Cricket Controversy: ನನ್ನ ಪತ್ನಿಗೆ ಆ ಕ್ರಿಕೆಟರ್ ಜೊತೆ ಅನೈತಿಕ ಸಂಬಂಧವಿದೆ! ಆಸೀಸ್ ಆಲ್​ರೌಂಡರ್ ಮೇಲೆ ಸಂಗಾತಿಯಿಂದ ಗಂಭೀರ ಆರೋಪ | ಕ್ರೀಡಾ ಸುದ್ದಿ | ACTPnews

ಮೋನಿಕಾ ರೈಟ್- ಆಶ್ಲೀ ಗಾರ್ಡ್ನರ್​


Last Updated:

ಗಾರ್ಡ್ನರ್ ತಮ್ಮದೇ ತಂಡದ ಸಹ ಕ್ರಿಕೆಟರ್​ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಅವರ ಪಾರ್ಟ್ನರ್​ ಮೋನಿಕಾ ರೈಟ್ ಆರೋಪಿಸಿದ್ದಾರೆ.

ಮೋನಿಕಾ ರೈಟ್- ಆಶ್ಲೀ ಗಾರ್ಡ್ನರ್​
ಮೋನಿಕಾ ರೈಟ್- ಆಶ್ಲೀ ಗಾರ್ಡ್ನರ್​

ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್​ ಮತ್ತು ಮಹಿಳಾ ತಂಡದ ಉಪನಾಯಕಿ ಆಶ್ಲೀ ಗಾರ್ಡ್ನರ್ (Ashleigh Gardner) ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಗಾರ್ಡ್ನರ್ ತಮ್ಮದೇ ತಂಡದ ಸಹ ಕ್ರಿಕೆಟರ್​ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಅವರ ಪಾರ್ಟ್ನರ್​ ಮೋನಿಕಾ ರೈಟ್ ಆರೋಪಿಸಿದ್ದಾರೆ. ಆಶ್ಲೀ ಗಾರ್ಡ್ನರ್ ಮತ್ತು ಮೋನಿಕಾ ರೈಟ್ (Monica Wright) 2020 ರಲ್ಲಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಭೇಟಿಯಾಗಿ ನಂತರ ವಿವಾಹವಾಗಿದ್ದರು.

5 ವರ್ಷಗಳ ಡೇಟಿಂಗ್ ನಂತರ ವಿವಾಹ

ಸುಮಾರು ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಈ ಸಲಿಂಗಿ ಜೋಡಿ ಏಪ್ರಿಲ್ 2025 ರಲ್ಲಿ ವಿವಾಹವಾದರು. ವಿವಾಹ ಸಮಾರಂಭವು ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಭಾಗವಹಿಸಿದ ಅದ್ಧೂರಿ ಸಮಾರಂಭವಾಗಿತ್ತು. ಆದರೆ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ಮತ್ತು ಅಂದಿನಿಂದ ಅವರು ಬೇರೆಯಾಗಿ ವಾಸಿಸುತ್ತಿದ್ದಾರೆ ಎಂದು ಬ್ರಿಟನ್​​ನ ಡೈಲಿ ಮೇಲ್ ಪತ್ರಿಕೆ ವರದಿ ಮಾಡಿತ್ತು. ಇದೀಗ ರೈಟ್ ಇನ್​ಸ್ಟಾಗ್ರಾಮ್ ಪೋಸ್ಟ್​ ಅದನ್ನ ನಿಜ ಎಂದು ರುಜು ಮಾಡಿದೆ.

ಗಾರ್ಡ್ನರ್​ ತನ್ನೊಂದಿಗೆ ಸರಿಯಾಗಿ ಮಾತನಾಡಲಿಲ್ಲ. ಆಶ್ಲೇ ತಮ್ಮ ಮದುವೆಯ ಉಂಗುರವನ್ನು ಧರಿಸುವುದನ್ನು ನಿಲ್ಲಿಸಿದ್ದರು. ಅದನ್ನ ಕಾಬೋರ್ಡ್​​ನಲ್ಲಿ ಇಟ್ಟಿದ್ದಾರೆ ಎಂದು ಮೋನಿಕಾ ಇತರರ ಮೂಲಕ ತಿಳಿದುಕೊಂಡಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

ನನ್ನ ಪತ್ನಿಯೊಂದಿಗೆ ಆ ಕ್ರಿಕೆಟರ್ ವಿವಾಹೇತರ ಸಂಬಂಧ

ಡೈಲಿ ಮೇಲ್ ವರದಿಯನ್ನು ಅಸ್ಪಷ್ಟ ಎಂದಿರುವ ರೈಟ್ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾದ ಯುವ ಆರಂಭಿಕ ಆಟಗಾರ್ತಿ ಜಾರ್ಜಿಯಾ ವೋಲ್ ಅವರ ಫೋಟೋವನ್ನು ಹಂಚಿಕೊಂಡಿರುವ ಮೋನಿಕಾ, “ನನ್ನ ಪತ್ನಿ ಈಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಈಕೆಗಾಗಿಯೇ ಅವಳು ನನಗೆ ಮೋಸ ಮಾಡಿದ್ದಾಳೆ” ಎಂದು ಬರೆದುಕೊಂಡಿದ್ದಾರೆ.

ವಿಶ್ವಕಪ್ ಗೆದ್ದ ಸಂಭ್ರಮದಲ್ಲಿದ್ದ ಗಾರ್ಡ್ನರ್​​ಗೆ ಶಾಕ್

ಆಸ್ಟ್ರೇಲಿಯಾ ತಂಡ ದಾಖಲೆಯ ಏಳನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಗೆಲುವಿನಲ್ಲಿ ಆಶ್ಲೀ ಗಾರ್ಡ್ನರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಈ ಸಂಭ್ರಮದ ಮಧ್ಯೆ ಗಾರ್ಡ್ನರ್​ ಅವರ ಸಂಗಾತಿ ಮೋನಿಕಾ ಮಾಡಿರುವ ಈ ವಿವಾಹೇತರ ಸಂಬಂಧದ ಆರೋಪಗಳು ಸಾಕಷ್ಟು ವೈರಲ್ ಆಗಿವೆ. ಮದುವೆಯಾದ ಸ್ವಲ್ಪ ಸಮಯದ ನಂತರ ಮಕ್ಕಳನ್ನು ಹೊಂದುವ ಬಗ್ಗೆ ನಿರ್ಧಾರಗಳ ಬಗ್ಗೆ ಆಶ್ಲೀ ಮತ್ತು ಮೋನಿಕಾ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ಎಂಬ ಮಾಹಿತಿಯೂ ಇದೆ.

ಇದನ್ನೂ ಓದಿ: ICC T20 Rank: ಸತತ ಎರಡು ಟಿ20 ಸರಣಿಯಲ್ಲಿ ಸೋಲು! 1605 ದಿನಗಳ ನಂತರ ನಂಬರ್ 1 ಪಟ್ಟ ಕಳೆದುಕೊಂಡ ಭಾರತ

ಈ ಸ್ಫೋಟಕ ಆರೋಪದ ನಂತರ ಮೋನಿಕಾ ರೈಟ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆಯ ಫೋಟೋಗಳು ಸೇರಿದಂತೆ ಗಾರ್ಡ್ನರ್​ ಅವರೊಂದಿಗಿನ ಎಲ್ಲಾ ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ. ಸದ್ಯಕ್ಕೆ ಈ ಆರೋಪಗಳ ಕುರಿತು ಆಶ್ಲೀ ಗಾರ್ಡ್ನರ್ ಆಗಲಿ, ಜಾರ್ಜಿಯಾ ವೋಲ್ ಆಗಲಿ ಅಥವಾ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಮಂಡಳಿಯಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed