿ 8.8-ಇಂಚಿನ ಪ್ರತ್ಯೇಕ ಸ್ಕ್ರೀನ್ ಇದೆ.
  • ಈ ಕಾರಿನ ಮತ್ತೊಂದು ವಿಶೇಷತೆ ಎಂದರೆ, ‘ಫೋರ್-ವ್ಹೀಲ್ ಇಂಡಿಪೆಂಡೆಂಟ್ ಸ್ಟೀರಿಂಗ್’ ತಂತ್ರಜ್ಞಾನವಿದೆ. ಇದು ತಿರುವುಗಳಲ್ಲಿ ಕಾರನ್ನು ಅತ್ಯಂತ ನಿಖರವಾಗಿ ಮತ್ತು ಸುಲಭವಾಗಿ ನಿಯಂತ್ರಿಸಲು ಚಾಲಕನಿಗೆ ನೆರವಾಗುತ್ತದೆ. ಇದರಿಂದ ಕಾರಿನ ಹ್ಯಾಂಡ್ಲಿಂಗ್ ತುಂಬಾ ಸುಲಭವಾಗಿರುತ್ತದೆ. ಡ್ರೈವ್ ಮಾಡಲು ಅದ್ಭುತವಾಗಿರುತ್ತದೆ.



Source link

Leave a Reply

Your email address will not be published. Required fields are marked *